Dog Heart Surgery: ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ; ಇದು ಏಷ್ಯಾದಲ್ಲೇ ಮೊದಲು!
7 ವರ್ಷದ ಬೀಗಲ್ ತಳಿಯ ಜೂಲಿಯೆಟ್ ಕಳೆದ ಎರಡು ವರ್ಷಗಳಿಂದ ಮಿಟ್ರಲ್ ವಾಲ್ವ್ (ಹೃದಯ ಸಂಬಂಧಿ ಕಾಯಿಲೆ) ನಿಂದ ಬಳಲುತ್ತಿತ್ತು. ಇದೀಗ ಶಸ್ತ್ರಚಿಕಿತ್ಸೆಯ ಬಳಿಕ ಶ್ವಾನ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಡಾ. ಶರ್ಮಾ ತಿಳಿಸಿದ್ದಾರೆ.
ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ನಾಯಿಯೊಂದಕ್ಕೆ ದೆಹಲಿಯ ಪಶುವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಭಾರತದಲ್ಲಿ ಅಲ್ಲದೇ ಇಡೀ ಏಷ್ಯಾದಲ್ಲೇ ನಾಯಿಯೊಂದಕ್ಕೆ ಹೃದಯ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಎಂದು ಪಶುವೈದ್ಯರು ಜೂಲಿಯೆಟ್‌ಗೆ ದೆಹಲಿಯ ಮ್ಯಾಕ್ಸ್ ಪೆಟ್ಜ್ ಆಸ್ಪತ್ರೆಯ ಡಾ. ಭಾನು ದೇವ್ ಶರ್ಮಾ ಹೇಳಿದ್ದಾರೆ. 7 ವರ್ಷದ ಬೀಗಲ್ ತಳಿಯ ಜೂಲಿಯೆಟ್ ಕಳೆದ ಎರಡು ವರ್ಷಗಳಿಂದ ಮಿಟ್ರಲ್ ವಾಲ್ವ್ (ಹೃದಯ ಸಂಬಂಧಿ ಕಾಯಿಲೆ) ನಿಂದ ಬಳಲುತ್ತಿತ್ತು. ಇದೀಗ ಶ್ವಾನ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಡಾ. ಶರ್ಮಾ ತಿಳಿಸಿದ್ದಾರೆ.
ಮೇ 30 ರಂದು ಟ್ರಾನ್ಸ್‌ಕ್ಯಾಥೆಟರ್ ಎಡ್ಜ್-ಟು-ಎಡ್ಜ್ ಶಸ್ತ್ರಚಿಕಿತ್ಸೆ ನಡೆದಿದೆ. ಇದು ಹೈಬ್ರಿಡ್ ಶಸ್ತ್ರಚಿಕಿತ್ಸೆಯಾಗಿದ್ದು, ಈ ಶಸ್ತ್ರಚಿಕಿತ್ಸೆಯಲ್ಲಿ, ದೇಹದಲ್ಲಿ ಗಾಯ ಮಾಡದೆಯೇ ರಕ್ತನಾಳದ ಮೂಲಕ ಉಪಕರಣವನ್ನು ಹಾದುಹೋಗುವ ಮೂಲಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.
ಇದನ್ನೂ ಓದಿ: ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ
ಮೇ. 30 ರಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎರಡು ದಿನಗಳ ನಂತರ ನಾಯಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ನಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ರೀತಿಯ ಶಸ್ತ್ರಚಿಕಿತ್ಸೆ ಏಷ್ಯಾದಲ್ಲಿ ಮೊದಲ ಬಾರಿಗೆ. ಇದು ವಿಶ್ವದಲ್ಲೇ ಎರಡನೆಯದು ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಮಿಟ್ರಲ್ ವಾಲ್ವ್ ಕಾಯಿಲೆಯು ಭಾರತದಲ್ಲಿ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ನಾಯಿಗಳಲ್ಲಿ ಅತ್ಯಂತ ಸಾಮಾನ್ಯವಾದ ಹೃದಯ ಕಾಯಿಲೆಯಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳು ಸಾಯುವ ಅಪಾಯ ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ