Bhabanipur Bypoll ಮೋದಿ ಜೀ, ನಾವು ಭಾರತವನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

Mamata Banerjee: "ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ನಾವು ಭಾರತವನ್ನು ತಾಲಿಬಾನ್​​ನಂತೆ ಮಾಡಲು ಬಿಡುವುದಿಲ್ಲ. ಭಾರತವು ಒಗ್ಗಟ್ಟಾಗಿ ಉಳಿಯುತ್ತದೆ. ಗಾಂಧಿ ಜೀ, ನೇತಾಜಿ, ವಿವೇಕಾನಂದ, ಸರ್ದಾರ್ ವಲ್ಲಭಾಯಿ ಪಟೇಲ್, ಗುರು ನಾನಕ್ ಜೀ, ಗೌತಮ್ ಬುದ್ಧ, ಜೈನರು ಎಲ್ಲರೂ ದೇಶದಲ್ಲಿ ಒಟ್ಟಿಗೆ ಇರುತ್ತಾರೆ.

Bhabanipur Bypoll  ಮೋದಿ ಜೀ, ನಾವು ಭಾರತವನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ದೆಹಲಿ: ಬಿಜೆಪಿ ಒಂದು ‘ಜುಮ್ಲಾ’ ಪಕ್ಷ. ನಾವು ರಾಜ್ಯದಲ್ಲಿ ದುರ್ಗಾ ಪೂಜೆ, ಲಕ್ಷ್ಮಿ ಪೂಜೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸುಳ್ಳು ಹೇಳುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಹೇಳಿದ್ದಾರೆ. ಬುಧವಾರ ಭಬಾನಿಪುರದಲ್ಲಿ (Bhabanipur) ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ನಾವು ಭಾರತವನ್ನು ತಾಲಿಬಾನ್​​ನಂತೆ ಮಾಡಲು ಬಿಡುವುದಿಲ್ಲ. ಭಾರತವು ಒಗ್ಗಟ್ಟಾಗಿ ಉಳಿಯುತ್ತದೆ. ಗಾಂಧಿ ಜೀ, ನೇತಾಜಿ, ವಿವೇಕಾನಂದ, ಸರ್ದಾರ್ ವಲ್ಲಭಾಯಿ ಪಟೇಲ್, ಗುರು ನಾನಕ್ ಜೀ, ಗೌತಮ್ ಬುದ್ಧ, ಜೈನರು ಎಲ್ಲರೂ ದೇಶದಲ್ಲಿ ಒಟ್ಟಿಗೆ ಇರುತ್ತಾರೆ. ನಾವು ಭಾರತವನ್ನು ವಿಭಜಿಸಲು ಯಾರಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.


ಮಮತಾ ಬ್ಯಾನರ್ಜಿ ಮನೆಯ ಬಳಿ ಬಿಜೆಪಿ ಪ್ರಚಾರ ಮಾಡುತ್ತಿದ್ದ ಜನರಿಗೆ ತಡೆಯೊಡ್ಡಿದ ಪೊಲೀಸ್
ತನ್ನ ಕೆಲಸದ ಎರಡನೇ ದಿನದಂದು ಬಿಜೆಪಿಯ ಹೊಸ ಬಂಗಾಳದ ಮುಖ್ಯಸ್ಥರು ಕೋಲ್ಕತ್ತಾದ ಭವಾನಿಪುರ್ ಪ್ರದೇಶದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿಗಾಗಿ ಪ್ರಚಾರ ಮಾಡುತ್ತಿದ್ದಾಗ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ.

“ಪಶ್ಚಿಮ ಬಂಗಾಳ ಪೊಲೀಸ್ ಸೇವೆಯು ಪಶ್ಚಿಮ ಬಂಗಾಳ ‘ಪಿಶಿ’ ಸೇವೆಯಾಗಿ ಮಾರ್ಪಟ್ಟಿದೆ” ಎಂದು ಸುಕಾಂತ ಮಜುಂದಾರ್ ಮಾಧ್ಯಮಗಳಿಗೆ ಹೇಳಿದರು. ಪಿಶಿ ಎಂದರೆ ಬಂಗಾಳಿಯಲ್ಲಿ ಅತ್ತೆ ಎಂದರ್ಥ. ಮಮತಾ ಬ್ಯಾನರ್ಜಿ ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಪಕ್ಷದಲ್ಲಿ ಉತ್ತೇಜಿಸುವ ಮೂಲಕ ಸ್ವಜನ ಪಕ್ಷಪಾತ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.


ಆದಾಗ್ಯೂ, ಮುಖ್ಯಮಂತ್ರಿಯ ನಿವಾಸವು ಹೆಚ್ಚಿನ ಭದ್ರತೆಯ ಪ್ರದೇಶಕ್ಕೆ ಒಳಪಟ್ಟಿದೆ. ಬಿಜೆಪಿ ನಾಯಕರೊಂದಿಗೆ ಹೆಚ್ಚಿನ ಜನರಿದ್ದರು. ಹಾಗಾಗಿ ಅವರನ್ನು ತಡೆದೆವು ಎಂದು ಪೊಲೀಸರು ಹೇಳಿದ್ದಾರೆ.

ತೃಣಮೂಲ ಪಕ್ಷದ ನಾಯಕ ತಪಸ್ ರಾಯ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು, ಬಿಜೆಪಿಯ ಹೊಸ ರಾಜ್ಯ ಮುಖ್ಯಸ್ಥರು “ಹಳೆಯವರಂತೆ ನಿರ್ಲಜ್ಜ” ಎಂದು ಹೇಳಿದರು. ಉತ್ತರ ಬಂಗಾಳದ ಬಾಲುರ್‌ಘಾಟ್‌ನ ಬಿಜೆಪಿಯ ಸಂಸದ 41 ವರ್ಷದ ಸುಕಾಂತ ಮಜುಂದಾರ್ ಅವರನ್ನು ಬಂಗಾಳ ಘಟಕದ ಮುಖ್ಯಸ್ಥರಾಗಿ ಎರಡು ದಿನಗಳ ಹಿಂದೆ ಬಿಜೆಪಿ ನೇಮಕ ಮಾಡಿತ್ತು.

ಇದನ್ನೂ ಓದಿ:Sukanta Majumdar ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಕ್ತಿ ಪರಿಚಯ 

ಇದನ್ನೂ ಓದಿ: ಮೋದಿ ಬಳಿಕ 2024ರಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದು; ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಭವಿಷ್ಯ

(We won’t let you make India like Taliban West Bengal chief minister Mamata Banerjee lashes out Modi)

Read Full Article

Click on your DTH Provider to Add TV9 Kannada