Air India Recruitment 2022: ಏರ್ ಇಂಡಿಯಾದಲ್ಲಿನ ಏರ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್ (AIASL) ಹಣಕಾಸು ವ್ಯವಸ್ಥಾಪಕ, ಆಫೀಸರ್ ಅಕೌಂಟ್ ಮತ್ತು ಅಕೌಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್ airindia.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಮ್ಯಾನೇಜರ್-ಫೈನಾನ್ಸ್ – 3 ಹುದ್ದೆಗಳು
ಆಫೀಸರ್ ಅಕೌಂಟ್ – 2 ಹುದ್ದೆಗಳು
ಅಕೌಂಟ್ ಅಸಿಸ್ಟೆಂಟ್ – 2 ಹುದ್ದೆಗಳು
ಅರ್ಹತಾ ಮಾನದಂಡಗಳು:
ಮ್ಯಾನೇಜರ್-ಫೈನಾನ್ಸ್:- ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಕಾಸ್ಟ್ ಅಕೌಂಟೆಂಟ್ ಆಗಿರಬೇಕು. ಅಥವಾ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದ ಸದಸ್ಯರು ಅಥವಾ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರು ಅಥವಾ 5 ವರ್ಷಗಳ ಅನುಭವದೊಂದಿಗೆ ಹೆಸರಾಂತ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ MBA ಪಡೆದಿರಬೇಕು.
ಆಫೀಸರ್ ಅಕೌಂಟ್:- ಇಂಟರ್ ಚಾರ್ಟರ್ಡ್ ಅಕೌಂಟೆಂಟ್ / ಇಂಟರ್ ಕಾಸ್ಟ್ & ಮ್ಯಾನೇಜ್‌ಮೆಂಟ್ ಅಕೌಂಟೆನ್ಸಿ ಅಥವಾ ಹಣಕಾಸು ವಿಷಯದಲ್ಲಿ MBA ಮಾಡಿರಬೇಕು.
ಅಕೌಂಟ್ ಅಸಿಸ್ಟೆಂಟ್: – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಪಡೆದಿರಬೇಕು. ಹಾಗೆಯೇ ಅಕೌಂಟಿಂಗ್ ವಿಷಯದಲ್ಲಿ 1 ವರ್ಷದ ಅನುಭವ ಹೊಂದಿರಬೇಕು.
ವಯೋಮಿತಿ:
ಮ್ಯಾನೇಜರ್-ಫೈನಾನ್ಸ್ – 30 ವರ್ಷಗಳನ್ನು ಮೀರಬಾರದು
ಆಫೀಸರ್ ಅಕೌಂಟ್:
ಸಾಮಾನ್ಯ ಅಭ್ಯರ್ಥಿ: 30 ವರ್ಷಗಳನ್ನು ಮೀರಬಾರದು.
OBC: 33 ವರ್ಷಗಳನ್ನು ಮೀರಬಾರದು.
SC / ST: 35 ವರ್ಷಗಳನ್ನು ಮೀರಬಾರದು.
ಅಕೌಂಟ್ ಅಸಿಸ್ಟೆಂಟ್ –
ಸಾಮಾನ್ಯ ಅಭ್ಯರ್ಥಿ: 28 ವರ್ಷಗಳನ್ನು ಮೀರಬಾರದು.
OBC: 31 ವರ್ಷಗಳನ್ನು ಮೀರಬಾರದು.
SC / ST: 33 ವರ್ಷಗಳನ್ನು ಮೀರಬಾರದು.
ತಿಂಗಳ ವೇತನ:
ಮ್ಯಾನೇಜರ್-ಫೈನಾನ್ಸ್ – ರೂ. 50,000/-
ಆಫೀಸರ್ ಅಕೌಂಟ್ – ರೂ. 41000/-
ಅಕೌಂಟ್ ಅಸಿಸ್ಟೆಂಟ್ – ರೂ.19350/-
ಆಯ್ಕೆ ಪ್ರಕ್ರಿಯೆ:
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮೇ 2022
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.