ಮತ್ತೆ ಬಾಗಿಲು ತೆರೆಯಲಿವೆ ಕೇಂದ್ರ ಸಂರಕ್ಷಿತ ಸ್ಮಾರಕಗಳು; ಜೂ.16ರಿಂದ ತಾಜ್​ಮಹಲ್​ ಭೇಟಿಗೆ ಅವಕಾಶ

ಮತ್ತೆ ಬಾಗಿಲು ತೆರೆಯಲಿವೆ ಕೇಂದ್ರ ಸಂರಕ್ಷಿತ ಸ್ಮಾರಕಗಳು; ಜೂ.16ರಿಂದ ತಾಜ್​ಮಹಲ್​ ಭೇಟಿಗೆ ಅವಕಾಶ
ತಾಜ್​ಮಹಲ್​

ದೇಶಾದ್ಯಂತ ಸುಮಾರು 3691 ಕೇಂದ್ರ ಸಂರಕ್ಷಿತ ಮ್ಯೂಸಿಯಂಗಳು, ಪುರಾತತ್ವ ಸ್ಥಳಗಳು ಇವೆ. ಕಳೆದವರ್ಷ ಮಾರ್ಚ್​ 17ರಿಂದ ಇವೆಲ್ಲವನ್ನೂ ಬಂದ್​ ಮಾಡಿ, ಜುಲೈ 6ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

TV9kannada Web Team

| Edited By: Lakshmi Hegde

Jun 15, 2021 | 9:53 AM

ಕೊವಿಡ್​ 19 ಎರಡನೇ ಅಲೆ ಉಲ್ಬಣಗೊಂಡ ಬೆನ್ನಲ್ಲೇ ಬಾಗಿಲು ಮುಚ್ಚಲ್ಪಟ್ಟಿದ್ದ ಕೇಂದ್ರ ಸಂರಕ್ಷಿತ ಸ್ಮಾರಕಗಳು ಜೂ.16(ನಾಳೆ)ರಿಂದ ಮತ್ತೆ ತೆರೆಯಲಿವೆ ಎಂದು ಭಾರತೀಯ ಪುರಾತತ್ವ ಇಲಾಖೆ (ASI) ತಿಳಿಸಿದೆ. ತಾಜ್​ ಮಹಲ್​ ಸೇರಿ ಎಲ್ಲ ಕೇಂದ್ರ ಸಂರಕ್ಷಿತ ಮ್ಯೂಸಿಯಂಗಳು ಓಪನ್​ ಆಗಲಿದ್ದು, ಪ್ರವಾಸಿಗರು ಆನ್​​ಲೈನ್​ ಮೂಲಕ ಪ್ರವೇಶ ಟಿಕೆಟ್​ ಬುಕ್​ ಮಾಡಿಕೊಳ್ಳಬಹುದಾಗಿದೆ.

ಏಪ್ರಿಲ್​​ನಿಂದ ಕೊವಿಡ್​ 19 ಸೋಂಕು ಅತ್ಯಂತ ಹೆಚ್ಚಾಗಿ ಬಾಧಿಸಲು ಶುರವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಂಪುಕೋಟೆ, ತಾಜ್​ಮಹಲ್​, ಅಜಂತಾ ಸೇರಿ ಎಲ್ಲ ಕೇಂದ್ರಸಂರಕ್ಷಿತ ತಾಣಗಳನ್ನೂ ಬಂದ್​ ಮಾಡುವುದಾಗಿ ಏಪ್ರಿಲ್​ 15ರಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಲ್ಹಾದ್ ಸಿಂಗ್​ ಏಪ್ರಿಲ್​ 15ರಂದು ಹೇಳಿದ್ದರು. ಇದೀಗ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕ್ರಮೇಣ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಂಡು ಮತ್ತೆ ತೆರೆಯುವುದಾಗಿ ಸಚಿವಾಲಯ ತಿಳಿಸಿದೆ. ಕಳೆದವರ್ಷವೂ ಸಹ ದೇಶಾದ್ಯಂತ ಲಾಕ್​ಡೌನ್​ ಇದ್ದ ಕಾರಣ 100 ದಿನಗಳ ಕಾಲದ ತಾಜ್​ಮಹಲ್​, ಕೆಂಪುಕೋಟೆ ಸೇರಿ ಎಲ್ಲ ತಾಣಗಳಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು.

ದೇಶಾದ್ಯಂತ ಸುಮಾರು 3691 ಕೇಂದ್ರ ಸಂರಕ್ಷಿತ ಮ್ಯೂಸಿಯಂಗಳು, ಪುರಾತತ್ವ ಸ್ಥಳಗಳು ಇವೆ. ಕಳೆದವರ್ಷ ಮಾರ್ಚ್​ 17ರಿಂದ ಇವೆಲ್ಲವನ್ನೂ ಬಂದ್​ ಮಾಡಿ, ಜುಲೈ 6ರಿಂದ ಮತ್ತೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ತಾಜ್​ಮಹಲ್​ ಕಂಟೇನ್​​ಮೆಂಟ್​ ವಲಯವಾಗಿ, ಸೆಪ್ಟೆಂಬರ್​ನಲ್ಲಿ ತೆರೆಯಲ್ಪಟ್ಟಿತ್ತು. ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ತಾಜ್​ಮಹಲ್​ಗೆ ವಾರ್ಷಿಕವಾಗಿ 70-80 ಲಕ್ಷ ಜನರು ಭೇಟಿಕೊಡುತ್ತಾರೆ. ಆದಾಯದ ಪ್ರಮುಖ ತಾಣವಾಗಿದೆ.

ಇದನ್ನೂ ಓದಿ: Karnataka Weather: ಕರಾವಳಿ ಜಿಲ್ಲೆಗಳು -ಮಲೆನಾಡು ಘಟ್ಟಗಳಲ್ಲಿ ಇನ್ನೂ 3 ದಿನ ಮುಂಗಾರು ಅಬ್ಬರ, ಆರೆಂಜ್ ಅಲರ್ಟ್​​

Taj Mahal and other centrally protected monuments will reopen on June 16

Follow us on

Most Read Stories

Click on your DTH Provider to Add TV9 Kannada