CUB Recruitment 2022: ಡಿಗ್ರಿ ಮಾಡಿದವರಿಗೆ ಸಿಟಿ ಯೂನಿಯನ್ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ

TV9 Digital Desk

| Edited By: Zahir Yusuf

Updated on: May 25, 2022 | 7:05 PM

City Union Bank Recruitment 2022: ಈ ಹುದ್ದೆಗಳಿಗೆ ಸಿಟಿ ಯೂನಿಯನ್ ಬ್ಯಾಂಕ್​ನ ಅಧಿಕೃತ ವೆಬ್‌ಸೈಟ್ cityunionbank.com ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

CUB Recruitment 2022: ಡಿಗ್ರಿ ಮಾಡಿದವರಿಗೆ ಸಿಟಿ ಯೂನಿಯನ್ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ
Bank Jobs

City Union Bank Recruitment 2022: ಸಿಟಿ ಯೂನಿಯನ್ ಬ್ಯಾಂಕ್​ನಲ್ಲಿನ ರಿಲೇಶನ್‌ಶಿಪ್ ಮ್ಯಾನೇಜರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಸಿಟಿ ಯೂನಿಯನ್ ಬ್ಯಾಂಕ್​ನ ಅಧಿಕೃತ ವೆಬ್‌ಸೈಟ್ cityunionbank.com ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಮೇ 24 ರಿಂದ ಶುರುವಾಗಿದ್ದು, ಜೂನ್​ 3 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.

  1. ಯಾವ ರಾಜ್ಯಗಳ ಶಾಖೆಯಲ್ಲಿ ಅವಕಾಶ? ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನೇಮಕ ಮಾಡಲಾಗುತ್ತದೆ.
  2. ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯ ದಿನಾಂಕ ಮತ್ತು ಅದರ ಪ್ರವೇಶ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
  3. ವಯೋಮಿತಿ: ಕನಿಷ್ಠ 22 ಮತ್ತು ಗರಿಷ್ಠ 27 ವರ್ಷ ವಯಸ್ಸಿನ ಅಭ್ಯರ್ಥಿಗಳು ಈಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗಿದೆ.
  4. ವಿದ್ಯಾರ್ಹತೆ: ಈ ಹುದ್ದೆಗಳಿಗೆ 60% ಅಂಕಗಳೊಂದಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  5. ಇದನ್ನೂ ಓದಿ

  6. ಪ್ರಮುಖ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಜೂನ್ 3, 2022

ಈ ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada