Air India Recruitment 2023: ಏರ್ ಇಂಡಿಯಾದಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ; ನೋಡಿ ವಿವರ

|

Updated on: Mar 03, 2023 | 1:52 PM

Flight Jobs For PUC Passed Out Candidates: ಏರ್ ಇಂಡಿಯಾ ವಿಮಾನಗಳ ಕ್ಯಾಬಿನ್ ಕ್ರಿವ್​ನಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕನಿಷ್ಠ ಪಿಯುಸಿ ಪಾಸಾಗಿರಬೇಕು. ಗರಿಷ್ಠ ವಯಸ್ಸು 35 ವರ್ಷ ಇದೆ. 11 ನಗರಗಳಲ್ಲಿ ಮಾರ್ಚ್ 3ರಿಂದ 24ರವರೆಗೆ ನೇರ ಸಂದರ್ಶನ ಇದೆ.

Air India Recruitment 2023: ಏರ್ ಇಂಡಿಯಾದಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ; ನೋಡಿ ವಿವರ
ಏರ್ ಇಂಡಿಯಾ
Follow us on

ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯ ಕ್ಯಾಬಿನ್ ಸಿಬ್ಬಂದಿಯ (ಪರಿಚಾರಿಕೆಯರು – Cabin Crew) ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂಬೈ, ದೆಹಲಿ, ಚೆನ್ನೈ, ಜೈಪುರ್, ಹೈದರಾಬಾದ್, ಕೋಲ್ಕತಾ, ಗುವಾಹಟಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಲಕ್ನೋ ನಗರಗಳಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತಿದೆ. ಈ ವಿಚಾರವನ್ನು ಏರ್ ಇಂಡಿಯಾ ಟ್ವಿಟ್ಟರ್​ನಲ್ಲಿ ಪ್ರಕಟಿಸಿದೆ. ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಮಾರ್ಚ್ 3ರಿಂದ 24ರವರೆಗೆ ನಿರ್ದಿಷ್ಟ ದಿನಗಳಂದು ಸಂದರ್ಶನಗಳಿವೆ. ಕೆಲಸಕ್ಕೆ ಬೇಕಾದ ಅರ್ಹತೆ, ಸಂದರ್ಶನ ಸ್ಥಳ, ಸಮಯ ಇತ್ಯಾದಿ ವಿವರ ಇಲ್ಲಿ ಮುಂದಿವೆ.

ಏರ್ ಇಂಡಿಯಾದಲ್ಲಿ ಉದ್ಯೋಗಾವಕಾಶ:

ಒಟ್ಟು ಹುದ್ದೆಗಳು: ನಿರ್ದಿಷ್ಟಪಡಿಸಿಲ್ಲ

ಸಂಬಳ: ನಿರ್ದಿಷ್ಟಪಡಿಸಿಲ್ಲ

ಉದ್ಯೋಗಸ್ಥಳ: ನಿರ್ದಿಷ್ಟಪಡಿಸಿಲ್ಲ

ಸಂದರ್ಶನ ಸ್ಥಳಗಳು: ದೆಹಲಿ, ಮುಂಬೈ, ಜೈಪುರ್, ಚೆನ್ನೈ, ಹೈದರಾಬಾದ್, ಕೋಲ್ಕತಾ, ಗುವಾಹಟಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಲಕ್ನೋ

ಅರ್ಹತೆ:

  • ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ 12ನೇ ತರಗತಿಯಾದರೂ ಪಾಸಾಗಿರಬೇಕು.
  • ಮಹಿಳಾ ಅಭ್ಯರ್ಥಿಗಳು ಕನಿಷ್ಠ 155 ಸೆಂಟಿಮೀಟರ್ (5 ಅಡಿ 1 ಇಂಚು), ಎತ್ತರಕ್ಕೆ ತಕ್ಕಂತಹ ಸೂಕ್ತ ತೂಕದ ಕಾಯದವರಾಗಿರಬೇಕು.
  • ವಯಸ್ಸು: ಹೊಸಬರು 18-27 ವರ್ಷದವರಾಗಿರಬೇಕು. ಅನುಭವಿಗಳು 35 ವರ್ಷದ ವಯಸ್ಸಿನವರೆಗೆ ಅವಕಾಶ.
  • ಬಿಎಂಐ (ಬಾಡಿ ಮಾಸ್ ಇಂಡೆಕ್ಸ್): 18ರಿಂದ 22 ಇರಬೇಕು.
  • ಭಾರತದ ಪಾಸ್​ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.
  • ಯೂನಿಫಾರ್ಮ್ ತೊಟ್ಟಾಗ ಮೇಲೆ ಎದ್ದು ಕಾಣುವಂತಹ ಟಾಟ್ಟೂಗಳು ಇರಬಾರದು.
  • ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪರಿಣಿತರಿರಬೇಕು
  • ದೃಷ್ಟಿ 6/6 ಇರಬೇಕು

ಇದನ್ನೂ ಓದಿ: SBI Recruitment 2023: ಎಸ್​ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಂದರ್ಶನ ಸ್ಥಳಗಳು ಮತ್ತು ಸಮಯ (2023)

  • ಮುಂಬೈ: ಮಾರ್ಚ್ 3- ಬೆಳಗ್ಗೆ 9:30ರಿಂದ 12:30
  • ದೆಹಲಿ: ಮಾರ್ಚ್ 6, 13 ಮತ್ತು 20- ಬೆಳಗ್ಗೆ 9:30ರಿಂದ 12:30
  • ಜೈಪುರ್: ಮಾರ್ಚ್ 7- ಬೆಳಗ್ಗೆ 9:30ರಿಂದ 12:30
  • ಚೆನ್ನೈ: ಮಾರ್ಚ್ 10- ಬೆಳಗ್ಗೆ 9:30ರಿಂದ 12:30
  • ಹೈದರಾಬಾದ್: ಮಾರ್ಚ್ 10- ಬೆಳಗ್ಗೆ 9:30ರಿಂದ 12:30
  • ಕೋಲ್ಕತಾ: ಮಾರ್ಚ್ 14- ಬೆಳಗ್ಗೆ 9:30ರಿಂದ 12:30
  • ಗುವಾಹತಿ: ಮಾರ್ಚ್ 16- ಬೆಳಗ್ಗೆ 9:30ರಿಂದ 12:30
  • ಅಹ್ಮದಾಬಾದ್: ಮಾರ್ಚ್ 17- ಬೆಳಗ್ಗೆ 9:30ರಿಂದ 12:30
  • ಇಂದೋರ್: ಮಾರ್ಚ್ 21- ಬೆಳಗ್ಗೆ 9:30ರಿಂದ 12:30
  • ಮುಂಬೈ: ಮಾರ್ಚ್ 23- ಬೆಳಗ್ಗೆ 9:30ರಿಂದ 12:30
  • ಪುಣೆ: ಮಾರ್ಚ್ 24- ಬೆಳಗ್ಗೆ 9:30ರಿಂದ 12:30
  • ಲಕ್ನೋ: ಮಾರ್ಚ್ 24- ಬೆಳಗ್ಗೆ 9:30ರಿಂದ 12:30

ಹುದ್ದೆಯ ಜವಾಬ್ದಾರಿಗಳು

  • ಒಂದು ವೇಳೆ ಅಭ್ಯರ್ಥಿಗಳು ಆಯ್ಕೆಯಾಗಿ ನೇಮಕವಾದಲ್ಲಿ ಈ ಕೆಳಕಾಣಿಸಿದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.
  • ವಿಮಾನ ಟೇಕಾಫ್ ಆಗುವ ಮುನ್ನ ಸುರಕ್ಷತಾ ಉಪಕರಣಗಳು ಸರಿ ಇವೆಯೇ ಎಂದು ಪರಿಶೀಲಿಸಬೇಕು. ಬಳಿಕ ಅತಿಥಿಗಳಿಗೆ (ಪ್ರಯಾಣಿಕರು) ಈ ಉಪಕರಣಗಳನ್ನು ಬಳಸುವ ವಿಧಾನಗಳನ್ನು ತೋರಿಸಿಕೊಡಬೇಕಾಗುತ್ತದೆ.
  • ತುರ್ತು ಸಂದರ್ಭಗಳಲ್ಲಿ ಫಸ್ಟ್ ಏಡ್, ರಕ್ಷಣೆ, ಇನ್​ಫ್ಲೈಟ್ ಸರ್ವಿಸ್ ಡ್ಯೂಟಿ ಇತ್ಯಾದಿಯನ್ನು ಮಾಡಬೇಕಾಗುತ್ತದೆ.
  • ಅತಿಥಿಗಳನ್ನು ಸ್ವಾಗತಿಸುವುದು, ಅವರು ಸೀಟುಗಳತ್ತ ಹೋಗಲು ನಿರ್ದೇಶನ ನೀಡುವುದು, ಲಗೇಜು ಇಡಲು ಸಹಾಯ ಮಾಡುವುದು ಇತ್ಯಾದಿ ಕಾರ್ಯ
  • ಫ್ಲೈಟ್ ಸಂದರ್ಭದಲ್ಲಿ ಅನೌನ್ಸ್​ಮೆಂಟ್ ಇದ್ದರೆ ಮಾಡುವುದು, ಪ್ರಯಾಣಿಕರ ಪ್ರಶ್ನೆಗಳಿಗೆ, ಗೊಂದಲಗಳಿಗೆ ಸಮಾಧಾನ ನೀಡುವುದು.
  • ವಿಮಾನ ಹೊರಡುವ ಮುಂಚಿನ ಮೀಟಿಂಗ್​ಗಳನ್ನು ಕಡ್ಡಾಯವಾಗಿ ಅಟೆಂಡ್ ಮಾಡಬೇಕು. ಫ್ಲೈಟ್ ಘಟನೆಗಳ ಬಗ್ಗೆ ವರದಿ ಸಿದ್ಧಪಡಿಸಬೇಕು.

ಆಸಕ್ತ ಅಭ್ಯರ್ಥಿಗಳು ಮತ್ತು ಸೂಕ್ತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನದಲ್ಲಿ ಭಾಗಿಯಾಗಬಹುದು. ಸಂದರ್ಶನ ಸ್ಥಳದ ವಿಳಾಸ ಸೇರಿದಂತೆ ಹೆಚ್ಚಿನ ಮಾಹಿತಿಗೆ ಏರ್ ಇಂಡಿಯಾದ ಈ ವೆಬ್ ಲಿಂಕ್ ಸಂಪರ್ಕಿಸಿ

ಇನ್ನಷ್ಟು ಉದ್ಯೋಗ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Fri, 3 March 23