Viral Post: ಬಿಸಿಲ ಬೇಗೆ ತಡೆಯಲಾರದೇ ಶೌಚಾಲಯಕ್ಕೂ ಎಸಿ ಅಳವಡಿಸಿದ ವ್ಯಕ್ತಿ; ಪೋಸ್ಟ್​​ ವೈರಲ್​​

ಸಾಮಾನ್ಯವಾಗಿ ಮನೆ, ಕಛೇರಿಗಳಲ್ಲಿ ಎಸಿ ಅಳವಡಿಸಿರುವುದನ್ನು ನೀವು ನೋಡಿರಬಹುದು. ಆದರೆ ಎಂದಾದರೂ ಶೌಚಾಲಯಕ್ಕೆ ಎಸಿ ಅಳವಡಿಸಿರುವುದನ್ನು ನೋಡಿದ್ದೀರಾ? ಸದ್ಯ ಹೀಗೊಂದು ಫೋಟೋ ವೈರಲ್​​ ಆಗಿದೆ.

Viral Post: ಬಿಸಿಲ ಬೇಗೆ ತಡೆಯಲಾರದೇ  ಶೌಚಾಲಯಕ್ಕೂ ಎಸಿ ಅಳವಡಿಸಿದ ವ್ಯಕ್ತಿ; ಪೋಸ್ಟ್​​ ವೈರಲ್​​
AC installed in the washroom
Follow us
|

Updated on:Jun 01, 2024 | 10:38 AM

ಸದ್ಯ ದೇಶದ ಬಹುತೇಕ ರಾಜ್ಯಗಳು ಬಿಸಿಲಿನ ಝಳದಿಂದ ತತ್ತರಿಸುತ್ತಿವೆ. ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಭಾರೀ ಬಿಸಿಲಿನಿಂದಾಗಿ (Heatwave) ಜನರು ತತ್ತರಿಸಿ ಹೋಗಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಬಿಸಿಲು ಏರಿದಂತೆ, ಬಿಎಂಟಿಸಿಯ ಹವಾನಿಯಂತ್ರಿತ (ಎಸಿ) ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ಸಾಕಷ್ಟು ಜನರು ತಮ್ಮ ಮನೆಗಳಲ್ಲಿಯೂ ಎಸಿ ಅಳವಡಿಸಿದ್ದಾರೆ. ಸಾಮಾನ್ಯವಾಗಿ ಮನೆ, ಕಛೇರಿಗಳಲ್ಲಿ ಎಸಿ ಅಳವಡಿಸಿರುವುದನ್ನು ನೀವು ಕಾಣಬಹುದು. ಆದರೆ ಎಂದಾದರೂ ಶೌಚಾಲಯಕ್ಕೆ ಎಸಿ ಅಳವಡಿಸಿರುವುದನ್ನು ನೋಡಿದ್ದೀರಾ? ಸದ್ಯ ಹೀಗೊಂದು ಫೋಟೋ ವೈರಲ್​​ ಆಗಿದೆ.

ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಮನೆಯ ಶೌಚಾಲಯಕ್ಕೆ ಎಸಿ ಅಳವಡಿಸಿದ್ದು, ಸದ್ಯ ಶೌಚಾಲಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. @haseenkhan3933 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಏಪ್ರಿಲ್​​ 18ರಂದು ಫೋಟೋ ಹಂಚಿಕೊಳ್ಳಲಾಗಿದೆ. 2ಲಕ್ಷಕ್ಕೂ ಹೆಚ್ಚು ಜನರು ಈ ಪೋಸ್ಟ್​​​​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿಯವರೆಗೆ 19.8 ಮಿಲಿಯನ್​​ ಅಂದರೆ 1ಕೋಟಿಯ 90ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್​​ ಪೋಸ್ಟ್​​ ಇಲ್ಲಿದೆ  ನೋಡಿ:

ಇದನ್ನೂ ಓದಿ: ಬಾಡಿಗೆ ಗರ್ಲ್ ಫ್ರೆಂಡ್; ಈ ಹುಡುಗಿಯ ಕಡೆಯಿಂದ ಸಿಂಗಲ್ಸ್​​​​ ಹುಡುಗರಿಗೆ ಬಿಗ್​​ ಆಫರ್​

ವಿಡಿಯೋ ವೈರಲ್​​ ಆಗುತ್ತಿದ್ದಂತೆ ಜನರು ಭಾರೀ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ‘ಇದು ನನ್ನ ಕನಸಿನ ವಾಶ್‌ರೂಮ್ ಬ್ರದರ್​​​​​’ ಎಂದು ಬರೆದಿದರೆ, ಮತ್ತೊಬ್ಬರು ಮೊಬೈಲ್​​​ ಚಾರ್ಚ್​​​​ ಸ್ವಿಚ್​ ಬೋರ್ಡ್​​ ಕೂಡ ಅಳವಡಿಸಿ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:36 am, Sat, 1 June 24

ತಾಜಾ ಸುದ್ದಿ