HAL Recruitment 2023: 10ನೇ ತರಗತಿ ಪಾಸಾದವರಿಗೆ HAL ನಲ್ಲಿದೆ ಉದ್ಯೋಗಾವಕಾಶ

HAL Recruitment 2023: ಆಸಕ್ತ ಅಭ್ಯರ್ಥಿಗಳು ಹಿಂದೂಸ್ತಾನ್ ಏರೋನಾಟಿಕ್ಸ್​ನ ಅಧಿಕೃತ ವೆಬ್​ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

HAL Recruitment 2023: 10ನೇ ತರಗತಿ ಪಾಸಾದವರಿಗೆ HAL ನಲ್ಲಿದೆ ಉದ್ಯೋಗಾವಕಾಶ
HAL Recruitment 2023
Follow us
| Updated By: ಝಾಹಿರ್ ಯೂಸುಫ್

Updated on: Jan 05, 2023 | 7:15 AM

HAL Recruitment 2023: ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​(HAL) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 10 ಫೈಯರ್ ಮ್ಯಾನ್(Fire Man) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಹಿಂದೂಸ್ತಾನ್ ಏರೋನಾಟಿಕ್ಸ್​ನ ಅಧಿಕೃತ ವೆಬ್​ಸೈಟ್ hal-india.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ತುಮಕೂರಿನಲ್ಲಿ ಪೋಸ್ಟಿಂಗ್ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಸ್ಥಳೀಯ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

ಒಟ್ಟು ಹುದ್ದೆಗಳ ಸಂಖ್ಯೆ- 10 ಹುದ್ದೆಗಳು

ಅರ್ಹತಾ ಮಾನದಂಡ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.

ಮಾಸಿಕ ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಆರಂಭಿಕ ವೇತನವಾಗಿ 21 ಸಾವಿರ ರೂ. ನೀಡಲಾಗುತ್ತದೆ.

ವಯೋಮಿತಿ:

ಹಿಂದೂಸ್ಥಾನ್ ಏರೋನಾಟಿಕ್ಸ್ ಫೈರ್​ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 1, 2022ಕ್ಕೆ ಅನುಗುಣವಾಗಿ 28 ವರ್ಷ ಮೀರಿರಬಾರದು. ಇದಾಗ್ಯೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿಡಿ ಸಡಿಲಿಕೆ ನೀಡಲಾಗಿದೆ.

ಇದನ್ನೂ ಓದಿ: Karnataka Bank Recruitment 2023: ಪದವೀಧರರಿಗೆ ಕರ್ನಾಟಕ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 15, 2023
  • ದೈಹಿಕ ಪರೀಕ್ಷೆ ನಡೆಯುವ ದಿನಾಂಕ- ಜನವರಿ 27, 2023
  • ಲಿಖಿತ ಪರೀಕ್ಷೆ ನಡೆಯುವ ದಿನಾಂಕ- ಜನವರಿ 29, 2023

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ