ಪಶ್ಚಿಮ ಬಂಗಾಳದ ವಿಪಕ್ಷ ನಾಯಕರಾಗಿ ಸುವೇಂದು ಅಧಿಕಾರಿ ಅವಿರೋಧ ಆಯ್ಕೆ

Rashmi Kallakatta

|

Updated on:May 10, 2021 | 7:07 PM

Suvendu Adhikari: ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಂತರ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಸುವೇಂದು ಅಧಿಕಾರಿಯನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ವಿಪಕ್ಷ ನಾಯಕರಾಗಿ ಸುವೇಂದು ಅಧಿಕಾರಿ ಅವಿರೋಧ ಆಯ್ಕೆ
ಸುವೇಂದು ಅಧಿಕಾರಿ
Follow us

ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಪಕ್ಷ ನಾಯಕರಾಗಿ ಸುವೇಂದು ಅಧಿಕಾರಿಯವನ್ನು ಬಿಜೆಪಿ ಅವಿರೋಧ ಆಯ್ಕೆ ಮಾಡಿದೆ. ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಂತರ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಸುವೇಂದು ಅಧಿಕಾರಿಯನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ. 294 ಸದಸ್ಯರಿರುವ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 77 ಸ್ಥಾನಗಳನ್ನು ಗೆದ್ದ ಮುಖ್ಯ ವಿರೋಧ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಟಿಎಂಸಿ ಪಕ್ಷದ ಹಿರಿಯ ನಾಯಕರಾದ ಮುಕುಲ್ ರಾಯ್ ಅವರ ಬಿಜೆಪಿ ಸೇರಿದ ಬೆನ್ನಲ್ಲೇ ಸುವೇಂದು ಬಿಜೆಪಿ ಸೇರಿದ್ದರು. ಮುಕುಲ್ ರಾಯ್ ನಾಡಿಯಾ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.

ಆಡಳಿತಾರೂಢ ಟಿಎಂಸಿ 213 ಸ್ಥಾನಗಳನ್ನು ಪಡೆದರೆ, ಇಂಡಿಯನ್ ಸೆಕ್ಯುಲರ್ ಫ್ರಂಟ್ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಎರಡು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲು ಬಾಕಿ ಇದೆ . ಪ್ರತಿಪಕ್ಷ ಬಿಜೆಪಿಯಲ್ಲಿ ಹೆಚ್ಚಿನ ಸದಸ್ಯರಿರುವ ಕಾರಣ, ಅಧಿಕಾರಿಯು ವಿಪಕ್ಷ ನಾಯಕರಾಗಿದ್ದಾರೆ ಎಂದು ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ 22 ಶಾಸಕರು ಅಧಿಕಾರಿಗೆ ಬೆಂಬಲ ಸೂಚಿಸಿದ್ದು, ಇನ್ನು ಕೆಲವರು ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಬಿಜೆಪಿಯ ಕಾರ್ಯಕರ್ತರನ್ನು ಭೇಟಿಮಾಡಲು ಹೋಗಿದ್ದರಿಂದ ಸಭೆಗೆ ಗೈರು ಹಾಜರಾಗಿದ್ದರು. ಇಬ್ಬರು ಕೊವಿಡ್ ನಿಂದಾಗಿ ಮನೆಯಲ್ಲಿದ್ದಾರೆ ಎಂದು ಘೋಷ್ ಹೇಳಿದ್ದಾರೆ. ಪಕ್ಷದಸಭೆಯಲ್ಲಿ ಎಲ್ಲ ಶಾಸಕರು ಯಾಕೆ ಭಾಗಿಯಾಗಿಲ್ಲ ಎಂಬ ಪ್ರಶ್ನೆಗೆ ಘೋಷ್ ಈ ರೀತಿ ಉತ್ತರಿಸಿದ್ದಾರೆ.

ಇತರರು ಆಯ್ಕೆಯನ್ನು ವಿರೋಧಿಸದಿದ್ದರೆ ಅವರು ಪ್ರಸ್ತಾಪಿಸಿದ ಹೆಸರನ್ನು ಬೆಂಬಲಿಸುತ್ತಿದ್ದಾರೆ ಎಂದರ್ಥ. ಪ್ರತಿಯೊಬ್ಬ ಶಾಸಕರು ಮೌಖಿಕವಾಗಿ ಬೆಂಬಲಿಸಬೇಕೆಂದಿಲ್ಲ ಎಂದಿದ್ದಾರೆ ಅಧಿಕಾರಿ . ನಾಡಿಯಾ ಜಿಲ್ಲೆಯ ವಿಧಾನಸಭಾ ವಿಭಾಗದಿಂದ ಚುನಾಯಿತರಾದ ಹಿರಿಯ ನಾಯಕ ಮುಕುಲ್ ರಾಯ್, ಸುವೇಂದು ಅವರು ಬಿಜೆಪಿಯನ್ನು ಸದನದಲ್ಲಿ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಮತ್ತು ರಾಜ್ಯದಲ್ಲಿ ಆಡಳಿತ ಪಕ್ಷದ ದುಷ್ಕೃತ್ಯಗಳ ವಿರುದ್ಧ ಹೋರಾಡುತ್ತಾರೆ ಎಂದು ಹೇಳಿದರು. ರಾಯ್ ಈ ಹಿಂದೆ ಟಿಎಂಸಿಯ ಪ್ರಮುಖ ನಾಯಕರಾಗಿದ್ದವರು. ಅನೇಕ ಶಾಸಕರು ಪಕ್ಷಾಂತರಗೊಳ್ಳಲು ರಾಯ್ ಅವರೇ ಕಾರಣ. ನಾನು 2006 ರಿಂದ ಶಾಸಕರಾಗಿದ್ದೇನೆ. ಆಗಿನ ಸಿಪಿಐ (ಎಂ) ನೇತೃತ್ವದ ಆಡಳಿತದ ದುರಹಂಕಾರವನ್ನು ನಾನು ನೋಡಿದ್ದೇನೆ. ಸಂಸತ್ತಿನ ಮಾನದಂಡಗಳಿಗೆ ಅನುಸಾರವಾಗಿ ನಾವು ವಿಧಾನಸಭೆಯಲ್ಲಿ ವಿರೋಧದ ಪಾತ್ರವನ್ನು ರಚನಾತ್ಮಕವಾಗಿ ನಿರ್ವಹಿಸಬೇಕಾಗಿದೆ ಎಂದಿದ್ದಾರೆ ಸುವೇಂದು.

ರಾಜಕೀಯ ಪ್ರತಿಸ್ಪರ್ಧಿಗಳ ಮೇಲಿನ ತೃಣಮೂಲ ಕಾಂಗ್ರೆಸ್ ದಾಳಿ, ಟಿಎಂಸಿ ಭಯೋತ್ಪಾದನೆ ವಿರುದ್ಧ ಮತ್ತು ಪ್ರತಿಯೊಬ್ಬ ನಾಗರಿಕರ ಪ್ರಜಾಪ್ರಭುತ್ವ ಹಕ್ಕಿಗಾಗಿ ಹೋರಾಡುವ ವಿಷಯವನ್ನು ಬಿಜೆಪಿ ಮುಂದುವರಿಸಲಿದೆ ಎಂದು ಅವರು ಹೇಳಿದರು. ಕೇಂದ್ರ ಸಚಿವರು ಮತ್ತು ಬಿಜೆಪಿಯ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್ ಮತ್ತು ಭೂಪೇಂದ್ರ ಯಾದವ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕಾರಿಯನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ವೀಕ್ಷಕರಾಗಿದ್ದರು.

ನಂದಿಗ್ರಾಮ್ ವಿಧಾನಸಭಾ ಸ್ಥಾನದಿಂದ ಅಧಿಕಾರಿ ತನ್ನ ಮಾಜಿ ನಾಯಕಿರಾಜಕೀಯ ವಿರೋಧಿ ಮಮತಾ ಬ್ಯಾನರ್ಜಿಯನ್ನು 1900 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಚಿವ ಸಂಪುಟ ವಿಸ್ತರಣೆ: 43 ಸಚಿವರು ಪ್ರಮಾಣ ವಚನ ಸ್ವೀಕಾರ

(BJP unanimously elected Suvendu Adhikari as Leader of Opposition in West Bengal Assembly)

ತಾಜಾ ಸುದ್ದಿ

Related Stories

Click on your DTH Provider to Add TV9 Kannada