AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ಬೆಲೆಯ ಬಂಗಲೆ, 50 ಲಕ್ಷ ಎಫ್‌.ಡಿ; ಬಿಗ್ ಆಫರ್ ನೀಡಿದ ತಂದೆ

ಸೋಷಿಯಲ್‌ ಮೀಡಿಯಾದಲ್ಲಿ ಕೆಲವೊಮ್ಮೆ ಅಚ್ಚರಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದು ನಿಜ ಸುದ್ದಿಯೇ ಅಥವಾ ಸುಳ್ಳು ಸುದ್ದಿಯೇ ಎಂದು ನಂಬಲು ಸಹ ಅಸಾಧ್ಯವಾಗಿರುತ್ತದೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬರು ತನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ಬೆಲೆಯ ಬಂಗಲೆ ನೀಡುತ್ತೇನೆ ಎಂದು ಗಂಡು ಮಕ್ಳಿಗೆ ಬಿಗ್‌ ಆಫರ್‌ ಒಂದನ್ನು ನೀಡಿದ್ದಾರೆ. 

Video: ನನ್ನ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ಬೆಲೆಯ ಬಂಗಲೆ, 50 ಲಕ್ಷ ಎಫ್‌.ಡಿ; ಬಿಗ್ ಆಫರ್ ನೀಡಿದ ತಂದೆ
ಮಾಲಾಶ್ರೀ ಅಂಚನ್​
| Edited By: |

Updated on: Jun 03, 2024 | 2:18 PM

Share

ಹೆತ್ತ ಮಗಳಿಗೆ 24-25 ವರ್ಷವಾದರೆ ಸಾಕು ಹೆತ್ತವರಿಗೆ ಮಗಳ ಮದುವೆಯ ಚಿಂತೆ ಸತಾಯಿಸಲಾರಂಭಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ಅದರಲ್ಲೂ ಹುಡುಗನಿಗೆ ಕೈತುಂಬಾ ಸಂಬಳ ಸಿಗುವ ನೌಕರಿಯಿದ್ದರೆ ಸಿಗುವ ಖುಷಿಯೇ ಬೇರೆ. ಯಾಕಂದ್ರೆ ಲೈಫ್‌ ಸೆಟಲ್‌ ಆಗಿರುತ್ತದೆ ಎಂಬ ಕಾರಣಕ್ಕೆ ಸ್ವಲ್ಪ ಶ್ರೀಮಂತ ವರನನ್ನು ಹುಡುಗಿಯ ಮನೆಯವರು ಆಯ್ಕೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಹುಡುಗ ಹೇಗಿದ್ರೂ ಪರವಾಗಿಲ್ಲ, ಆತ ನನ್ನ ಮಗಳನ್ನು ಮದುವೆಯಾದ್ರೆ ಸಾಕು.  ಆತನಿಗೆ 2 ಕೋಟಿಯ ಬಂಗಲೆಯ ಜೊತೆಗೆ 50 ಲಕ್ಷ ಎಫ್.ಡಿ ಕೂಡಾ ನೀಡುತ್ತೇನೆ ಎಂದು ಗಂಡ್‌ ಮಕ್ಳಿಗೆ ಬಿಗ್‌ ಆಫರ್‌ ಒಂದನ್ನು ನೀಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಅಂಕಿತಾ ಪಾಟೇಲ್‌ (@ankita.patel_143) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಡಾಕ್ಟರ್‌ ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾನೋ ಆತನಿಗೆ 2 ಕೋಟಿ ಬೆಲೆಯ ಬಂಗಲೆ, ನಮ್ಮ ಕ್ಲಿನಿಕ್‌ ಮತ್ತು 50 ಲಕ್ಷ ಎಫ್.ಡಿ ಇದೆ ಅದನ್ನು ಆತನ ಹೆಸರಿಗೆ ಬರೆಯುತ್ತೇವೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನ ಪ್ರಾಣ ರಕ್ಷಿಸಿದ ರಿಯಲ್‌ ಹೀರೋಗಳು; ಇಲ್ಲಿದೆ ರೋಚಕ ವಿಡಿಯೋ 

ವೈರಲ್​​ ವಿಡಿಯೋ ಇಲ್ಲಿದೆ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 18.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ನಿಮ್ಮ ಮಗಳನ್ನು ನಾನು ಮದುವೆಯಾಗಲು ರೆಡಿ ಇದ್ದೇನೆ ಎಂದು ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಇನ್‌ಸ್ಟಾಗ್ರಾಮ್‌ ಬರಬರುತ್ತಾ ಮ್ಯಾಟ್ರಿಮೋನಿ ಸೈಟ್‌ ಆಗುತ್ತಿದೆ ಎಂದು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು