ಪಶ್ಚಿಮ ಬಂಗಾಳ ಚುನಾವಣೆಯ ವೇಳೆ ವಿವಾದಾತ್ಮಕ ಭಾಷಣ; ಕೊಲ್ಕತ್ತಾ ಪೊಲೀಸರಿಂದ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿಚಾರಣೆ
Mithun Chakraborty: ಮಾರ್ಚ್ 7 ರಂದು, ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಚಕ್ರವರ್ತಿ, “ಅಮಿ ಜೊಲ್ಧೊರಾವ್ ನೊಯ್, ಬೇಲ್ ಬೊರಾವ್ ನೊಯ್ ಅಮಿ ಏಕ್ತಾ ಕೋಬ್ರಾ, ಎಕ್ ಚೊಬೋಲ್-ಇ ಚೋಬಿ (ವಿಷರಹಿತ ಹಾವು ಎಂದು ನನ್ನನ್ನು ತಪ್ಪಾಗಿ ಗ್ರಹಿಸಬೇಡಿ, ನಾನು ಕೋಬ್ರಾ, ಜನರನ್ನು ಒಂದೇ ಕಡಿತದಲ್ಲಿ ಕೊಲ್ಲಬಹುದು ') ಎಂದಿದ್ದರು.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ನಟ ಮತ್ತು ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿಯನ್ನು ಕೋಲ್ಕತಾ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ. ವರ್ಚುವಲ್ ವಿಚಾರಣೆ ಬೆಳಿಗ್ಗೆ 10:40 ಕ್ಕೆ ಪ್ರಾರಂಭವಾಗಿ ಸುಮಾರು 45 ನಿಮಿಷಗಳ ಕಾಲ ನಡೆಯಿತು.
ತನ್ನ ವಿರುದ್ಧ ಎಫ್‌ಐಆರ್ ರದ್ದುಪಡಿಸುವಂತೆ ಚಕ್ರವರ್ತಿ ಕಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದಾಗ್ಯೂ, ತನಿಖೆಯಲ್ಲಿ ಸಹಕರಿಸುವಂತೆ ನ್ಯಾಯಾಲಯವು ಅವರಿಗೆ ಸೂಚನೆ ನೀಡಿತು.
ಮಾರ್ಚ್ 7 ರಂದು, ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಚಕ್ರವರ್ತಿ, “ಅಮಿ ಜೊಲ್ಧೊರಾವ್ ನೊಯ್, ಬೇಲ್ ಬೊರಾವ್ ನೊಯ್ ಅಮಿ ಏಕ್ತಾ ಕೋಬ್ರಾ, ಎಕ್ ಚೊಬೋಲ್-ಇ ಚೋಬಿ (ವಿಷರಹಿತ ಹಾವು ಎಂದು ನನ್ನನ್ನು ತಪ್ಪಾಗಿ ಗ್ರಹಿಸಬೇಡಿ, ನಾನು ಕೋಬ್ರಾ, ಜನರನ್ನು ಒಂದೇ ಕಡಿತದಲ್ಲಿ ಕೊಲ್ಲಬಹುದು ‘) ಎಂದಿದ್ದರು.ಇದು 2006 ರಲ್ಲಿ ಅವರು ನಟಿಸಿದ ‘ಅಭಿಮನ್ಯು’ ಸಿನಿಮಾದ ಡೈಲಾಗ್ ಆಗಿದೆ.
Actor & BJP leader Mithun Chakraborty is being questioned virtually by Kolkata Police over his controversial speech during election campaigning for West Bengal polls. An FIR was registered in Maniktala for his speech.
(File photo) pic.twitter.com/SY9eQyXkTz
— ANI (@ANI) June 16, 2021
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರೊಬ್ಬರು ಮೇ 6 ರಂದು ಚಕ್ರವರ್ತಿ ವಿರುದ್ಧ ಬಿಜೆಪಿ ಕಾರ್ಯಕರ್ತರನ್ನು ” ಪ್ರಚೋದಿಸಿದರು” ಎಂಬ ಕಾರಣಕ್ಕೆ ಪೊಲೀಸ್ ದೂರು ದಾಖಲಿಸಿದ್ದರು. ದೂರಿನಲ್ಲಿ, “ಮಾರ್ಬೊ ಎಖಾನೆ ಲಾಶ್ ಪೋರ್ಬೆ ಶೋಶೇನ್” ಮತ್ತು “ಏಕ್ ಚೋಬೋಲ್ ಚೋಬಿ” ಎಂಬೀ ಮಾತುಗಳು ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಭಾಷಣ ರಾಜ್ಯದಲ್ಲಿ ಮತದಾನದ ನಂತರದ ಹಿಂಸಾಚಾರಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ, ಮತ್ತು ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳನ್ನು ಮಿಥುನ್ ನೀಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.
ಚಕ್ರವರ್ತಿಯನ್ನು ಪ್ರಶ್ನಿಸಲು ಪೊಲೀಸರಿಗೆ ಸಮಯ ನೀಡಿ ನ್ಯಾಯಾಲಯವು ಜೂನ್ 18 ರಂದು ವಿಚಾರಣೆಗೆ ನಿಗದಿಪಡಿಸಿತ್ತು. ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ರಾಜ್ಯದ ಹಲವಾರು ಸ್ಥಳಗಳಿಂದ ಘರ್ಷಣೆಗಳು ವರದಿಯಾಗಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ತಿಂಗಳು ರಾಜ್ಯದಲ್ಲಿ ನಡೆದ ಚುನಾವಣಾ ಹಿಂಸಾಚಾರದಲ್ಲಿ ಕನಿಷ್ಠ 16 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಿಥುನ್ ಚಕ್ರವರ್ತಿ ವಿರುದ್ಧ ಐಪಿಸಿ ಸೆಕ್ಷನ್ 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 504 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 505 (ಜನರನ್ನು ಪ್ರಚೋದಿಸುವ ಉದ್ದೇಶದಿಂದ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಣಿಕ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: West Bengal Assembly Elections 2021: ಚುನಾವಣೆ ಸಮೀಪಿಸುತ್ತಿದ್ದಂತೆ ಕೊಲ್ಕತ್ತಾ ಮತದಾರನಾದ ನಟ ಮಿಥುನ್ ಚಕ್ರವರ್ತಿ
Published On - 2:15 pm, Wed, 16 June 21