Viral Video: ರಂಜಾನ್ ಸ್ಪೆಷಲ್; ಮಾರುಕಟ್ಟೆಗೆ ಎಂಟ್ರಿಕೊಟ್ಟ ಗೋಣಿಚೀಲದ ಕುರ್ತಾ-ಪೈಜಾಮ
ಇಂದಿನ ಫ್ಯಾಷನ್ ಯುಗದಲ್ಲಿ ಚಿತ್ರ ವಿಚಿತ್ರವಾದ ಉಡುಗೆ ತೊಡುಗೆಗಳ ಕುರಿತ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ವಿಚಿತ್ರವಾದ ಫ್ಯಾಷನ್ ವಿಡಿಯೋವೊಂದು ವೈರಲ್ ಆಗಿದ್ದು, ಯುವಕನೊಬ್ಬ ಗೋಣಿ ಚೀಲದಿಂದ ಕುರ್ತಾ ಪೈಜಾಮವನ್ನು ತಯಾರಿಸಿದ್ದಾನೆ. ಗೋಣಿ ಚೀಲದ ಈ ವಿಶಿಷ್ಟ ಉಡುಗೆಯನ್ನು ಕಂಡು ಇದ್ಯಾವುದು ಗುರು ಹೊಸ ಫ್ಯಾಷನ್ ಎಂದು ನೋಡುಗರು ಶಾಕ್ ಆಗಿದ್ದಾರೆ.
ಫ್ಯಾಷನ್ ಅಥವಾ ಟ್ರೆಂಡ್ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಉಡುಗೆ ತೊಡುಗೆಗಳ ಫ್ಯಾಷನ್ ಪ್ರವೃತ್ತಿ ಮುನ್ನಲೆಗೆ ಬಂದಿವೆ. ಈ ವಿಚಿತ್ರ ಫ್ಯಾಷನ್ ಅಂದಾಗ ಮೊದಲಿಗೆ ನೆನಪಿಗೆ ಬರುವುದೇ ಉರ್ಫಿ ಜಾವೇದ್. ಹೌದು ಈ ನಟಿ ಯಾವಾಗಲೂ ತನ್ನ ವಿಚಿತ್ರ ಫ್ಯಾಷನ್ ಸೆನ್ಸ್ ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇದೀಗ ಇಲ್ಲೊಬ್ಬ ಯುವಕ ಕೂಡಾ ತನ್ನ ವಿಚಿತ್ರ ಫ್ಯಾಷನ್ ಸೆನ್ಸ್ ಮೂಲಕ ಸುದ್ದಿಯಲ್ಲಿದ್ದಾನೆ. ಆತ ಗೋಣಿ ಚೀಲದಲ್ಲಿ ಕುರ್ತಾ-ಪೈಜಾಮವನ್ನು ತಯಾರಿಸಿದ್ದು, ಈ ವಿಚಿತ್ರ ಬಟ್ಟೆಯನ್ನು ಕಂಡು ಇದ್ಯಾವುದು ಗುರು ಹೊಸ ಫ್ಯಾಷನ್ ಎಂದು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.
View this post on Instagram
ಈ ವಿಡಿಯೋವನ್ನು @fashiongalaxy123 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಕಸದಿಂದ ರಸ ಎನ್ನುವ ಹಾಗೆ ಸೆಣಬಿನ ಗೋಣಿ ಚೀಲದಲ್ಲಿ ಚಂದದ ಕುರ್ತಾ-ಪೈಜಾಮವನ್ನು ಸ್ಟಿಚ್ ಮಾಡಿ, ನಂತರ ಗೋಣಿ ಕುರ್ತಾವನ್ನು ತೊಟ್ಟು ಸ್ಟೈಲ್ ಆಗಿ ಪೋಸ್ ಕೊಡುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇಲ್ಲಿ ಕಸ ಹಾಕುವವರಿಗೆ ಬ್ಯಾನರ್ ಮೂಲಕ ಹಿಗ್ಗಾಮುಗ್ಗಾ ಜಾಡಿಸಿದ ಗ್ರಾಮಸ್ಥರು
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 49.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 8 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವಿಚಿತ್ರವಾದ ಗೋಣಿಚೀಲ ಕುರ್ತಾ ಪೈಜಾಮವನ್ನು ಕಂಡು ಇದ್ಯಾವುದಪ್ಪಾ ಹೊಸ ಫ್ಯಾಶನ್ ಎಂದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ