Viral Post: ನರೇಂದ್ರ ಮೋದಿ ಗೆಲುವನ್ನು ಸಂಭ್ರಮಿಸಲು ಪಟಾಕಿ, 10 ಸಾವಿರ ಲಡ್ಡು ಸಿದ್ಧಗೊಳಿಸಿದ ಅಭಿಮಾನಿಗಳು
ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಇದೀಗ ಇಡೀ ದೇಶದ ಚಿತ್ತ ನಾಳಿನ ಚುನಾವಣಾ ಫಲಿತಾಂಶದ ಮೇಲಿದ್ದು, ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ನಡುವೆ ಮೋದಿ ಜೀ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಮೀಕ್ಷಾ ವದರಿಗಳು ಹೇಳುತ್ತಿವೆ. ಈ ಖುಷಿಯನ್ನು ಸಂಭ್ರಮಿಸಲು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಇದಾಗಲೇ ಭರ್ಜರಿ ತಯಾರಿ ನಡೆಸಿದ್ದು, ಈ ಕುರಿತ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
2024 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಶುರುವಾಗಿದ್ದು, ಇದೀಗ ಇಡೀ ದೇಶದ ಚಿತ್ತ ನಾಳೆ ನಡೆಯಲಿರುವ ಚುನಾವಣಾ ಫಲಿತಾಂಶದ ಮೇಲಿದೆ. ಜೊತೆಜೊತೆಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎನ್ನುವ ಕುತೂಹಲ ಕೂಡಾ ಹೆಚ್ಚಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ. ಇದೇ ಖುಷಿಯಲ್ಲಿ ಮೋದಿ ಗೆಲುವನ್ನು ಸಂಭ್ರಮಿಸಲು ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭರ್ಜರಿ ತಯಾರಿಯನ್ನು ನಡೆಸಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿಯವರ ಗೆಲುವನ್ನು ಸಂಭ್ರಮಿಸಲು ಇದಾಗಲೇ ತಯಾರಿ ಆರಂಭವಾಗಿದ್ದು, ಗುಜರಾತ್‌ನಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹಲವಾರು ಚಿತ್ರಮಂದಿರಗಳಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಸಾರ ಮಾಡಲು ಸಿದ್ಧತೆ ನಡೆಯುತ್ತಿದೆ. ಇನ್ನೊಂದೆಡೆ ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಸಂಭ್ರಮಿಸಲು ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ನಾಳೆಯ ಸಂಭ್ರಮಾಚರಣೆಗೆ ಮುಂಬೈನ ಶ್ರೀ ಗಣೇಶ್ ಭಂಡಾರ್ ಸ್ವೀಟ್ ಅಂಗಡಿಯಲ್ಲಿ 10 ಸಾವಿರ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.
ಇದನ್ನೂ ಓದಿ: ಮೊಬೈಲ್ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ ಕರೆಂಟ್ ಶಾಕ್ ಕೊಟ್ಟ ಪತ್ನಿ
ವೈರಲ್ ಪೋಸ್ಟ್ ಇಲ್ಲಿದೆ:
BIG BREAKING NEWS 🚨 Massive celebrations across India from tomorrow. PM Modi is returning 🔥🔥
Diwali like celebrations in many parts of India from tomorrow 🎉🎇
Several theatres in Gujarat will telecast Election results on big screen due to public demand.
10,000 laddos being… pic.twitter.com/mlCW2Z1UiL
— Times Algebra (@TimesAlgebraIND) June 3, 2024
TimesAlebraIND ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಶೇಷ ಪೋಸ್ಟ್ 95 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಾವುಗಳು ಕೂಡಾ ಮೋದಿ ಜೀ ಗೆಲುವಿನ ಹಬ್ಬವನ್ನು ಸಂಭ್ರಮಿಸಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ