CoWIN Certificate | ಕೋವಿಶೀಲ್ಡ್ ಬಳಿಕ ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಬಗ್ಗೆ ಇಂಗ್ಲೆಂಡ್ ತಗಾದೆ

Covid Vaccine Certificate: ನಾವು ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆ ಎಂದು ಸ್ವೀಕಾರ ಮಾಡುತ್ತೇವೆ. ಆದರೆ, ಕೋವಿನ್ ಸರ್ಟಿಫಿಕೆಟ್ ಅನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಇಂಗ್ಲೆಂಡ್ ಸ್ಪಷ್ಟಪಡಿಸಿದೆ.

CoWIN Certificate | ಕೋವಿಶೀಲ್ಡ್ ಬಳಿಕ ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಬಗ್ಗೆ ಇಂಗ್ಲೆಂಡ್ ತಗಾದೆ
ಕೋವಿನ್ ಆ್ಯಪ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 22, 2021 | 3:33 PM

ನವದೆಹಲಿ: ಇಂಗ್ಲೆಂಡ್​ನಲ್ಲಿ ಕೋವಿಶೀಲ್ಡ್ ಲಸಿಕೆಗೆ ಕೊನೆಗೂ ಮಾನ್ಯತೆ ನೀಡಲಾಗಿದ್ದು, ಈ ಲಸಿಕೆಯನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಇದರಿಂದ ಅ. 4ರಿಂದ ಕೋವಿಶೀಲ್ಡ್ ಲಸಿಕೆ (Covishield Vaccine) ಪಡೆದ ಭಾರತೀಯರು ಇಂಗ್ಲೆಂಡ್​ಗೆ ಪ್ರಯಾಣ ಮಾಡಲು ಅನುಮತಿ ಸಿಕ್ಕಂತಾಗಿದೆ. ಆದರೆ, ಕೋವಿಶೀಲ್ಡ್​ ಲಸಿಕೆ ಪಡೆದವರು ಇಂಗ್ಲೆಂಡ್​ನಲ್ಲಿ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿದೆ. ಈ ಕುರಿತು ಇಂಗ್ಲೆಂಡ್​ ಹೈ ಕಮಿಷನ್ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ನೀಡಲಾಗಿರುವ ಕೋವಿಶೀಲ್ಡ್ ಲಸಿಕೆ ಬಗ್ಗೆ ನಮ್ಮ ಯಾವ ತಕರಾರೂ ಇಲ್ಲ. ಆದರೆ, ಭಾರತದ ಕೋವಿನ್ ಆ್ಯಪ್ (CoWIN App) ಹಾಗೂ ಕೊವಿಡ್ ಸರ್ಟಿಫಿಕೆಟ್​ಗಳಲ್ಲಿ (Covid Vaccine Certificate) ಸಮಸ್ಯೆ ಇದೆ ಎಂದು ಹೇಳಿದೆ.

ಇಂಗ್ಲೆಂಡ್​ನಲ್ಲಿ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡದಿರುವುದಕ್ಕೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇಂಗ್ಲೆಂಡ್​ನಲ್ಲಿ ನೀಡಲಾಗುವ ಆಸ್ಟ್ರಾಜೆನಿಕಾ ಲಸಿಕೆಯ ಭಾರತದ ಆವೃತ್ತಿಯಾದ ಕೋವಿಶೀಲ್ಡ್‌ನ ಎರಡು ಡೋಸ್ ಪಡೆದಿದ್ದರೂ ಅವರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ ಎಂದು ಇಂಗ್ಲೆಂಡ್​ನಲ್ಲಿ ಪರಿಗಣಿಸಲಾಗುತ್ತಿತ್ತು. ಅಲ್ಲದೆ, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 10 ದಿನಗಳ ಕ್ವಾರಂಟೈನ್ ಕೂಡ ಕಡ್ಡಾಯವಾಗಿತ್ತು. ಕೋವಿಶೀಲ್ಡ್ ಅನ್ನೇ ಬ್ರಿಟನ್​ನಲ್ಲಿ ಅಸ್ಟ್ರಾಜೆನಿಕಾ ಲಸಿಕೆ ಎಂಬ ಹೆಸರಿನಲ್ಲಿ ನೀಡಲಾಗುತ್ತಿದೆ, ಆದರೂ ಕೋವಿಶೀಲ್ಡ್​ಗೆ ಮಾನ್ಯತೆ ನೀಡದಿರುವುದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಕೋವಿಶೀಲ್ಡ್​ ಕೂಡ ಅನುಮೋದಿತ ಲಸಿಕೆ ಎಂದು ಘೋಷಿಸಿರುವ ಇಂಗ್ಲೆಂಡ್ ಭಾರತದ ಕೊವಿಡ್ ಲಸಿಕೆಯ ಸರ್ಟಿಫಿಕೆಟ್ ಬಗ್ಗೆ ತಗಾದೆ ತೆಗೆದಿದೆ. ನಾವು ಕೋವಿಶೀಲ್ಡ್ ಲಸಿಕೆಯನ್ನು ಅನುಮೋದಿತ ಲಸಿಕೆ ಎಂದು ಸ್ವೀಕಾರ ಮಾಡುತ್ತೇವೆ. ಆದರೆ, ಈ ಲಸಿಕೆ ಹಾಕಿಸಿಕೊಂಡ ಭಾರತೀಯರು ಕ್ವಾರಂಟೈನ್ ಆಗಬೇಕಾದುದು ಕಡ್ಡಾಯ ಹಾಗೇ ಅವರಿಗೆ ಬ್ರಿಟನ್ ಏರ್​ಪೋರ್ಟ್​ನಲ್ಲಿ ಕೂಡ ಕೊವಿಡ್ ಟೆಸ್ಟ್ ಮಾಡಲಾಗುತ್ತದೆ. ಏಕೆಂದರೆ ನಾವು ಕೋವಿನ್ ಸರ್ಟಿಫಿಕೆಟ್ ಅನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಇಂಗ್ಲೆಂಡ್ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಕೊರೊನಾ ಲಸಿಕೆಗಳನ್ನು ಹಾಕಿಸಿಕೊಂಡವರ ಮಾಹಿತಿಯನ್ನು ಕೋವಿನ್ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಆಧಾರ್ ಸಂಖ್ಯೆಯ ಮೂಲಕ ಈ ಆ್ಯಪ್​ನಲ್ಲಿ ಕೊವಿಡ್ ಲಸಿಕೆಯ ಡೋಸ್​ಗಳ ಸರ್ಟಿಫಿಕೆಟ್ ನೀಡಲಾಗುತ್ತದೆ. ಇದರಿಂದ ಭಾರತೀಯರು ಸರ್ಟಿಫಿಕೆಟ್ ಡೌನ್​ಲೋಡ್ ಮಾಡಿಕೊಳ್ಳಬಹುದು. ಆದರೆ, ಈ ಬಗ್ಗೆ ಭಾರತದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್​ಎಸ್​ ಶರ್ಮ ಪ್ರತಿಕ್ರಿಯೆ ನೀಡಿದ್ದು, ಕೋವಿನ್ ಆ್ಯಪ್ ಹಾಗೂ ಕೋವಿಡ್ ಸರ್ಟಿಫಿಕೆಟ್​ಗಳ ವಿಷಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.

ಇಂಗ್ಲೆಂಡ್ ಜಾರಿಗೊಳಿಸಿದ್ದ ನಿಯಮದ ಪ್ರಕಾರ, ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾ, ಫೈಜರ್- ಬಯೋಎನ್‌ಟೆಕ್‌ ಅಥವಾ ಮಾಡರ್ನಾದ ಡಬಲ್‌ ಡೋಸ್‌ ಲಸಿಕೆಯ ಎರಡೂ ಡೋಸ್‌ ಪಡೆದವರು ಅಥವಾ ಸಿಂಗಲ್ ಡೋಸ್‌ನ ಜಾನ್ಸನ್‌ ಆ್ಯಂಡ್ ಜಾನ್ಸನ್ ಲಸಿಕೆ ಪಡೆದವರನ್ನು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದವರು ಎಂದು ಸೂಚಿಸಲಾಗಿತ್ತು. ಇದೀಗ ಆ ಪಟ್ಟಿಗೆ ಕೋವಿಶೀಲ್ಡ್ ಅನ್ನು ಕೂಡ ಸೇರಿಸಲಾಗಿದೆ. ಆಸ್ಟ್ರೇಲಿಯಾ, ಆ್ಯಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಬಹ್ರೇನ್, ಬ್ರೂನಿ, ಕೆನಡಾ, ಡೊಮಿನಿಕಾ, ಇಸ್ರೇಲ್, ಜಪಾನ್, ಕುವೈತ್, ಮಲೇಷ್ಯಾ, ನ್ಯೂಜಿಲ್ಯಾಂಡ್, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ, ದಕ್ಷಿಣ ಕೊರಿಯಾ ಅಥವಾ ತೈವಾನ್‌ನ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಅಡಿಯಲ್ಲಿ ಲಸಿಕೆ ಪಡೆದವರನ್ನು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದವರು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಇಂಗ್ಲೆಂಡ್​ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ; ಭಾರತೀಯರಿಗೆ ಕ್ವಾರಂಟೈನ್ ಮಾತ್ರ ಕಡ್ಡಾಯ

Covid-19: ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

(CoWIN App Problem Is not Covishield But Indias Covid Vaccine Certificate Says UK CoWIN Certificate)

Published On - 3:19 pm, Wed, 22 September 21

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ