Video Viral: ಇದು ಚಾಕೋಲೆಟ್ ಫ್ಲೈಟ್; ಶೆಫ್ ಕೈಚಳಕಕ್ಕೆ ನೆಟ್ಟಿಗರಿಂದ ಮೆಚ್ಚುಗೆ
ಮೇ 20 ರಂದು ಚಾಕೋಲೆಟ್ ಫ್ಲೈಟ್ ವಿಡಿಯೋವನ್ನು ಬಾಣಸಿಗ ಅಮೌರಿ ಗೈಚೋನ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ(@amauryguichon)ಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ದಿನದಿಂದ ಇಲ್ಲಿಯವರೆಗೆ(ಮೇ.31) 20.9 ಮಿಲಿಯನ್ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 765,970 ನೆಟ್ಟಿಗರು ವಿಡಿಯೋಗೆ ಲೈಕ್ಸ್ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.

ಚಾಕೊಲೇಟ್‌ನಿಂದ ತಯಾರಿಸಿದ ವಿಮಾನವೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಮಾನವನ್ನು ಕಂಡು ಚಾಕೋಲೆಟ್ ಪ್ರಿಯರು ಲೈಕ್ಸ್ಗಳ ಸುರುಮಳೆ ಸುರಿಸಿದ್ದಾರೆ. ಹೆಸರಾಂತ ಬಾಣಸಿಗ ಅಮೌರಿ ಗೈಚೋನ್ ಅವರು ಈ ಚಾಕೋಲೆಟ್ ಫ್ಲೈಟ್ ತಯಾರಿಸಿದ್ದು, ಸ್ವತಃ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೇ 20 ರಂದು ಚಾಕೋಲೆಟ್ ಫ್ಲೈಟ್ ವಿಡಿಯೋವನ್ನು ಬಾಣಸಿಗ ಅಮೌರಿ ಗೈಚೋನ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ(@amauryguichon)ಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ದಿನದಿಂದ ಇಲ್ಲಿಯವರೆಗೆ(ಮೇ.31) 20.9 ಮಿಲಿಯನ್ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 765,970 ನೆಟ್ಟಿಗರು ವಿಡಿಯೋಗೆ ಲೈಕ್ಸ್ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಬಾಡಿಗೆ ಗರ್ಲ್ ಫ್ರೆಂಡ್; ಈ ಹುಡುಗಿಯ ಕಡೆಯಿಂದ ಸಿಂಗಲ್ಸ್ ಹುಡುಗರಿಗೆ ಬಿಗ್ ಆಫರ್
ಸಂಪೂರ್ಣವಾಗಿ ಚಾಕೋಲೆಟ್ ಬಳಸಿ ಈ ಸುಂದರ ವಿಮಾನವನ್ನು ತಯಾರಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಮಾನದ ರೆಕ್ಕೆಯಿಂದ ಹಿಡಿದು ಕಿಟಕಿ, ಬಾಗಿಲುಗಳ ವರೆಗೆ ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ಕತಾರ್ ಏರ್‌ವೇಸ್ ವಿಮಾನವನ್ನು ತಯಾರಿಸಿದ್ದು, ವಿಮಾನದ ಲೋಗೋ ಹೆಸರುಗಳನ್ನು ಕೂಡ ಸುಂದರವಾಗಿ ಬರೆಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ