BSF Recruitment 2022: ಗಡಿ ಭದ್ರತಾ ಪಡೆಯ (BSF) ಗ್ರೂಪ್ B ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 90 ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ನ ಅಧಿಕೃತ ವೆಬ್‌ಸೈಟ್ rectt.bsf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಸಂಬಂಧಿತ ಖಾಲಿ ವಿವರಗಳು, ಆಯ್ಕೆ ಪ್ರಕ್ರಿಯೆ ಮತ್ತು ಅಧಿಸೂಚನೆ ಸೇರಿದಂತೆ ಎಲ್ಲಾ ವಿವರಗಳನ್ನು ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಈ ನೇಮಕಾತಿಯ ಅಡಿಯಲ್ಲಿ ಒಟ್ಟು 90 ಗ್ರೂಪ್ ಬಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್)- 1 ಹುದ್ದೆ
ಸಬ್ ಇನ್ಸ್‌ಪೆಕ್ಟರ್- 57 ಹುದ್ದೆಗಳು
ಜೂನಿಯರ್ ಇಂಜಿನಿಯರ್/ ಸಬ್ ಇನ್ಸ್‌ಪೆಕ್ಟರ್ (ಎಲೆಕ್ಟ್ರಿಕಲ್)- 32 ಹುದ್ದೆಗಳು
ವಿದ್ಯಾರ್ಹತೆ:
ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್) – ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್‌ನಲ್ಲಿ ಪದವಿಯನ್ನು ಹೊಂದಿರಬೇಕು. ಜೊತೆಗೆ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ನೋಂದಾಯಿಸಿರಬೇಕು.
ಸಬ್ ಇನ್ಸ್‌ಪೆಕ್ಟರ್ (ವರ್ಕ್ಸ್) – ಅಭ್ಯರ್ಥಿಯು ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು.
ಜೂನಿಯರ್ ಇಂಜಿನಿಯರ್/ ಸಬ್ ಇನ್ಸ್‌ಪೆಕ್ಟರ್ (ಎಲೆಕ್ಟ್ರಿಕಲ್) – ಅಭ್ಯರ್ಥಿಯು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 30 ವರ್ಷಗಳನ್ನು ಮೀರಬಾರದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಪರೀಕ್ಷೆಯ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಗಳನ್ನು 2 ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ, ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಯಶಸ್ವಿ ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ಪರಿಶೀಲನೆ, ದೈಹಿಕ ಗುಣಮಟ್ಟದ ಪರೀಕ್ಷೆ ಮತ್ತು ದೈಹಿಕ ದಕ್ಷತೆಯ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಎರಡೂ ಹಂತಗಳಲ್ಲಿ ಯಶಸ್ವಿಯಾದ ನಂತರ, ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಇರಲಿದೆ.
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 31, 2022.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.