ಸಯಾನಿ ಘೋಷ್ (ಅಸನ್​ಸೋಲ್ ದಕ್ಷಿಣ ವಿಧಾನಸಭಾ)

ಬಾಂಗ್ಲಾ ಚಿತ್ರರಂಗ ಅಭಿನೇತ್ರಿ ಮತ್ತು ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಸಯಾನಿ ಘೋಷ್, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ಅವರು ತೃಣಮೂಲ ಕಾಂಗ್ರೆಸ್​ಗೆ ಸೇರಿದ್ದರು. ಮಮತಾ ಬ್ಯಾನರ್ಜಿ ಅವರು ಆಸನ್​ಸೋಲ್ ದಕ್ಷಿಣ ಕ್ಷೇತ್ರದಿಂದ ಸಹಾನಿ ಘೋಷ್ ಅವರಿಗೆ ಟಿಕೆಟ್ ನೀಡಿದ್ದಾರೆ. ಇಲ್ಲಿ ಸಯಾನಿ ಘೋಷ್ ಅವರ ಎದುರು ಬಿಜೆಪಿ ಪಶ್ಚಿಮ ಬಂಗಾಳ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ಫ್ಯಾಷನ್ ಡಿಸೈನರ್ ಅಗ್ನಿಮಿತ್ರಾ ಪಾಲ್ ಅವರು ಸ್ಪರ್ಧಿಸಿದ್ದಾರೆ. 28 ವರ್ಷದ ಸಯಾನಿ ಘೋಷ್ ಜನವರಿ ತಿಂಗಳಲ್ಲಿ ಒಂದು ವಿವಾದಕ್ಕೆ ಸಿಲುಕಿದ್ದರು. ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ರಾಜ್ಯಪಾಲರಾಗಿದ್ದ ತಥಾಗತ ರಾಯ್ ಈ ಕುರಿತು ಎಫ್​ಐಆರ್ ದಾಖಲಿಸಿದ್ದರು. ಸಯಾನಿ ತಮ್ಮ 18ನೇ ವಯಸ್ಸಿನಲ್ಲಿ ನಟನೆ ಆರಂಭಿಸಿದ್ದರು. ಅವರ ನಟನೆಯ ಮೊದಲ ಚಿತ್ರ 2010ರಲ್ಲಿ ತೆರೆಕಂಡಿತ್ತು. ಟಿವಿ, ಫಿಲ್ಮ್​ಗಳಲ್ಲಿ ನಟಿಸುವುದರ ಜೊತೆಗೆ ಸಯಾನಿ ಘೋಷ್ ವೆಬ್​ ಸೀರಿಸ್​ಗಳಲ್ಲಿಯೂ ಕೆಲಸ ಮಾಡುತ್ತಾರೆ. ಕೊಲ್ಕತ್ತಾದಲ್ಲಿ ವಾಸಿಸುವ ಸಯಾನಿ ಘೋಷ್ ಎದುರು ಈ ಬಾರಿ ಅಗ್ನಿಮಿತ್ರಾ ಪಾಲ್ ಸ್ಪರ್ಧಿಸಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ 2021 - ಅಭ್ಯರ್ಥಿ

ಪಶ್ಚಿಮ ಬಂಗಾಳ ಚುನಾವಣೆ  2021- ಕ್ಷೇತ್ರ