Viral Video: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನ ಪ್ರಾಣ ರಕ್ಷಿಸಿದ ರಿಯಲ್ ಹೀರೋಗಳು; ಇಲ್ಲಿದೆ ರೋಚಕ ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಂತ ಬಾಲಕನನ್ನು ಅಲ್ಲಿನ ಸ್ಥಳೀಯ ಯುವಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಿಯಲ್ ಹೀರೋಗಳೆಂದರೆ ಇವರುಗಳೇ ಅಲ್ಲವೇ ಎಂದು ಬಾಲಕನ ಪ್ರಾಣ ರಕ್ಷಿಸಿದ ಯುವಕರ ಕಾರ್ಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ತುಂಬಿ ಹರಿಯುತ್ತಿರುವ ನದಿ, ಕೆರೆ ಕಟ್ಟೆಗಳ ಬಳಿ ಎಷ್ಟು ಜೋಪಾನವಾಗಿದ್ದರೂ ಕಮ್ಮಿಯೇ. ಹೀಗೆ ನದಿ ದಡದ ಬಳಿ ಹೋದವರು ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ಅದೆಷ್ಟೋ ಘಟನೆಗಳು ನಡೆದಿವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ನದಿ ದಡದ ಬಳಿ ಆಟವಾಡುತ್ತಿದ್ದಂತ ಬಾಲಕ ಆಯತಪ್ಪಿ ನದಿಗೆ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯ ಯುವಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಾಲಕನನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ನಡೆದಿದ್ದು, ಇಲ್ಲಿನ ಸಫಗತಲ್ ಪ್ರದೇಶದ ಸ್ಥಳೀಯ ನಿವಾಸಿಗಳು ಝೀಲಂ ನದಿಗೆ ಬಿದ್ದ ಏಳು ವರ್ಷದ ಬಾಲಕನ ಪ್ರಾಣ ರಕ್ಷಿಸಿದ್ದಾರೆ. ನದಿಯ ದಡದಲ್ಲಿ ಆಟವಾಡುತ್ತಿದ್ದ ಬಾಲಕ ಏಕಾಏಕಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಸ್ಥಳೀಯ ಯುವಕರು ನದಿಗೆ ಹಾರಿ ಬಾಲಕನ್ನು ನೀರಿನಿಂದ ಮೇಲಕ್ಕೆತ್ತಿ, ನಂತರ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ ಬಾಲಕನಿಗೆ ಸಿಪಿಆರ್ ಮಾಡುವ ಮೂಲಕ ಆತನ ಪ್ರಾಣ ರಕ್ಷಣೆ ಮಾಡಿದ್ದಾರೆ. ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಕಷ್ಟಕ್ಕೆ ಸ್ಪಂದಿಸುವ ಎಷ್ಟೋ ಜನ ಸೂಪರ್ ಹೀರೋಗಳಿರುತ್ತಾರೆ ಎಂಬುದನ್ನು ಈ ಘಟನೆ ಸಾಬೀತು ಮಾಡಿದೆ.
ಇದನ್ನೂ ಓದಿ: ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ; ಬಿಸಿಲಿನ ತಾಪದಿಂದ ಕಂದಮ್ಮನನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ತಾಯಿ ಪಾರಿವಾಳ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
#Kashmir: Locals saved 7 year old child after he slipped in river Jhelum river at Safakadal in Srinagar. pic.twitter.com/iaci0p6nC1
— Jammu Kashmir News Network 🇮🇳 (@TheYouthPlus) May 26, 2024
@TheYouthPlus ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಥಳೀಯರು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ 7 ವರ್ಷದ ಬಾಲಕನ ಪ್ರಾಣ ರಕ್ಷಿಸುವಂತಹ ದೃಶ್ಯವನ್ನು ಕಾಣಬಹುದು. ಮೇ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಯುವಕರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Mon, 3 June 24