AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Taj Mahal: ವಿಶ್ವವಿಖ್ಯಾತ ತಾಜ್ ಮಹಲ್ ಪ್ರವಾಸಿಗರಿಗೆ ಓಪನ್; ಒಮ್ಮೆಗೆ 650 ಜನರ ಭೇಟಿಗೆ ಮಾತ್ರ ಅವಕಾಶ

ಈ ವರ್ಷದ ಮಾರ್ಚ್ ತಿಂಗಳಲ್ಲಿ ತಾಜ್ ಮಹಲ್ ಪ್ರವೇಶಕ್ಕೆ ಸಾರ್ವಜನಿಕರ ಪ್ರವೇಶ ಬಂದ್ ಮಾಡಲಾಗಿತ್ತು. ಈಗ ತಾಜ್ ಮಹಲ್​ಗೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

Taj Mahal: ವಿಶ್ವವಿಖ್ಯಾತ ತಾಜ್ ಮಹಲ್ ಪ್ರವಾಸಿಗರಿಗೆ ಓಪನ್; ಒಮ್ಮೆಗೆ 650 ಜನರ ಭೇಟಿಗೆ ಮಾತ್ರ ಅವಕಾಶ
ತಾಜ್​ಮಹಲ್​
Follow us
TV9 Web
| Updated By: ganapathi bhat

Updated on: Jun 16, 2021 | 3:06 PM

ದೆಹಲಿ: ವಿಶ್ವವಿಖ್ಯಾತ ಪ್ರವಾಸಿ ತಾಣ ತಾಜ್‌ ಮಹಲ್ ಇಂದಿನಿಂದ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ ಮಹಲ್ ಇಂದಿನಿಂದ (ಜೂನ್ 16) ರಿ ಓಪನ್ ಆಗಲಿದೆ. ಹಾಗೆಂದು, ಪ್ರವಾಸಿಗರು ನೇರವಾಗಿ ತಾಜ್ ಮಹಲ್​ಗೆ ಭೇಟಿ ನೀಡುವಂತಿಲ್ಲ. ಆನ್​ಲೈನ್ ವಿಧಾನದ ಮೂಲಕ ತಾಜ್ ಮಹಲ್ ಪ್ರವೇಶಕ್ಕೆ ಟಿಕೆಟ್ ಕಾಯ್ದಿರಿಸಿಕೊಂಡು ಬಳಿಕ, ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

ವಿಶ್ವದ ಎಂಟು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಭೇಟಿಗೆ ಆನ್‌ಲೈನ್‌ನಲ್ಲಿ ಪ್ರವೇಶ ಟಿಕೆಟ್ ಕಾಯ್ದಿರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮಾಸ್ಕ್ ಧರಿಸದವರಿಗೆ ತಾಜ್‌ ಮಹಲ್‌ಗೆ ಪ್ರವೇಶವಿಲ್ಲ ಎಂದು ಸೂಚಿಸಲಾಗಿದೆ. ಒಮ್ಮೆಗೆ 650 ಜನರಿಗೆ ಮಾತ್ರ ತಾಜ್‌ ಮಹಲ್ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ತಾಜ್ ಮಹಲ್ ಪ್ರವೇಶಕ್ಕೆ ಸಾರ್ವಜನಿಕರ ಪ್ರವೇಶ ಬಂದ್ ಮಾಡಲಾಗಿತ್ತು. ಈಗ ತಾಜ್ ಮಹಲ್​ಗೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಶೇಕಡಾ 84 ರಷ್ಟು ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆ.

2019 ರಲ್ಲಿ ಉತ್ತರಪ್ರದೇಶ ರಾಜ್ಯಕ್ಕೆ 54 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ, 2020 ರಲ್ಲಿ 8.7 ಕೋಟಿ ಪ್ರವಾಸಿಗರು ಮಾತ್ರ ರಾಜ್ಯಕ್ಕೆ ಭೇಟಿ ‌ನೀಡಿದ್ದಾರೆ. ಆಗ್ರಾಗೆ 2019 ರಲ್ಲಿ 1.09 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರೆ, ಆಗ್ರಾಗೆ 2020 ರಲ್ಲಿ 27 ಲಕ್ಷ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬೌದ್ಧ ಧರ್ಮದ ಪ್ರೇಕ್ಷಣೀಯ ಸ್ಥಳಗಳು ಇವೆ. ಸಾರನಾಥ, ಕೌಶಂಭಿ, ಖುಷಿ ನಗರ ಕೂಡ ಪ್ರವಾಸಿ ಸ್ಥಳಗಳಾಗಿವೆ. ವಾರಾಣಸಿ ಹಿಂದೂ ಧಾರ್ಮಿಕ ಯಾತ್ರಾಸ್ಥಳವಾಗಿದೆ. 2019 ಪ್ರಯಾಗರಾಜ್, ಕುಂಭಮೇಳಕ್ಕೆ 24 ಕೋಟಿ ಪ್ರವಾಸಿಗರು ಆಗಮಿಸಿದ್ದರು. 2018 ರಲ್ಲಿ ಉತ್ತರಪ್ರದೇಶಕ್ಕೆ 29 ಕೋಟಿ ಪ್ರವಾಸಿಗರ ಭೇಟಿಯಾಗಿತ್ತು.

ಕೊರೊನಾ ಸೋಂಕು ಕಾರಣದಿಂದ ಪ್ರವಾಸೋದ್ಯಮ ಕೂಡ ಸಂಕಷ್ಟದ ಸ್ಥಿತಿ ಎದುರಿಸುತ್ತಿತ್ತು. 2020ರ ಬಳಿಕ ಪ್ರವಾಸೋದ್ಯಮ ಕುಸಿತ ಕಂಡಿತ್ತು. ಕೊರೊನಾ ಮೊದಲ ಅಲೆ ಚೇತರಿಕೆ ಬಳಿಕ ಮತ್ತೆ ಎರಡನೇ ಅಲೆ ಭಾರೀ ಹೊಡೆತ ನೀಡಿತ್ತು. ಇದೀಗ ಕೊವಿಡ್-19 ಎರಡನೇ ಅಲೆ ಇಳಿಕೆಯಾಗುತ್ತಿದ್ದಂತೆ, ವಿಶ್ವವಿಖ್ಯಾತ ತಾಜ್‌ ಮಹಲ್ ರಿ ಓಪನ್ ಆಗಿದೆ.

ಇದನ್ನೂ ಓದಿ: ಮತ್ತೆ ಬಾಗಿಲು ತೆರೆಯಲಿವೆ ಕೇಂದ್ರ ಸಂರಕ್ಷಿತ ಸ್ಮಾರಕಗಳು; ಜೂ.16ರಿಂದ ತಾಜ್​ಮಹಲ್​ ಭೇಟಿಗೆ ಅವಕಾಶ

ಗಟ್ಟಿಮೇಳ: ತಾಜ್ ಮಹಲ್ ಮುಂದೆ ಅಮೂಲ್ಯಾಗೆ ಪ್ರೇಮ ನಿವೇದನೆ ಮಾಡಲಿದ್ದಾರಾ ವೇದಾಂತ್?

ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ