ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ದ ಮುಂಬೈನಲ್ಲಿರುವ ಪ್ರದಾನ ಕಚೇರಿಯಲ್ಲಿ 950 ಸಹಾಯಕ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಆರ್ಬಿಐ ಅಧಿಸೂಚನೆ ಹೊರಡಿಸಿದೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಆರ್ಬಿಐನ ಅಧಿಕೃತ ವೆಬ್ಸೈಟ್ rbi.org.in. ಮೂಲಕ ಅರ್ಜಿ ಸಲ್ಲಿಸಬಹುದು. ಈ ಆರ್ಬಿಐ ಸಹಾಯಕ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆ ಫೆಬ್ರವರಿ 17ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 8 ಕೊನೇ ದಿನ. ಮಾರ್ಚ್ 26, 27ರಂದು ಪರೀಕ್ಷೆಗಳು ನಡೆಯಲಿವೆ.
ಅಭ್ಯರ್ಥಿಗಳು ಅರ್ಜಿ ತುಂಬುವ ವಿಧಾನ ಇಲ್ಲಿದೆ
1. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್http://rbi.org.in.ಗೆ ಭೇಟಿ ನೀಡಬೇಕು
2. ಆಗ ಹೋಂ ಪೇಜ್ನಲ್ಲಿ Applications for 950 Assistant posts ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
3. ಆಗ ಹೊಸದಾದ ಪೇಜ್ವೊಂದು ತೆರೆದುಕೊಳ್ಳುತ್ತದೆ. ಅದರಲ್ಲಿ ಕೇಳಲಾದ ಮುಖ್ಯ ವಿವರಗಳನ್ನು ತುಂಬಿ. ನೋಂದಣಿ ಮಾಡಿಕೊಳ್ಳಿ
4. ಆಗ ನಿಮಗೊಂದು ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ. ಅದನ್ನು ತುಂಬಿ ಮತ್ತು ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
5.ಅದಾದ ಬಳಿಕ ಶುಲ್ಕವನ್ನು ಕೇಳಿ, ಸಬ್ಮಿಟ್ ಮಾಡಿ. ಆಗ ಅರ್ಜಿ ಸಲ್ಲಿಕೆಯಾಗುತ್ತದೆ. ನಂತರ ನಿಮ್ಮ ರೆಫರೆನ್ಸ್ಗಾಗಿ ಒಂದು ಕಾಪಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಜತೆ ಕೈ ಜೋಡಿಸಲಿರುವ ರಾಮ್ ಚರಣ್? ಹೊಸ ಡೀಲ್ ಸಲುವಾಗಿ ಮುಂಬೈನಲ್ಲಿ ಮಾತುಕತೆ
Published On - 8:20 am, Tue, 15 February 22