Uttar Pradesh Election 2022  ಶಿವಪಾಲ್​​ರನ್ನು ಭೇಟಿ ಮಾಡಿ ಪ್ರಗತಿಶೀಲ್ ಸಮಾಜವಾದಿ ಪಕ್ಷದ ಜತೆ  ಮೈತ್ರಿ ಘೋಷಿಸಿದ ಅಖಿಲೇಶ್ ಯಾದವ್

| Updated By: ರಶ್ಮಿ ಕಲ್ಲಕಟ್ಟ

Updated on: Dec 16, 2021 | 7:48 PM

Akhilesh Yadav ಮುಲಾಯಂ ಯಾದವ್ ಅವರ ವಿಶ್ವಾಸಾರ್ಹ ಕಿರಿಯ ಸಹೋದರ ಮತ್ತು ಅವರ ಪಕ್ಷದ ಎರಡನೇ ಕಮಾಂಡ್ ಆಗಿದ್ದ ಶಿವಪಾಲ್ ಯಾದವ್ ಅವರು 2017 ರ ಚುನಾವಣೆಗೆ ಮುಂಚಿತವಾಗಿ ಪಕ್ಷದ ನಾಯಕತ್ವದ ಬಗ್ಗೆ ತಮ್ಮ ಅಖಿಲೇಶ್ ಜತೆ ಜಗಳವಾಡಿದ್ದರು

Uttar Pradesh Election 2022  ಶಿವಪಾಲ್​​ರನ್ನು ಭೇಟಿ ಮಾಡಿ ಪ್ರಗತಿಶೀಲ್ ಸಮಾಜವಾದಿ ಪಕ್ಷದ ಜತೆ  ಮೈತ್ರಿ ಘೋಷಿಸಿದ ಅಖಿಲೇಶ್ ಯಾದವ್
ಶಿವಪಾಲ್- ಅಖಿಲೇಶ್ ಯಾದವ್
Follow us on

ಲಖನೌ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ (UP Assembly Election 2022) ಮುನ್ನ ಸಮಾಜವಾದಿ ಪಕ್ಷವು (Samajwadi Party) ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) (Pragatisheel Samajwadi Party (Lohia)) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಗುರುವಾರ ಲಖನೌನಲ್ಲಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ (Shivpal Singh Yadav) ಭೇಟಿ ನಂತರ ಈ ಘೋಷಣೆ ಆಗಿದೆ. 66 ವರ್ಷದ ಶಿವಪಾಲ್ ಯಾದವ್ ಅವರು 2017 ರ ಚುನಾವಣೆಗೆ ಮುಂಚಿತವಾಗಿ ಸಮಾಜವಾದಿ ಪಕ್ಷದಿಂದ ದೂರವಾಗಿದ್ದರು. ಅಖಿಲೇಶ್ ಯಾದವ್ ಅವರೊಂದಿಗಿನ ಸಾರ್ವಜನಿಕ ಭಿನ್ನಾಭಿಪ್ರಾಯಗಳ ನಂತರ ಶಿವಪಾಲ್, ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಸ್ಥಾಪಿಸಿದ್ದರು. ಕಳೆದ ವರ್ಷ ಶಿವಪಾಲ್ ಯಾದವ್ ಅವರು ಹೊಂದಾಣಿಕೆಗೆ ಸಿದ್ಧ ಎಂದು ಅನೇಕ ಬಾರಿ ಬಹಿರಂಗವಾಗಿ ಹೇಳಿದ್ದರು. ಆದರೆ ಕೆಲವು ಬದ್ಧತೆಯಿಲ್ಲದ ಹೇಳಿಕೆಗಳನ್ನು ಹೊರತುಪಡಿಸಿ ಅಖಿಲೇಶ್ ಅವರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಪಿಎಸ್‌ಪಿಎಲ್‌ನ ರಾಷ್ಟ್ರೀಯ ಅಧ್ಯಕ್ಷರ ಜತೆ ಸಭೆ ನಡೆಸಿ ಮೈತ್ರಿ ಮಾಡಿಕೊಳ್ಳುವ ಕುರಿತು ನಿರ್ಧರಿಸಲಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಜೊತೆಯಲ್ಲಿ ಕರೆದೊಯ್ಯುವ ನೀತಿಯು ಸಮಾಜವಾದಿ  ಪಕ್ಷವನ್ನು ನಿರಂತರವಾಗಿ ಬಲಪಡಿಸುತ್ತಿದೆ. ಸಮಾಜವಾದಿ ಪಕ್ಷ ಮತ್ತು ಇತರ ಮಿತ್ರಪಕ್ಷಗಳನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ಯುತ್ತಿದೆ ಎಂದು ಅಖಿಲೇಶ್ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.  ಅಖಿಲೇಶ್ ಅವರ ರ್ಯಾಲಿಗಳು ಹೆಚ್ಚು ದೊಡ್ಡ ಜನಸಮೂಹವನ್ನು ಸೆಳೆಯುತ್ತಿದ್ದು ಸಾಧ್ಯವಾದಷ್ಟು ಸಣ್ಣ ಪಕ್ಷಗಳನ್ನು ತಮ್ಮೊಂದಿಗೆ ಸೇರಿಸಲು ಅವರು ಆಸಕ್ತಿ ವಹಿಸಿದ್ದಾರೆ.

ಅವರು ಈಗಾಗಲೇ ಜನವಾದಿ ಪಕ್ಷ (ಸಮಾಜವಾದಿ), ಓಂ ಪ್ರಕಾಶ್ ರಾಜ್‌ಭರ್ ಅವರ ಎಸ್‌ಬಿಎಸ್‌ಪಿ, ಕೇಶವ್ ದೇವ್ ಮೌರ್ಯ ಅವರ ಮಹಾನ್ ದಳ, ಕೃಷ್ಣ ಪಟೇಲ್ ನೇತೃತ್ವದ ಅಪ್ನಾ ದಳ ಬಣ ಮತ್ತು ಜಯಂತ್ ಚೌಧರಿ ಅವರ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.  ಶಿವಪಾಲ್ ಯಾದವ್ ಅವರ ಪಕ್ಷವು ಇಟಾವಾ ಪ್ರದೇಶದಲ್ಲಿ ಕೆಲವೇ ಸ್ಥಾನಗಳ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿದೆ. ಆದರೆ ಸಮಾಜವಾದಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬ ರಾಜಕೀಯ ಅನುಭವಿಯಾಗಿ ಅವರ ನೆರವು ಅಖಿಲೇಶ್ ಯಾದವ್ ಅವರಿಗೆ ಚುನಾವಣೆಯಲ್ಲಿ ಸಹಾಯ ಮಾಡುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷದ ಮೂಲಗಳು ಹೇಳುವಂತೆ ಈ ಮೈತ್ರಿ ಮತದಾರರಿಗೆ ಏಕತೆಯ ಸಂದೇಶವನ್ನು ಕಳುಹಿಸುತ್ತದೆ.


ಮುಲಾಯಂ ಯಾದವ್ ಅವರ ವಿಶ್ವಾಸಾರ್ಹ ಕಿರಿಯ ಸಹೋದರ ಮತ್ತು ಅವರ ಪಕ್ಷದ ಎರಡನೇ ಕಮಾಂಡ್ ಆಗಿದ್ದ ಶಿವಪಾಲ್ ಯಾದವ್ ಅವರು 2017 ರ ಚುನಾವಣೆಗೆ ಮುಂಚಿತವಾಗಿ ಪಕ್ಷದ ನಾಯಕತ್ವದ ಬಗ್ಗೆ ತಮ್ಮ ಅಖಿಲೇಶ್ ಜತೆ ಜಗಳವಾಡಿದ್ದರು. ಜನವರಿ ಮತ್ತು ಫೆಬ್ರವರಿ 2017 ರವರೆಗಿನ ಜಗಳದ ನಂತರ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಸಹೋದರನ ಪರವಾಗಿ ನಿಂತಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಪಕ್ಷದ ಮೇಲೆ ತಮ್ಮ ಹಿಡಿತವನ್ನು ದೃಢವಾಗಿ ಸ್ಥಾಪಿಸಿದ್ದರು.

ಮುನಿಸಿಕೊಂಡು ದೂರ ಹೋದ ಶಿವಪಾಲ್ ಯಾದವ್ ಅವರು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ಆದರೆ ಪಕ್ಷದ ಅತ್ಯಂತ ಮೌಲ್ಯಯುತವಾದ ಆಸ್ತಿಯಾದ ಸೈಕಲ್ ಚುನಾವಣಾ ಚಿಹ್ನೆಗಾಗಿ ನಡೆದ ಹೋರಾಟದಲ್ಲಿ ಸೋತರು. ಕುಟುಂಬದೊಳಗಿನ ದೊಡ್ಡ ಒಡಕು ಸಮಾಜವಾದಿ ಪಕ್ಷವನ್ನು ಮತದಾರರು ತಿರಸ್ಕರಿಸಲು ಮತ್ತೊಂದು ಕಾರಣವೆಂದು ಪರಿಗಣಿಸಲಾಗಿದೆ. ಇದು ಚುನಾವಣೆಗಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಆಶಿಶ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಲಖನೌದಲ್ಲಿ ಯುಪಿ ವಿಧಾನಸಭೆಯ ಹೊರಗೆ ಜಮಾಯಿಸಿದರು. ಬುಧವಾರ ಸಂಸತ್ ಕಲಾಪದಲ್ಲಿ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳೂ ನಡೆದಿವೆ.

ಏತನ್ಮಧ್ಯೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಲಖಿಂಪುರ ಖೇರಿ ಘಟನೆಯನ್ನು ‘ಯೋಜಿತ ಪಿತೂರಿ’ ಎಂದು ಕರೆದ ಎಸ್‌ಐಟಿ ವರದಿಯ ಕುರಿತು ಬುಧವಾರ ಮಾತನಾಡಿದರು. “ಚುನಾವಣೆಗಳು ಸಮೀಪಿಸುತ್ತಿದ್ದಂತೆ, ಬಿಜೆಪಿಯು ಧಾರ್ಮಿಕ ಕನ್ನಡಕವನ್ನು ಧರಿಸುತ್ತದೆ ಮತ್ತು ಎಲ್ಲವನ್ನೂ ಧರ್ಮದ ಆಧಾರದ ಮೇಲೆ ನೋಡುತ್ತದೆ. ಬಿಜೆಪಿಯ ಅಜಯ್ ಮಿಶ್ರಾ ಅವರನ್ನು ಅಮಾನತುಗೊಳಿಸಬೇಕು” ಎಂದು ಅಖಿಲೇಶ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: Uttar Pradesh election 2022 ಕಾಂಗ್ರೆಸ್‌ನಿಂದ ಮಹಿಳಾ ಚುನಾವಣಾ ಪ್ರಣಾಳಿಕೆ ಬಿಡುಗಡೆ; ಪದವೀಧರ ಮಹಿಳೆಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ವಾಗ್ದಾನ

Published On - 6:56 pm, Thu, 16 December 21