BRO Recruitment 2022: 876 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ

| Updated By: ಝಾಹಿರ್ ಯೂಸುಫ್

Updated on: May 29, 2022 | 9:15 AM

BRO Recruitment 2022: ರೋಡ್ ಬಾರ್ಡರ್ ಆರ್ಗನೈಸೇಶನ್ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಹುದ್ದೆಗಳಿಗೆ ಭಾರತೀಯ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

BRO Recruitment 2022: 876 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ
BRO Recruitment 2022
Follow us on

BRO Recruitment 2022: ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (GREF) ರೋಡ್ ಬಾರ್ಡರ್ ಆರ್ಗನೈಸೇಶನ್ (BR0) ಅಡಿಯಲ್ಲಿ ಸ್ಟೋರ್ ಕೀಪರ್ ಟೆಕ್ನಿಕಲ್ ಮತ್ತು ಮಲ್ಟಿ ಸ್ಕಿಲ್ಡ್ ವರ್ಕರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಕುರಿತಾದ ಕಿರು ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಶೀಘ್ರದಲ್ಲೇ ವಿವರವಾದ ಅಧಿಸೂಚನೆಯನ್ನು BRO ನ ಅಧಿಕೃತ ವೆಬ್‌ಸೈಟ್ bro.gov.in ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಪ್ರಸ್ತುತ ಅಧಿಸೂಚನೆಯ ಪ್ರಕಾರ, ಒಟ್ಟು 876 ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ 377 ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳಿದ್ದರೆ, 499 ಮಲ್ಟಿ ಸ್ಕಿಲ್ಡ್ ವರ್ಕರ್ ಹುದ್ದೆಗಳಿವೆ. ಈ ಮೂಲಕ ಒಂದೇ ನೇಮಕಾತಿ ಪ್ರಕ್ರಿಯೆ ಅಡಿಯಲ್ಲಿ ಎಂಟು ನೂರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ರೋಡ್ ಬಾರ್ಡರ್ ಆರ್ಗನೈಸೇಶನ್ ಮುಂದಾಗಿದೆ.

ರೋಡ್ ಬಾರ್ಡರ್ ಆರ್ಗನೈಸೇಶನ್ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಹುದ್ದೆಗಳಿಗೆ ಭಾರತೀಯ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಆನ್‌ಲೈನ್​ನಲ್ಲೇ ನಡೆಯಲಿದ್ದು, ಅದರಂತೆ ಆಸಕ್ತರು ನೋಟಿಫಿಕೇಶನ್ ಬಿಡುಗಡೆಯ ಬಳಿಕ bro.gov.in ಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿಗಾಗಿ ಬಿಡುಗಡೆ ಮಾಡಲಾದ ಪರಿಷ್ಕೃತ ಮಾಹಿತಿಯನ್ನು ಪರಿಶೀಲಿಸಬಹುದು. ಯಾರ ನೇರ ಲಿಂಕ್ ಅನ್ನು ಕೆಳಗೆ ಹಂಚಿಕೊಳ್ಳಲಾಗಿದೆ.

BRO Recruitment 2022 ನೇಮಕಾತಿಯ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.