Viral Video: ಮದ್ವೆಯಾಗಲು ಭಾರತೀಯ ವರ ಬೇಕು; ಪೋಸ್ಟರ್ ಹಿಡಿದು ನಿಂತ ರಷ್ಯಾದ ಯುವತಿ
ರಷ್ಯಾ ಮೂಲದ ದಿನಾರಾ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಇದೀಗ ತಾನು ಮದುವೆಯಾಗಲು ಬಯಸಿದ್ದು, ಇದಕ್ಕಾಗಿ ಭಾರತೀಯ ವರನನ್ನು ಹುಡುಕುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.
ಮದುವೆಗಾಗಿ ವರ ಅಥವಾ ವಧು ಬೇಕೆಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬಳು ರಷ್ಯಾ ಮೂಲದ ಯುವತಿ ಸಂಪ್ರದಾಯಿಕವಾಗಿ ಸೀರೆಯುಟ್ಟು ಮಾಲ್ ಒಂದರ ಮುಂದೆ ಪೋಸ್ಟರ್ ಹಿಡಿದು ನಿಂತಿದ್ದಾಳೆ. ಈ ಪೋಸ್ಟರ್ನಲ್ಲಿ ತಾನು ಮದ್ವೆಯಾಗಲು ಭಾರತೀಯ ವರನನ್ನು ಹುಡುಕುತ್ತಿರುವುದಾಗಿ ಬರೆದುಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರಷ್ಯಾ ಮೂಲದ ದಿನಾರಾ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಇದೀಗ ತಾನು ಮದುವೆಯಾಗಲು ಬಯಸಿದ್ದು, ಇದಕ್ಕಾಗಿ ಭಾರತೀಯ ವರನನ್ನು ಹುಡುಕುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ
ಇತ್ತೀಚೆಗಷ್ಟೇ ಭಾರತದ ಮಾಲ್ವೊಂದ ಹೊರಗೆ ಮದ್ವೆಯಾಗಲು ಭಾರತೀಯ ವರ ಬೇಕು ಎಂದು ಪೋಸ್ಟರ್ ಹಿಡಿದು ನಿಂತಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸ್ವತಃ ದಿನಾರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೇ 31ಕ್ಕೆ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಕೇವಲ ಮೂರು ದಿನಗಳಲ್ಲಿ 7.6 ಮಿಲಿಯನ್ ಅಂದರೆ 70 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 82 ಸಾವಿರಕ್ಕೂ ಹೆಚ್ಚು ನೆಟ್ಟಿಗರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ