AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19: ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

Covid Vaccine: ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರ 84 ದಿನಗಳಾಗಿಯೇ ಮುಂದುವರೆಯಲಿದೆ ಎಂದು ಸರ್ಕಾರ ಘೋಷಿಸಿದೆ.

Covid-19: ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ
ಕೋವಿಶೀಲ್ಡ್ ಲಸಿಕೆ
TV9 Web
| Edited By: |

Updated on:Aug 26, 2021 | 10:05 PM

Share

ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಸರ್ಕಾರವೇ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ (Covishield) , ಕೊವ್ಯಾಕ್ಸಿನ್ (Covaxin) , ಸ್ಪುಟ್ನಿಕ್-ವಿ (Sputnik-V ) ಲಸಿಕೆಯ ಡೋಸ್​ಗಳ ನಡುವಿನ ಅಂತರ ತಗ್ಗಿಸುವ ಕುರಿತು ಯಾವುದೇ ಪ್ರಸ್ತಾವನೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರ 84 ದಿನಗಳಾಗಿಯೇ ಮುಂದುವರೆಯಲಿದೆ ಎಂದು ಸರ್ಕಾರ ಘೋಷಿಸಿದೆ.

ಭಾರತದಲ್ಲಿ ಕೊವಿಡ್ ಲಸಿಕೆಯ ಡೋಸ್​ಗಳ ಅಂತರದ ಬಗ್ಗೆ NTAGI ತೀರ್ಮಾನ ತೆಗೆದುಕೊಳ್ಳುತ್ತದೆ. ಕೋವಿಶೀಲ್ಡ್​ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್​ನ ನಡುವೆ ಸದ್ಯಕ್ಕೆ 12ರಿಂದ 16 ವಾರಗಳ ಅಂತರವಿದೆ. ಈಗಾಗಲೇ 3 ಬಾರಿ ಕೋವಿಶೀಲ್ಡ್​ ಲಸಿಕೆಯ ಡೋಸ್​ನ ಅಂತರವನ್ನು ಹೆಚ್ಚಿಸಲಾಗಿದೆ. ಈ ಅಂತರವನ್ನು ತಗ್ಗಿಸುವ ಬಗ್ಗೆ ಈಗ ಚರ್ಚೆಗಳು ನಡೆದಿವೆ ಎನ್ನಲಾಗಿತ್ತು. ಆದರೆ, ಈ ಸುದ್ದಿಯನ್ನು ಸರ್ಕಾರ ತಳ್ಳಿ ಹಾಕಿದೆ.

ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವೆ ಆರಂಭದಲ್ಲಿ 4ರಿಂದ 6 ವಾರಗಳ ಅಂತರವಿತ್ತು. ಬಳಿಕ ಅದನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಲಾಯಿತು. ನಂತರ ಕಳೆದ ಮೇ ತಿಂಗಳಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ವಿಸ್ತರಿಸಲಾಯಿತು. ಮುಂದಿನ ಮೂರು ತಿಂಗಳವರೆಗೆ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಗಳನ್ನು ಸುಮಾರು 78 ಕೋಟಿ ಡೋಸ್‌ಗಳಷ್ಟು ಉತ್ಪಾದನೆ ಮಾಡಬೇಕೆಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸೆಪ್ಟೆಂಬರ್ ನಲ್ಲಿ 26 ಕೋಟಿ ಡೋಸ್ ಮತ್ತು ಅಕ್ಟೋಬರ್ ನಲ್ಲಿ 28 ಕೋಟಿ ಡೋಸ್​ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್​ ಲಸಿಕೆಯನ್ನು ವಿತರಿಸಲಾಗುವುದು. ಸದ್ಯಕ್ಕೆ ಕೊವಿಡ್ ಲಸಿಕೆಗಳ ಡೋಸ್​ಗಳ ನಡುವೆ ಈಗಿರುವ ಅಂತರವೇ ಮುಂದುವರೆಯಲಿದೆ.

ಇದನ್ನೂ ಓದಿ: Covishield Vaccine: ಸದ್ಯದಲ್ಲೇ ಕೋವಿಶೀಲ್ಡ್ ಲಸಿಕೆಯ ಡೋಸ್​ಗಳ ಅಂತರ ಇಳಿಕೆ ಸಾಧ್ಯತೆ

Sputnik V: ಕೋವಿಶೀಲ್ಡ್​, ಕೋವಾಕ್ಸಿನ್​ ನಂತರ ಮತ್ತೊಂದು ಕೊರೊನಾ ಲಸಿಕೆ, ಸ್ಪುಟ್ನಿಕ್​ ವಿ ಬೆಂಗಳೂರಿ​ನಲ್ಲಿ ಲಭ್ಯ

(No Plan yet to Revise Covishield Vaccine Gap Central Government Clarifies)

Published On - 10:04 pm, Thu, 26 August 21