BMRCL: ಬೆಂಗಳೂರು ಮೆಟ್ರೋದಲ್ಲಿ ಹಲವು ಉದ್ಯೋಗಾವಕಾಶ: ಡಿಜಿಎಂ ಹುದ್ದೆಗೆ ತಿಂಗಳಿಗೆ 1.15 ಲಕ್ಷ ಸಂಬಳ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 21, 2021 | 10:32 PM

ಸಹಾಯಕ ಭದ್ರತಾ ಅಧಿಕಾರಿ (Assistant Security Officer) ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟು 37 ಹುದ್ದೆಗಳು ಖಾಲಿಯಿವೆ

BMRCL: ಬೆಂಗಳೂರು ಮೆಟ್ರೋದಲ್ಲಿ ಹಲವು ಉದ್ಯೋಗಾವಕಾಶ: ಡಿಜಿಎಂ ಹುದ್ದೆಗೆ ತಿಂಗಳಿಗೆ 1.15 ಲಕ್ಷ ಸಂಬಳ
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಬೆಂಗಳೂರು ಮೆಟ್ರೋ ನಿಗಮದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮತ್ತು ಅಸೆಸ್ಟೆಂಟ್ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ವಾಣಿಜ್ಯ ವಿಭಾಗದಲ್ಲಿ ಪದವಿ, ಸಿಎ ಅಥವಾ ಸಿಎಂಎ ಸಂಸ್ಥೆಗಳ ಸದಸ್ಯತ್ವ ಪಡೆದಿರಬೇಕು. ಹಣಕಾಸು, ಲೆಕ್ಕಪತ್ರ ನಿರ್ವಹಣೆಯಲ್ಲಿ ಒಟ್ಟು 15 ವರ್ಷಗಳ ಅನುಭವ, ಮ್ಯಾನೇಜರ್ ಹುದ್ದೆಯಲ್ಲಿ 3 ವರ್ಷಗಳ ಅನುಭವ ಇರಬೇಕು. ಕಂಪ್ಯೂಟರ್ ಬಳಕೆ ತಿಳಿದಿರಬೇಕಾದ್ದು ಕಡ್ಡಾಯ. ಹುದ್ದೆಗಳ ಸಂಖ್ಯೆ 2, ವೇತನ ತಿಂಗಳಿಗೆ ₹ 1,25,000.

ಅಸಿಸ್ಟೆಂಟರ್ ಜನರಲ್ ಮ್ಯಾನೇಜರ್ ಹುದ್ದೆಗೆ ಎಂಕಾಂ, ಎಂಬಿಎ, ಸಿಎ-ಇಂಟರ್, ಸಿಎಂಎ ಇಂಟರ್ ವಿದ್ಯಾರ್ಹತೆಯೊಂದಿಗೆ 15 ವರ್ಷಗಳ ವೃತ್ತಿ ಅನುಭವ ಇರುವವರು ಅರ್ಜಿ ಸಲ್ಲಿಸಬಹುದು. ಮ್ಯಾನೇಜರ್ ಹಂತದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಕಡ್ಡಾಯ. ಹುದ್ದೆಗಳು 1, ವೇತನ ತಿಂಗಳಿಗೆ ₹ 85,000. ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.27 ಕೊನೆಯ ದಿನ.

ಮೆಟ್ರೋ ನಿಗಮದಲ್ಲಿ ಸಹಾಯಕ ಭದ್ರತಾ ಅಧಿಕಾರಿ (Assistant Security Officer) ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟು 37 ಹುದ್ದೆಗಳು ಖಾಲಿಯಿವೆ. ಅರ್ಜಿ ಸಲ್ಲಿಸಲು ನ.17 ಕೊನೆಯದಿನ. ಸಂಬಳ ತಿಂಗಳಿಗೆ ₹ 30,000. ಪೊಲೀಸ್ ಸಬ್ ಇನ್​ಸ್ಪೆಕ್ಟರ್, ಭೂಸೇನೆ, ವಾಯುಪಡೆ, ಕೇಂದ್ರೀಯ ಮೀಸಲು ಪೊಲೀಸ್​ ಪಡೆಯಲ್ಲಿ ತತ್ಸಮಾನ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೆ ಅವಕಾಶವಿದೆ. ಈ ಅರ್ಜಿಗಳನ್ನು ಅಂಚೆ ಮೂಲಕ ಕಳಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಪ್ರಧಾನ ವ್ಯವಸ್ಥಾಪಕರು (ಎಚ್​ಆರ್), ಬೆಂಗಳೂರು ಮೆಟ್ರೋ ರೈಲು ನಿಗಮ, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಎಚ್.ರಸ್ತೆ, ಶಾಂತಿನಗರ, ಬೆಂಗಳೂರು-560027. ಹೆಚ್ಚಿನ ಮಾಹಿತಿಗೆ ಬೆಂಗಳೂರು ಮೆಟ್ರೋ ಜಾಲತಾಣದಲ್ಲಿ ‘ವೃತ್ತಿ ಜೀವನ’ ವಿಭಾಗ ನೋಡಿ. ವೆಬ್ ವಿಳಾಸ: https://kannada.bmrc.co.in/Career

ಇದನ್ನೂ ಓದಿ: Bengaluru: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ರಸ್ತೆ ದುರಸ್ತಿ ಕೆಲಸ; ನಟ್ಟಿಗರಿಂದ ವಿವಿಧ ಪ್ರತಿಕ್ರಿಯೆ
ಇದನ್ನೂ ಓದಿ: Bengaluru Metro: ನಮ್ಮ ಮೆಟ್ರೋ ರೈಲು ಸಂಚಾರಕ್ಕೆ 10 ವರ್ಷ ಪೂರ್ಣ! ಪ್ರಯಾಣಿಕರಿಗೆ ಕೃತಜ್ಞತೆ