Southern Railway Jobs: ಕ್ರೀಡಾ ಕೋಟಾದಲ್ಲಿ ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಾವಕಾಶ
RRC Southern Railway Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 1, 2022 ರ ವೇಳೆಗೆ 18 ರಿಂದ 25 ವರ್ಷ ವರ್ಷಗಳೊಳಗಿರಬೇಕು.
RRC Southern Railway Recruitment 2022: ಭಾರತೀಯ ರೈಲ್ವೆ ಇಲಾಖೆಯ ದಕ್ಷಿಣ ರೈಲ್ವೆ ವಿಭಾಗದಲ್ಲಿನ ಕೆಲ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿಯು ಕ್ರೀಡಾ ಕೋಟಾದಲ್ಲಿ ನಡೆಯಲಿದ್ದು, ಹೀಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.
ವಿವರಗಳು: ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ: 5
ಹುದ್ದೆಗಳ ವಿವರಗಳು: ವಾಲಿಬಾಲ್ (ಪುರುಷರ ವಿಭಾಗ): 2 ಹುದ್ದೆಗಳು ವಾಲಿಬಾಲ್ (ಮಹಿಳೆಯರ ವಿಭಾಗ): 3 ಹುದ್ದೆಗಳು
ವೇತನ ಶ್ರೇಣಿ: 7ನೇ ವೇತನ ಶ್ರೇಣಿಯ ಆಧಾರದ ಮೇಲೆ ಈ ಹುದ್ದೆಗಳಲ್ಲಿ ವೇತನ ನೀಡಲಾಗುತ್ತದೆ.
ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 1, 2022 ರ ವೇಳೆಗೆ 18 ರಿಂದ 25 ವರ್ಷ ವರ್ಷಗಳೊಳಗಿರಬೇಕು.
ಅರ್ಹತೆಗಳು: 12ನೇ ತರಗತಿ ಪಾಸ್ ಆಗಿರಬೇಕು. 19 ವರ್ಷದೊಳಗಿನ ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ ವಾಲಿಬಾಲ್‌ನಲ್ಲಿ ಗುರುತಿಸಿರಬೇಕು.
ಅರ್ಜಿ ಶುಲ್ಕ: ಸಾಮಾನ್ಯ / EWS / OBC ಅಭ್ಯರ್ಥಿಗಳಿಗೆ: ರೂ.500 SC / ST / PWD / ಮಹಿಳಾ ಅಭ್ಯರ್ಥಿಗಳಿಗೆ: ರೂ.250 / –
ಆಯ್ಕೆ ವಿಧಾನ: ಸ್ಪೋರ್ಟ್ಸ್ ಮೆರಿಟ್, ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 13, 2022.
ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಅಭ್ಯರ್ಥಿಗಳು ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: The Assistant Personnel Officer, Railway Recruitment Cell, Southern Railway, 3rd Floor, No.5, P.V.Cherian Crescent Road, Egmore, Chennai – 600 008.
ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.