AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covishield Vaccine: ಸದ್ಯದಲ್ಲೇ ಕೋವಿಶೀಲ್ಡ್ ಲಸಿಕೆಯ ಡೋಸ್​ಗಳ ಅಂತರ ಇಳಿಕೆ ಸಾಧ್ಯತೆ

Covid-19 Vaccine | ಈಗ ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ.

Covishield Vaccine: ಸದ್ಯದಲ್ಲೇ ಕೋವಿಶೀಲ್ಡ್ ಲಸಿಕೆಯ ಡೋಸ್​ಗಳ ಅಂತರ ಇಳಿಕೆ ಸಾಧ್ಯತೆ
ಸೆರಮ್ ಇನ್ಸ್‌ಟಿಟ್ಯೂಟ್‌ನ ಕೊವಿಶೀಲ್ಡ್ ಲಸಿಕೆ
TV9 Web
| Edited By: |

Updated on: Aug 26, 2021 | 8:53 PM

Share

ನವದೆಹಲಿ: ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ಲಸಿಕೆ (Coronavirus Vaccine) ಅಭಿಯಾನ ನಡೆಯುತ್ತಿದ್ದು, ಕೋವಿಡ್ ಲಸಿಕೆಗಳ (Covid-19 Vaccine) ಕೊರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಡೋಸ್​ಗಳ ನಡುವಿನ ಅಂತರವನ್ನು ಹೆಚ್ಚಿಸುವ ಬಗ್ಗೆ ಈ ಹಿಂದೆ ಕೋವಿಶೀಲ್ಡ್​ ಲಸಿಕೆಯನ್ನು(Covishield Vaccine)  ಸಿದ್ಧಪಡಿಸುತ್ತಿರುವ ಸೀರಂ ಸಂಸ್ಥೆ (Serum Institute) ಪ್ರಸ್ತಾವನೆ ಇಟ್ಟಿದ್ದರು. ಅದರಂತೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 16 ವಾರಗಳಿಗೆ ವಿಸ್ತರಣೆ ಮಾಡಲಾಗಿತ್ತು. ಆದರೆ, ಈಗ ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ.

ಭಾರತದಲ್ಲಿ ಕೊವಿಡ್ ಲಸಿಕೆಯ ಡೋಸ್​ಗಳ ಅಂತರದ ಬಗ್ಗೆ NTAGI ತೀರ್ಮಾನ ತೆಗೆದುಕೊಳ್ಳುತ್ತದೆ. ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಲಾಗಿದ್ದು, ಈ ಲಸಿಕೆಯ ಲಭ್ಯತೆಯ ಆಧಾರದ ಮೇಲೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಕೋವಿಶೀಲ್ಡ್​ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್​ನ ನಡುವೆ ಸದ್ಯಕ್ಕೆ 12ರಿಂದ 16 ವಾರಗಳ ಅಂತರವಿದೆ. ಈಗಾಗಲೇ 3 ಬಾರಿ ಕೋವಿಶೀಲ್ಡ್​ ಲಸಿಕೆಯ ಡೋಸ್​ನ ಅಂತರವನ್ನು ಹೆಚ್ಚಿಸಲಾಗಿದೆ. ಈ ಅಂತರವನ್ನು ತಗ್ಗಿಸುವ ಬಗ್ಗೆ ಈಗ ಚರ್ಚೆಗಳು ನಡೆದಿವೆ.

ಕೋವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವೆ ಆರಂಭದಲ್ಲಿ 4ರಿಂದ 6 ವಾರಗಳ ಅಂತರವಿತ್ತು. ಬಳಿಕ ಅದನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಲಾಯಿತು. ನಂತರ ಕಳೆದ ಮೇ ತಿಂಗಳಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ವಿಸ್ತರಿಸಲಾಯಿತು. ಮುಂದಿನ ಮೂರು ತಿಂಗಳವರೆಗೆ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಗಳನ್ನು ಸುಮಾರು 78 ಕೋಟಿ ಡೋಸ್‌ಗಳಷ್ಟು ಉತ್ಪಾದನೆ ಮಾಡಬೇಕೆಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸೆಪ್ಟೆಂಬರ್ ನಲ್ಲಿ 26 ಕೋಟಿ ಡೋಸ್ ಮತ್ತು ಅಕ್ಟೋಬರ್ ನಲ್ಲಿ 28 ಕೋಟಿ ಡೋಸ್​ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್​ ಲಸಿಕೆಯನ್ನು ವಿತರಿಸಲಾಗುವುದು.

ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದೆ. ಅದು ಯಶಸ್ವಿಯಾದರೆ ಸೆಪ್ಟೆಂಬರ್ ವೇಳೆಗೆ ಪ್ರತಿ ತಿಂಗಳಿಗೆ 10 ಕೋಟಿ ಕೊವ್ಯಾಕ್ಸಿನ್ ಡೋಸ್​ಗಳನ್ನು ಉತ್ಪಾದಿಸಲಾಗುವುದು.

ಈಗಾಗಲೇ ಭಾರತ ಮೂಲದ ಜೈಡಸ್ ಕ್ಯಾಡಿಲಾ ಕಂಪನಿಯು ಜೈಕೋವ್-ಡಿ ಎಂಬ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಜೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಬಹುದು. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್​ನಲ್ಲಿ ಈ ಲಸಿಕೆ ಲಭ್ಯವಾಗಲಿದೆ. ಸೆಪ್ಟೆಂಬರ್​ನಿಂದ ಮಕ್ಕಳಿಗೆ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ. ಇದು ಭಾರತದಲ್ಲಿ ಲಭ್ಯವಾಗುತ್ತಿರುವ 6ನೇ ಕೊವಿಡ್ ಲಸಿಕೆಯಾಗಿದೆ.

ಅಕ್ಟೋಬರ್ ತಿಂಗಳ ವೇಳೆಗೆ ಡಿಎನ್​ಎ ಆಧಾರಿತ ಏಕೈಕ ಕೊವಿಡ್ ಲಸಿಕೆಯಾಗಿರುವ ಜೈಕೋವ್-ಡಿ ಲಸಿಕೆಯನ್ನು ತಿಂಗಳಿಗೆ 1 ಕೋಟಿ ಡೋಸ್ ಉತ್ಪಾದನೆ ಮಾಡುವುದಾಗಿ ಜೈಡಸ್ ಕ್ಯಾಡಿಲಾ ಸಂಸ್ಥೆ ಘೋಷಿಸಿದೆ. ಹಾಗೇ, 2022ರ ಜನವರಿ ಅಂತ್ಯದ ವೇಳೆಗೆ ಪ್ರತಿ ತಿಂಗಳಿಗೆ 4ರಿಂದ 5 ಕೋಟಿ ಕೊವಿಡ್ ಲಸಿಕೆಗಳನ್ನು ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಜೈಡಸ್ ಕ್ಯಾಡಿಲಾ ಕಂಪನಿ ತಿಳಿಸಿದೆ.

ಇದನ್ನೂ ಓದಿ: ZyCov-D Vaccine: ಅಕ್ಟೋಬರ್​ನಲ್ಲಿ 12ರಿಂದ 17 ವರ್ಷದೊಳಗಿನ ಮಕ್ಕಳಿಗೆ ಜೈಕೋವ್-ಡಿ ಲಸಿಕೆ ಲಭ್ಯ

Covid Vaccine: 12 ವರ್ಷ ಮೇಲ್ಪಟ್ಟವರಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ; ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲ ಆದ್ಯತೆ

(Covishield Vaccine Dose Gap May be Reduced Decision Soon Union Government Sources)

Follow Us
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ