Viral: ಮೊಬೈಲ್‌ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ  ಕರೆಂಟ್‌ ಶಾಕ್‌ ಕೊಟ್ಟ ಪತ್ನಿ 

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸದಾ ಕಾಲ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದ ಮಹಿಳೆಯ ಮೊಬೈಲ್‌ ಅನ್ನು ಆಕೆಯ ಪತಿ ಕಸಿದುಕೊಂಡಿದ್ದು, ಇದರಿಂದ ಕೋಪಗೊಂಡ ಆ ಮಹಿಳೆ ತನ್ನ ಪತಿರಾಯನಿಗೆ ನಿದ್ರೆ ಮಾತ್ರೆ ನೀಡಿ ಮಂಚಕ್ಕೆ ಕಟ್ಟಿ ಹಾಕಿ ಥಳಿಸಿದ್ದು ಮಾತ್ರವಲ್ಲದೆ, ಆತನಿಗೆ ಕರೆಂಟ್‌ ಶಾಕ್‌ ಕೊಟ್ಟು ಚಿತ್ರ ಹಿಂಸೆ ನೀಡಿದ್ದಾಳೆ.

Viral: ಮೊಬೈಲ್‌ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ  ಕರೆಂಟ್‌ ಶಾಕ್‌ ಕೊಟ್ಟ ಪತ್ನಿ 
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 03, 2024 | 3:05 PM

ಪತಿ ಪತ್ನಿಯರ ನಡುವೆ ಮನಸ್ತಾಪ, ಸಣ್ಣಪುಟ್ಟ ಜಗಳಗಳು ಇದ್ದಿದ್ದೆ.  ಈ ಮನಸ್ತಾಪಗಳು ಅತಿರೇಕಕ್ಕೆ ಹೋದರೆ ಅಲ್ಲಿ ಅಪಾಯ ಸಂಭವಿಸುವುದಂತೂ ನಿಶ್ಚಿತ. ಸದ್ಯ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಪತಿ ಫೋನ್‌ ಬಳಸಲು ಬಿಡಲಿಲ್ಲವೆಂದು ಮಹಿಳೆಯೊಬ್ಬಳು  ತನ್ನ ಪತಿರಾಯನಿಗೆ  ನಿದ್ರೆ ಮಾತ್ರೆ ನೀಡಿ, ಆತನ ಕೈಕಾಲನ್ನು ಮಂಚಕ್ಕೆ ಕಟ್ಟಿ ಥಳಿಸಿದ್ದು ಮಾತ್ರವಲ್ಲದೆ, ಆತನಿಗೆ ಕರೆಂಟ್‌ ಶಾಕ್‌ ಕೊಟ್ಟು ಚಿತ್ರಹಿಂಸೆ ನೀಡಿದ್ದಾಳೆ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಈ ಶಾಕಿಂಗ್‌ ಘಟನೆ ನಡೆದಿದ್ದು, 33 ವರ್ಷದ ಮಹಿಳೆಯೊಬ್ಬಳು ತನ್ನ ಫೋನ್‌ ಕಿತ್ತುಕೊಂಡ ಪತಿರಾಯನಿಗೆ ಕರೆಂಟ್‌ ಶಾಕ್‌ ನೀಡಿದ್ದಾಳೆ. ಆಕೆ ಮೊದಲು ಪತಿಗೆ ನಿದ್ರೆ ಮಾತ್ರೆ ನೀಡಿ ಆತನನ್ನು ಮಂಚಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಥಳಿಸಿ ನಂತರ  ಕರೆಂಟ್‌ ಶಾಕ್‌ ನೀಡಿದ್ದಾಳೆ. ತಂದೆಯ ರಕ್ಷಣೆಗಾಗಿ ಹೋದಂತಹ 14 ವರ್ಷದ ಮಗನಿಗೂ ಆಕೆ ಮನಬಂದಂತೆ ಥಳಿಸಿದ್ದಾಳೆ.

ಪ್ರದೀಪ್‌ ಸಿಂಗ್‌ ಸೈಫೈ ಎಂಬವರು ಪತ್ನಿಯಿಂದ ಹಲ್ಲೆಗೊಳಗಾದ ವ್ಯಕ್ತಿ. ಪ್ರದೀಪ್‌ 2007 ರಲ್ಲಿ ಬೇಬಿ ಯಾದವ್‌ ಎಂಬಾಕೆಯನ್ನು ಮದುವೆಯಾಗಿರುತ್ತಾರೆ. ಇತ್ತೀಚಿಗೆ ಪತ್ನಿ ಹೆಚ್ಚು ಸಮಯ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಿರುವುದನ್ನು ಗಮನಿಸಿದ ಪ್ರದೀಪ್‌, ಈಕೆ ಯಾರೊಂದಿಗೋ ಮಾತನಾಡುತ್ತಿರುತ್ತಾಳೆ ಎಂದು ಜಾಸ್ತಿ ಮೊಬೈಲ್‌ ಬಳಸಬಾರದೆಂದು ವಾರ್ನಿಂಗ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ ಮೊಬೈಲ್‌ ಫೋನ್‌ನ್ನು ಕೂಡಾ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಿಗೊಳಗಾದ ಪತ್ನಿ ಪ್ರದೀಪ್‌ ಅವರಿಗೆ ನಿದ್ರೆ ಮಾತ್ರೆ ಕೊಟ್ಟು ಹಾಸಿಗೆಯಲ್ಲಿ ಕೈಕಾಲು ಕಟ್ಟಿ ಮಲಗಿಸಿ, ಮನಬಂದಂತೆ ಥಳಿಸಿದ್ದು ಮಾತ್ರವಲ್ಲದೆ ಕರೆಂಟ್‌ ಶಾಕ್‌ ಕೂಡಾ ನೀಡಿದ್ದಾಳೆ. ಇದನ್ನು ತಡೆಯಲು ಬಂದಂತಹ ಮಗನಿಗೂ ಕೂಡಾ ಆಕೆ ಥಳಿಸಿದ್ದಾಳೆ.

ಇದನ್ನೂ ಓದಿ: ನನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ಬೆಲೆಯ ಬಂಗಲೆ, 50 ಲಕ್ಷ ಎಫ್‌.ಡಿ; ಬಿಗ್ ಆಫರ್ ನೀಡಿದ ತಂದೆ

ಪತ್ನಿಯ ಹಲ್ಲೆಯಿಂದ ಗಂಭೀರ ಗಾಯಗೊಂಡ ಪ್ರದೀಪ್‌ ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿ ಬೇಬಿ ಯಾದವ್‌ ವಿರುದ್ಧ ಐಪಿಸಿ ಎಕ್ಷನ್‌ 307 (ಕೊಲೆ ಯತ್ನ), ಐಪಿಸಿ ಸೆಕ್ಷನ್‌ 308, ಹಾಗೂ 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಿಶ್ನೆ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ