Job Alert: ಪದವಿ ಮಾಡಿದವರಿಗೆ ‘ಆಕಾಶವಾಣಿ’ಯಲ್ಲಿದೆ ಉದ್ಯೋಗಾವಕಾಶ

| Updated By: ಝಾಹಿರ್ ಯೂಸುಫ್

Updated on: May 26, 2022 | 3:31 PM

All India Radio jobs in Bengaluru: ಸಾಂಧರ್ಭಿಕ ಸುದ್ದಿ ವಾಚಕರು-ಅನುವಾದಕಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Job Alert: ಪದವಿ ಮಾಡಿದವರಿಗೆ ಆಕಾಶವಾಣಿಯಲ್ಲಿದೆ ಉದ್ಯೋಗಾವಕಾಶ
ಸಾಂದರ್ಭಿಕ ಚಿತ್ರ
Follow us on

ಆಕಾಶವಾಣಿ ಬೆಂಗಳೂರು ( Akashavani Bengaluru ) ಕೇಂದ್ರವು ಹಲವು ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಪ್ರಾದೇಶಿಕ ಸುದ್ದಿ ವಿಭಾಗವು, ಸಾಂಧರ್ಭಿಕ ಸುದ್ದಿ ವಾಚಕರು-ಅನುವಾದಕಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ವಿದ್ಯಾರ್ಹತೆ:
– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು.
– ಕನ್ನಡ ಭಾಷೆಯಲ್ಲಿ ಪ್ರಾವಿಣ್ಯತೆ ಇರಬೇಕು
– ಪ್ರಸಾರಕ್ಕೆ ಯೋಗ್ಯವಾದ ಉತ್ತಮ ಗುಣಮಟ್ಟದ ಧ್ವನಿ ಹೊಂದಿರಬೇಕು.

ಅರ್ಹತಾ ಮಾನದಂಡ:
– ರೇಡಿಯೋ/ಟಿವಿ ಸುದ್ದಿ ಮಾಧ್ಯಮ ಕೆಲಸ ಅನುಭವ ಹೊಂದಿರಬೇಕು.
– ಕಂಪ್ಯೂಟರ್ ಅಪ್ಲಿಕೇಷನ್ ಪ್ರಾಥಮಿಕ ತಿಳುವಳಿಕೆ ಇರಬೇಕು.
– ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ:
ಈ ಹುದ್ದೆಗಳಿಗೆ 21 ರಿಂದ 50 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗಕ್ಕೆ- ರೂ.300
ಎಸ್‍ಸಿ/ಎಸ್‍ಟಿ/ಓಬಿಸಿ- ರೂ.225

ಅರ್ಜಿ ಶುಲ್ಕವನ್ನು The Station Director, All India Radio, Bengaluru ಇವರ ಹೆಸರಿನಲ್ಲಿ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ:
ಅಭ್ಯರ್ಥಿಯ ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್‍ನ್ನು ಒಳಗೊಂಡ ಅರ್ಜಿಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಖುದ್ದಾಗಿ ಜೂನ್ 10 ರೊಳಗೆ ಈ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:
The Deputy Director General (E) & HOO) Attn: Regional News Unit, All India Radio, Raj Bhavan

ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್​ 8317466729, 9448159726, 9482169168 ಹಾಗೂ ದೂರವಾಣಿ ಸಂಖ್ಯೆ 080 22356344/22373000 ಗೆ ಕರೆ ಮಾಡಬಹುದು.

 

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.