Bra Fence: ಇಲ್ಲಿ ಮಹಿಳೆಯರು ತಮ್ಮ ಬ್ರಾಗಳನ್ನು ಬೇಲಿಯಲ್ಲಿ ನೇತು ಹಾಕುವ ವಿಶಿಷ್ಟ ಸಂಪ್ರದಾಯ
ನ್ಯೂಜಿಲೆಂಡ್ ದೇಶದ ಕಾರ್ಡೋನಾ ಎಂಬ ಪ್ರದೇಶಲ್ಲಿ ಬ್ರಾ ಫೆನ್ಸ್ ಎಂಬ ವಿಶೇಷ ಸ್ಥಳವಿದ್ದು, ಇಲ್ಲಿನ ಬೇಲಿಯಲ್ಲಿ ಮಹಿಳೆಯರು ತಮ್ಮ ಬ್ರಾಗಳನ್ನು ನೇತು ಹಾಕುವಂತಹ ವಿಶಿಷ್ಟ ಸಂಪ್ರದಾಯವಿದೆ. ಅಷ್ಟಕ್ಕೂ ಈ ಸಂಪ್ರದಾಯದ ಹಿನ್ನೆಲೆ ಏನೆಂಬುದನ್ನು ನೋಡೋಣ ಬನ್ನಿ.
ಈ ಪ್ರಪಂಚದಲ್ಲಿನ ಪ್ರತಿಯೊಂದು ದೇಶದಲ್ಲಿಯೂ ವಿಭಿನ್ನವಾದ ಸಂಪ್ರದಾಯ ಆಚರಣೆಗಳು ರೂಢಿಯಲ್ಲಿವೆ. ಅದರಲ್ಲಿ ಕೆಲವು ದೇಶದ ಆಚರಣೆಗಳನ್ನು ನೋಡಿದಾಗ ಇಂತಹ ವಿಚಿತ್ರವಾದ ಸಂಪ್ರದಾಯಗಳನ್ನೂ ಜನರು ಪಾಲಿಸುತ್ತಾರಾ ಎಂದು ನಮಗೆಲ್ಲಾ ಶಾಕ್ ಆಗುತ್ತದೆ. ಅದೇ ರೀತಿ ನ್ಯೂಜಿಲೆಂಡ್ ದೇಶದಲ್ಲಿಯೂ ಒಂದು ವಿಶಿಷ್ಟ ಸಂಪ್ರದಾಯವನ್ನು ಪಾಲಿಸಲಾಗುತ್ತಿದ್ದು, ಇಲ್ಲಿನ ಕಾರ್ಡೋನಾ ಎಂಬ ಪ್ರದೇಶಲ್ಲಿ ಮಹಿಳೆಯರು ಬೇಲಿಗಳಲ್ಲಿ ತಮ್ಮ ಬ್ರಾಗಳನ್ನು ನೇತು ಹಾಕುವಂತಹ ಸಂಪ್ರದಾಯ ರೂಢಿಯಲ್ಲಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಒಳ ಉಡುಪುಗಳನ್ನು ಈ ಬೇಲಿಯಲ್ಲಿ ಏಕೆ ನೇತುಹಾಕಲಾಗುತ್ತದೆ?
ನ್ಯೂಜಿಲೆಂಡ್‌ನ ಸೆಂಟ್ರಲ್ ಒಟಾಗೋದಲ್ಲಿರುವ ಕಾರ್ಡೋನಾ ಎಂಬ ಪ್ರದೇಶದಲ್ಲಿ ಬೇಲಿಗಳಲ್ಲಿ ಬ್ರಾಗಳನ್ನು ನೇತು ಹಾಕುವ ಸಂಪ್ರದಾಯವಿದೆ. ಇಲ್ಲಿಗೆ ಭೇಟಿ ನೀಡುವಂತಹ ಸಾವಿರಾರು ಮಹಿಳೆಯರು ತಮ್ಮ ಬ್ರಾಗಳನ್ನು ಬೇಲಿಯಲ್ಲಿ ನೇತು ಹಾಕುತ್ತಾರೆ. ಈ ಬ್ರಾ ವ್ಯಾಲಿ ನ್ಯೂಜಿಲೆಂಡಿನ ಪ್ರಮುಖ ಪ್ರವಾಸಿ ತಾಣವು ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇಲ್ಲಿ ಬ್ರಾಗಳನ್ನು ಏಕೆ ನೇತು ಹಾಕುತ್ತಾರೆ ಎಂಬುವುದಕ್ಕೆ ಎರಡು ವಿಭಿನ್ನ ಕಥೆಗಳಿವೆ. ಒಂದು ನಂಬಿಕೆಯ ಪ್ರಕಾರ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿ ಬೇಲಿಗಳಲ್ಲಿ ಬ್ರಾಗಳನ್ನು ನೇತು ಹಾಕಲಾಗುತ್ತದೆ, ಇನ್ನೊಂದು ನಂಬಿಕೆಯ ಪ್ರಕಾರ ಇಲ್ಲಿರುವ ಬೇಲಿಯಲ್ಲಿ ಒಳ ಉಪುಡುಗಳನ್ನು ನೇತು ಹಾಕುವುವರಿಗೆ ತಾವು ಪ್ರೀತಿಸಿದ ವ್ಯಕ್ತಿಯೇ ಜೀವನ ಸಂಗಾತಿಯಾಗಿ ಸಿಗುತ್ತಾರೆ ಎನ್ನುತ್ತಾರೆ ಸ್ಥಳೀಯರು. ಈ ಕಾರಣದಿಂದಾಗಿ ಅನೇಕ ಮಹಿಳೆಯರು ಇಲ್ಲಿ ತಮ್ಮ ಬ್ರಾಗಳನ್ನು ನೇತು ಹಾಕುತ್ತಾರೆ.
ಇದನ್ನೂ ಓದಿ: ನಾಯಿಗೆ ಹೃದಯ ಶಸ್ತ್ರಚಿಕಿತ್ಸೆ; ಇದು ಏಷ್ಯಾದಲ್ಲೇ ಮೊದಲು!
ಈ ಕುರಿತ ವಿಶೇಷ ವಿಡಿಯೋವೊಂದನ್ನು ಪ್ರಶಾಂತಿ (@lifeofsanthi) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ರಸ್ತೆಯ ಪಕ್ಕದಲ್ಲಿರುವ ಬೇಲಿಯೊಂದರಲ್ಲಿ ಸಾವಿರಾರು ಸಂಖ್ಯೆಯ ಬ್ರಾಗಳನ್ನು ನೇತು ಹಾಕಿರುವ ದೃಶ್ಯವನ್ನು ಕಾಣಬಹುದು. ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 18 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ತರಹೇವಾರಿ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ