Elon Musk’s SpaceX Techie: ಎಲಾನ್ ಮಸ್ಕ್​ ಮಾಲೀಕತ್ವದ ಸ್ಪೇಸ್‌ಎಕ್ಸ್ ಕಂಪನಿಗೆ ಹೊಸ ಟೆಕ್ಕಿಯಾಗಿ ಆಯ್ಕೆಯಾದ ಬಾಲಕ; ಈತನ ವಯಸ್ಸು ಇನ್ನೂ ಹದಿನಾಲ್ಕು!

|

Updated on: Jun 19, 2023 | 1:59 PM

ಅಂದಹಾಗೆ ಬಾಲಕ ಕೈರಾನ್ ಕ್ವಾಜಿ ಇನ್ನೂ ಸಾಂಟಾ ಕ್ಲಾರಾ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಿಂದ ಪದವಿ ಪಡೆಯಬೇಕಿದೆ. ಆದರೆ ಅದಕ್ಕೂ ಮುನ್ನವೇ ಅತ್ಯಂತ ಕಿರಿಯ ವಯಸ್ಸಿಗೆ ಎಲಾನ್ ಮಸ್ಕ್​ ನಂತಹ ಬಲಾಢ್ಯ ಕಂಪನಿಯ ಉದ್ಯೋಗಿಯಾಗಿ ಆಯ್ಕೆಯಾಗಿರುವ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ

Elon Musks SpaceX Techie: ಎಲಾನ್ ಮಸ್ಕ್​ ಮಾಲೀಕತ್ವದ ಸ್ಪೇಸ್‌ಎಕ್ಸ್ ಕಂಪನಿಗೆ ಹೊಸ ಟೆಕ್ಕಿಯಾಗಿ ಆಯ್ಕೆಯಾದ ಬಾಲಕ; ಈತನ ವಯಸ್ಸು ಇನ್ನೂ ಹದಿನಾಲ್ಕು!
ಎಲಾನ್ ಮಸ್ಕ್​ ಸ್ಪೇಸ್‌ಎಕ್ಸ್ ಕಂಪನಿಗೆ ಟೆಕ್ಕಿಯಾಗಿ ಆಯ್ಕೆಯಾದ ಬಾಲಕ
Follow us on

ಜಸ್ಟ್​​ 14 ವರ್ಷ ವಯಸ್ಸಿನ ಕೈರಾನ್ ಕ್ವಾಜಿ (Kairan Quazi) ಕ್ಯಾಲಿಫೋರ್ನಿಯಾದ (California) ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಿಂದ (Santa Clara University) ಈ ತಿಂಗಳು ಎಂಜಿನಿಯರಿಂಗ್​​ ಪದವಿ ಪಡೆಯಲಿದ್ದಾನೆ. ಆದರೆ ಅದಾಗಲೇ Elon Musk’s SpaceX ಕಂಪನಿಯ ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದು, ಆತ ಕಂಪನಿಯ ಕಠಿಣ ತಾಂತ್ರಿಕವಾಗಿ ಸವಾಲಿನ ಮತ್ತು ಮೋಜಿನಿಂದ ಕೂಡಿದ ಸಂದರ್ಶನ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿದ್ದಾನೆ!

ಕೈರಾನ್ ಕ್ವಾಜಿಯ ವಿಭಿನ್ನತೆ ಏನೆಂದರೆ, ಅವನಿಗೆ ಕೇವಲ 14 ವರ್ಷ!

ಅಂದಹಾಗೆ ಬಾಲಕ ಕೈರಾನ್ ಕ್ವಾಜಿ ಇನ್ನೂ ಸಾಂಟಾ ಕ್ಲಾರಾ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಿಂದ ಪದವಿ ಪಡೆಯಬೇಕಿದೆ. ಆದರೆ ಅದಕ್ಕೂ ಮುನ್ನವೇ ಅತ್ಯಂತ ಕಿರಿಯ ವಯಸ್ಸಿಗೆ ಎಲಾನ್ ಮಸ್ಕ್​ ನಂತಹ ಬಲಾಢ್ಯ ಕಂಪನಿಯ ಉದ್ಯೋಗಿಯಾಗಿ ಆಯ್ಕೆಯಾಗಿರುವ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ ಎಂದು ಸಿಯಾಟಲ್ ಟೈಮ್ಸ್ ವರದಿ ಮಾಡಿದೆ. ವರದಿಯ ಪ್ರಕಾರ, ವಾಷಿಂಗ್ಟನ್‌ನ ರೆಡ್‌ಮಂಡ್‌ನಲ್ಲಿರುವ ಸ್ಪೇಸ್‌ಎಕ್ಸ್‌ನಲ್ಲಿ ಕೆಲಸ ಮಾಡಲು ಆತ ತನ್ನ ತಾಯಿಯೊಂದಿಗೆ ಕ್ಯಾಲಿಫೋರ್ನಿಯಾದ ಪ್ಲೆಸೆಂಟನ್‌ನಿಂದ ಕೆಲಸಕ್ಕೆ ಹೋಗಲು ಅದಾಗಲೇ ಯೋಜಿಸುತ್ತಿದ್ದಾನೆ.

ಕ್ವಾಜಿಯ ಅಸಾಧಾರಣ ಪ್ರಯಾಣವು ಎರಡು ವರ್ಷ ವಯಸ್ಸಿನಲ್ಲಿ ಪ್ರಾರಂಭವಾಯಿತು, ಆತ ಸಂಪೂರ್ಣ ವಾಕ್ಯಗಳಲ್ಲಿ ಮಾತನಾಡತೊಡಗಿದ್ದ. ಶಿಶುವಿಹಾರದಲ್ಲಿದ್ದಾಗಲೇ ತನ್ ಸಹಪಾಠಿಗಳು ಮತ್ತು ಶಿಕ್ಷಕರಿಗೆ ಆತ ತಾನು ಕೇಳಿದ ಸುದ್ದಿಗಳ ಬಗ್ಗೆ ವ್ಯಾಖ್ಯಾನಿಸುತ್ತಿದ್ದ. 9 ನೇ ವಯಸ್ಸಿನಲ್ಲಿ ತಾನು ವ್ಯಾಸಂಗ ಮಾಡುತ್ತಿರುವ ಮೂರನೇ ತರಗತಿಯ ಪಠ್ಯಗಳು ತನಗೆ ಅಂತಹಾ ಸವಾಲಿದ್ದಾಗಿಲ್ಲ ಎಂದು ಆತ ಕಂಡುಕೊಂಡಿದ್ದ.

ಅದೇ ವರ್ಷ ಆತ ಬುದ್ಧಿಮತ್ತೆಯ (ಐ.ಕ್ಯೂ) ಪರೀಕ್ಷೆಯಲ್ಲಿ ಸಾಮಾನ್ಯ ಜನರಿಗಿಂತ ಶೇ. 99.9 ರಷ್ಟು ಹೆಚ್ಚಿನ ಸ್ಥಾನ ಪಡೆದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕ್ವಾಜಿ ಕೆಲವು ತಿಂಗಳ ನಂತರ ಇಂಟೆಲ್ ಲ್ಯಾಬ್ಸ್‌ನಲ್ಲಿ ಅಲ್ ರಿಸರ್ಚ್ ಕೋ-ಆಪ್ ಫೆಲೋ ಆಗಿ ಇಂಟರ್ನ್‌ಶಿಪ್ ಪಡೆದಿದ್ದಾನೆ. ಇನ್ನು 11 ನೇ ವಯಸ್ಸಿನಲ್ಲಿಯೇ ಆತ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಅಧ್ಯಯನ ಮಾಡಲು ಸಾಂಟಾ ಕ್ಲಾರಾ ವಿಶ್ವವಿದ್ಯಾಲಯಕ್ಕೆ ಸೇರ್ಪೆಯಾಗಿದ್ದ.

ಕಳೆದ ವರ್ಷ ಬಾಲಕ ಕೈರಾನ್ ಕ್ವಾಜಿ ಸೈಬರ್ ಗುಪ್ತಚರ ಸಂಸ್ಥೆ Blackbird.Al ನಲ್ಲಿ ಮಷಿನ್ ಲರ್ನಿಂಗ್​​ ವಿಷಯದಲ್ಲಿ ಇಂಟರ್ನ್ ಆಗಿ ನಾಲ್ಕು ತಿಂಗಳು ಕೆಲಸ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ, ಇದೀಗ ಸ್ಟಾರ್‌ಲಿಂಕ್ ಉದ್ಯೋಗವನ್ನು ಗಿಟ್ಟಿಸುವ ಮೂಲಕ ಆತ ಅದಾಗಲೇ ಒಂದು ಮಹತ್ವಾಕಾಂಕ್ಷೆಯನ್ನು ಸಾಧಿಸಿದ್ದಾನೆ.

ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 1:57 pm, Mon, 19 June 23