Viral Video: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ

ಇಲ್ಲೊಬ್ಬರು ವಯಸ್ಸಾದ ತಂದೆ ತನ್ನ ಅನಾರೋಗ್ಯ ಪೀಡಿತ ಮಗ ಆದಷ್ಟು ಬೇಗ ಗುಣಮುಖವಾಗಬೇಕೆಂದು ಉರುಳು ಸೇವೆಯ ಮೂಲಕ ಚಾಮುಂಡಿ ಬೆಟ್ಟ ಹತ್ತಿ ಚಾಮುಂಡೇಶ್ವರಿ ತಾಯಿಯ  ದರ್ಶನ ಪಡೆದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು,  ಹೃದಯಸ್ಪರ್ಶಿ  ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. 

Viral Video: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 09, 2024 | 11:40 AM

ಮಕ್ಕಳಿಗೆ ಹೆತ್ತವರೇ ಆಸರೆ.  ನಮ್ಮ ಕಷ್ಟ ಕಾಲದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರು ನಮ್ಮ ಕೈ ಬಿಡಬಹುದು ಆದರೆ ಹೆತ್ತ ತಂದೆ ತಾಯಿ ಯಾವತ್ತು ನಮ್ಮ ಕೈ ಬಿಡಲ್ಲ. ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಅವರು ಸದಾ ನಮ್ಮ ಏಳಿಗೆಯನ್ನೇ ಬಯಸುತ್ತಾರೆ. ಇದಕ್ಕೆ ಸೂಕ್ತ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ವೃದ್ಧ ತಂದೆಯೊಬ್ಬರು ತನ್ನ ಅನಾರೋಗ್ಯ ಪೀಡಿತ ಮಗ ಆದಷ್ಟು ಬೇಗ ಗುಣಮುಖವಾಗಲಿ ಎಂದು ಉರುಳು ಸೇವೆಯ ಮೂಲಕ ಚಾಮುಂಡಿ ಬೆಟ್ಟ ಹತ್ತಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು @askmysuru_official ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಹುಷಾರಿಲ್ಲದ ಮಗನಿಗಾಗಿ ತಂದೆಯ ಉರುಳು ಸೇವೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ವೃದ್ಧ ದಂಪತಿಗಳಿಬ್ಬರು ತಮ್ಮ ಅನಾರೋಗ್ಯ ಪೀಡಿತ ಮಗ ಆದಷ್ಟು ಬೇಗ ಗುಣಮುಖವಾಗಲಿ ಎಂದು  ಚಾಮುಂಡಿ ಬೆಟ್ಟ ಹತ್ತುವ ದೃಶ್ಯವನ್ನು ಕಾಣಬಹುದು. ಅದರಲ್ಲಿ ವೃದ್ಧ ತಂದೆ ತನ್ನ ಮಗನಿಗಾಗಿ ಉರುಳು ಸೇವೆಯ ಮೂಲಕವೇ ಬೆಟ್ಟ ಹತ್ತಿದ್ದಾರೆ. ಈ ದೃಶ್ಯ ಎಂತಹ ಕಲ್ಲು ಹೃದಯವನ್ನು ಸಹ ಕರಗಿಸುವಂತಿದೆ.

ಇದನ್ನೂ ಓದಿ: ಚಿತ್ರದಲ್ಲಿ 2Bಗಳ ನಡುವೆ ಅಡಗಿರುವ ಸಂಖ್ಯೆ ’28’ ಗುರುತಿಸಬಹುದೇ?

ಏಪ್ರಿಲ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡದುಕೊಂಡಿದ್ದು,  ಮಕ್ಕಳಿಗಾಗಿ ಹೆತ್ತ ತಂದೆ ತಾಯಿಯ ತ್ಯಾಗವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ