Apply Now: ಡಿಜಿಟಲ್ ಇಂಡಿಯಾ ಕಾರ್ಪೊರೇಷನ್​​​ನಲ್ಲಿ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ 19 ಹೆಡ್ SEMT, ಸೀನಿಯರ್ ಕನ್ಸಲ್ಟೆಂಟ್ ಮತ್ತು ಕನ್ಸಲ್ಟೆಂಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. BE, BTech, MBA, MCA ಪದವೀಧರರು ಡಿಸೆಂಬರ್ 5ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಜೊತೆಗೆ ಆಯ್ಕೆಯಾದವರಿಗೆ ವಾರ್ಷಿಕ 1 ಲಕ್ಷ ರೂ. ವೇತನ ಸಿಗಲಿದೆ.

Apply Now: ಡಿಜಿಟಲ್ ಇಂಡಿಯಾ ಕಾರ್ಪೊರೇಷನ್​​​ನಲ್ಲಿ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
Digital India Corporation

Updated on: Nov 30, 2025 | 6:15 PM

ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಹೆಡ್ SEMT, ಸೀನಿಯರ್ ಕನ್ಸಲ್ಟೆಂಟ್, ಕನ್ಸಲ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 19 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 5 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ:

  • ಹೆಡ್ SEMT ಹುದ್ದೆಗಳ ಸಂಖ್ಯೆ: 6
  • ಹಿರಿಯ ಸಲಹೆಗಾರ ಹುದ್ದೆಗಳ ಸಂಖ್ಯೆ: 6
  • ಸಲಹೆಗಾರ ಹುದ್ದೆಗಳ ಸಂಖ್ಯೆ: 7

ಇದನ್ನೂ ಓದಿ: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್​​ ನ್ಯೂಸ್​; ಹೀಗೆ ಅರ್ಜಿ ಸಲ್ಲಿಸಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ BE, BTech, MTech, MMM, MBA, MCA ಉತ್ತೀರ್ಣರಾಗಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಕೆಲಸದ ಅನುಭವವನ್ನು ಸಹ ಹೊಂದಿರಬೇಕು. ಈ ಅರ್ಹತೆಗಳನ್ನು ಹೊಂದಿರುವವರು ಡಿಸೆಂಬರ್ 5 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸಂದರ್ಶನವನ್ನು ಆಧರಿಸಿರುತ್ತದೆ. ಆಯ್ಕೆಯಾದವರಿಗೆ ವರ್ಷಕ್ಕೆ 1 ಲಕ್ಷ ರೂ. ವೇತನವನ್ನು ನೀಡಲಾಗುತ್ತದೆ.

ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಉದ್ಯೋಗ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ