Viral Video: ಎಂದಾದರೂ ಚಾಕೊಲೇಟ್ ಬನಾನ ದೋಸೆ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ಮಸಾಲ್ ದೋಸೆಯಿಂದ ಹಿಡಿದು ಬೆಣ್ಣೆ ದೋಸೆ ಹೀಗೆ ಸಾಕಷ್ಟು ಬಗೆಯ ಬಾಯಲ್ಲಿ ನೀರೂರಿಸುವ ದೋಸೆಗಳಿವೆ. ಆದರೆ ಎಂದಾದರೂ ಚಾಕೊಲೇಟ್ ಬನಾನ ದೋಸೆ ಕೇಳಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ದೋಸೆ ಪ್ರಿಯರಲ್ಲಿ ಆಕ್ರೋಶ ಸೃಷ್ಟಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ದೋಸೆಯಲ್ಲಿ ಸಾಕಷ್ಟು ವಿಧಗಳನ್ನು ಕಾಣಬಹುದು. ಮಸಾಲ್ ದೋಸೆಯಿಂದ ಹಿಡಿದು ಬೆಣ್ಣೆ ದೋಸೆ ಹೀಗೆ ಸಾಕಷ್ಟು ಬಗೆಯ ಬಾಯಲ್ಲಿ ನೀರೂರಿಸುವ ದೋಸೆಗಳಿವೆ. ಆದರೆ ಎಂದಾದರೂ ಚಾಕೊಲೇಟ್ ಬನಾನ ದೋಸೆ ಕೇಳಿದ್ದೀರಾ? ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಾಕೊಲೇಟ್ ಬನಾನ ದೋಸೆ ಭಾರೀ ವೈರಲ್ ಆಗುತ್ತಿದೆ. ಈ ದೋಸೆ ಕಂಡು ಖುಷಿ ಪಡುವವರಿಗಿಂತ ಹೆಚ್ಚು ಸಾಕಷ್ಟು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋದ ಪ್ರಾರಂಭದಲ್ಲಿ ಮಸಾಲ ದೋಸೆಯ ರೀತಿಯಲ್ಲಿ ಮಾಡುವುದನ್ನು ಕಾಣಬಹುದು. ಇದಾದ ಕೆಲ ಸೆಕೆಂಡುಗಳಲ್ಲೇ ದೋಸೆಯ ಮೇಲೆ ಚಾಕೊಲೇಟ್ ಹಾಕುತ್ತಿರುವುದನ್ನು ಕಾಣಬಹುದು. ಚಾಕೊಲೇಟ್ ಕರಗುತ್ತಿದ್ದಂತೆ ಅದರ ಮೇಲೆ ಬಾಳೆ ಹಣ್ಣುಗಳನ್ನು ಹಾಕಿ, ದೋಸೆಯಲ್ಲಿ ಮಡಚಿ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಸರ್ವ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು
@thegreatindianfoodie ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಕೇವಲ 5 ದಿನಗಳಲ್ಲಿ 30 ಲಕ್ಷಕ್ಕಿಂತಲೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.35,602 ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ