SSC Recruitment 2022: ಸಿಬ್ಬಂದಿ ನೇಮಕಾತಿ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

SSC Selection Recruitment 2022: ರಾಜ್ಯದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ssckkr.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಂತೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

SSC Recruitment 2022: ಸಿಬ್ಬಂದಿ ನೇಮಕಾತಿ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC Selection Recruitment 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on:May 18, 2022 | 7:22 PM

SSC Recruitment 2022: ಸಿಬ್ಬಂದಿ ನೇಮಕಾತಿ ಆಯೋಗ (SSC) ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 2065 ಖಾಲಿ ಹುದ್ದೆಗಳಿದ್ದು, ಇದರಲ್ಲಿ 27 ಹುದ್ದೆಗಳು ಕರ್ನಾಟಕಕ್ಕೆ ಸೀಮಿತವಿದೆ. ಹೀಗಾಗಿ ರಾಜ್ಯದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ssckkr.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಂತೆ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ- 2065

ಸಾಮಾನ್ಯ – 915 ಹುದ್ದೆಗಳು SC – 248 ಹುದ್ದೆಗಳು ST – 121 ಹುದ್ದೆಗಳು OBC – 599 ಹುದ್ದೆಗಳು EWS – 182 ಹುದ್ದೆಗಳು

ಇದನ್ನೂ ಓದಿ
Image
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
Image
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Image
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Image
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ? ಮೆಟ್ರಿಕ್ ಲೆವೆಲ್ ಪೋಸ್ಟ್‌ಗಳು – ಯಾವುದೇ ಮಾನ್ಯತೆ ಪಡೆದ ಮಂಡಳಿಯಲ್ಲಿ 10 ನೇ ತರಗತಿ ಪಾಸಾಗಿರಬೇಕು. ಮಧ್ಯಂತರ ಮಟ್ಟದ ಹುದ್ದೆಗಳು – ಯಾವುದೇ ಮಾನ್ಯತೆ ಪಡೆದ ಮಂಡಳಿಯಲ್ಲಿ 10+2 (ಪಿಯುಸಿ) ಪಾಸಾಗಿರಬೇಕು. ಪದವಿ ಮಟ್ಟದ ಹುದ್ದೆಗಳು -ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ಸ್ಟ್ರೀಮ್‌ನಲ್ಲಿ ಬ್ಯಾಚುಲರ್ ಪದವಿ ಪಾಸಾಗಿರಬೇಕು.

SSC ಅರ್ಜಿ ಶುಲ್ಕ ಎಷ್ಟು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 100/-ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಪ್ರಮುಖ ದಿನಾಂಕಗಳು: ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ದಿನಾಂಕಗಳು: 12.05.2022 ರಿಂದ 13.06.2022 ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 13.06.2022 (23.00 PM ವರೆಗೆ) ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಮತ್ತು ಸಮಯ: 15.06.2022 (23.00 PM) ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕ್‌ನ ಕೆಲಸದ ಸಮಯದಲ್ಲಿ): 18.06.2022 ಆನ್‌ಲೈನ್ ಪಾವತಿ ಸೇರಿದಂತೆ ‘ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ’ ದಿನಾಂಕಗಳು: 20.06.2022 ರಿಂದ 24.06.2022 (23:00 PM) ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕಗಳು: ಆಗಸ್ಟ್ 2022 (ತಾತ್ಕಾಲಿಕವಾಗಿ)

ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಕರ್ನಾಟಕದ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಹಾಗೆಯೇ ಈ ಲಿಂಕ್​ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

Published On - 7:22 pm, Wed, 18 May 22