BMRCL Recruitment 2023: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ತಿಂಗಳ ವೇತನ 1.65 ಲಕ್ಷ ರೂ.

| Updated By: ಝಾಹಿರ್ ಯೂಸುಫ್

Updated on: Jan 12, 2023 | 7:15 AM

BMRCL Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಹಾಗೂ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

BMRCL Recruitment 2023: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ತಿಂಗಳ ವೇತನ 1.65 ಲಕ್ಷ ರೂ.
BMRCL Recruitment 2023
Follow us on

BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(BMRCL)​ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಹಾಗೂ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಜನರಲ್​ ಮ್ಯಾನೇಜರ್ (F&A)- 1 ಹುದ್ದೆ
  • ಅಡಿಶನಲ್ ಜನರಲ್ ಮ್ಯಾನೇಜರ್ (F&A)- 2 ಹುದ್ದೆಗಳು
  • ಡೆಪ್ಯುಟಿ ಜನರಲ್ ಮ್ಯಾನೇಜರ್ (F&A)- 1 ಹುದ್ದೆ
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್ (F&A)- 3 ಹುದ್ದೆಗಳು
  • ಮ್ಯಾನೇಜರ್ (F&A)- 2 ಹುದ್ದೆಗಳು
  • ಅಸಿಸ್ಟೆಂಟ್ ಮ್ಯಾನೇಜರ್ (F&A)- 5 ಹುದ್ದೆಗಳು
  • ಡೆಪ್ಯುಟಿ ಜನರಲ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 1 ಹುದ್ದೆ
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 1 ಹುದ್ದೆ
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 1 ಹುದ್ದೆ

ಅರ್ಹತಾ ಮಾನದಂಡಗಳು:

ಇದನ್ನೂ ಓದಿ
HAL Recruitment 2023: 10ನೇ ತರಗತಿ ಪಾಸಾದವರಿಗೆ HAL ನಲ್ಲಿದೆ ಉದ್ಯೋಗಾವಕಾಶ
BSNL Recruitment 2023: 11,705 ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 40 ಸಾವಿರ ರೂ.
NHAI Recruitment 2023: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ: 56 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
UPSC Recruitment 2023: ಕೇಂದ್ರ ಗುಪ್ತಚರ ಇಲಾಖೆಯಲ್ಲಿದೆ ಉದ್ಯೋಗಾವಕಾಶ

ಈ ನೇಮಕಾತಿಯ ಬಹುತೇಕ ಹುದ್ದೆಗಳಿಗೆ ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್​ ಅಕೌಂಟೆಂಟ್ ಹಾಗೂ ಪದವಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

  • ಜನರಲ್​ ಮ್ಯಾನೇಜರ್ (F&A)- ಗರಿಷ್ಠ ವಯೋಮಿತಿ 55 ವರ್ಷ
  • ಅಡಿಶನಲ್ ಜನರಲ್ ಮ್ಯಾನೇಜರ್(F&A)- ಗರಿಷ್ಠ ವಯೋಮಿತಿ 50 ವರ್ಷ
  • ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- ಗರಿಷ್ಠ ವಯೋಮಿತಿ 45 ವರ್ಷ
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- ಗರಿಷ್ಠ ವಯೋಮಿತಿ 40 ವರ್ಷ
  • ಮ್ಯಾನೇಜರ್(F&A)- ಗರಿಷ್ಠ ವಯೋಮಿತಿ 40 ವರ್ಷ
  • ಅಸಿಸ್ಟೆಂಟ್ ಮ್ಯಾನೇಜರ್(F&A)- ಗರಿಷ್ಠ ವಯೋಮಿತಿ 35 ವರ್ಷ
  • ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)- ಗರಿಷ್ಠ ವಯೋಮಿತಿ 45 ವರ್ಷ
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- ಗರಿಷ್ಠ ವಯೋಮಿತಿ 40 ವರ್ಷ
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- ಗರಿಷ್ಠ ವಯೋಮಿತಿ 35 ವರ್ಷ
  • ಇನ್ನು ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯ ಮೂಲಕ ಪಡೆಯಬಹುದು.

ಮಾಸಿಕ ವೇತನ:

  • ಜನರಲ್​ ಮ್ಯಾನೇಜರ್ (F&A)- 1,65,000 ರೂ.
  • ಅಡಿಶನಲ್ ಜನರಲ್ ಮ್ಯಾನೇಜರ್ (F&A)- 1,50,000 ರೂ.
  • ಡೆಪ್ಯುಟಿ ಜನರಲ್ ಮ್ಯಾನೇಜರ್ (F&A)- 1,40,000 ರೂ.
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್ (F&A)- 85,000 ರೂ.
  • ಮ್ಯಾನೇಜರ್ (F&A)- 75,000 ರೂ.
  • ಅಸಿಸ್ಟೆಂಟ್ ಮ್ಯಾನೇಜರ್ (F&A)- 50,000 ರೂ.
  • ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)- 1,40,000 ರೂ.
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 75,000 ರೂ.
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 50,000 ರೂ.

ಪ್ರಮುಖ ದಿನಾಂಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 7, 2023

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿ ಸಲ್ಲಿಸಲು ಸಮಸ್ಯೆಯಾದಲ್ಲಿ ಇ-ಮೇಲ್ ಐಡಿ helpdesk@bmrc.co.in ಗೆ ಮೂಲಕ ತಿಳಿಸಬೇಕೆಂದು ಕೋರಲಾಗಿದೆ.
ಇನ್ನು ಆಫ್​ಲೈನ್ ಮೂಲಕ ಅರ್ಜಿ ಕಳುಹಿಸಬೇಕಾದ ವಿಳಾಸ ಈ ಕೆಳಗಿನಂತಿದೆ.

General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru- 560027

ಇದನ್ನೂ ಓದಿ: HAL Recruitment 2023: 10ನೇ ತರಗತಿ ಪಾಸಾದವರಿಗೆ HAL ನಲ್ಲಿದೆ ಉದ್ಯೋಗಾವಕಾಶ

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಈ ಕೆಳಗಿನ ಲಿಂಕ್​ಗಳನ್ನು ಕ್ಲಿಕ್ ಮಾಡಿ.

ಅಧಿಕೃತ ಅಧಿಸೂಚನೆ – ಅಡಿಶನಲ್ ಮ್ಯಾನೇಜರ್, ಮ್ಯಾನೇಜರ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಮ್ಯಾನೇಜರ್, DGM, Asst. ಮ್ಯಾನೇಜರ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು – ಅಡಿಶನಲ್ ಮ್ಯಾನೇಜರ್, ಮ್ಯಾನೇಜರ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು – ಮ್ಯಾನೇಜರ್, DGM, Asst. ಮ್ಯಾನೇಜರ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: english.bmrc.co.in