HLL Lifecare Recruitment 2025: ಸರ್ಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ; HLL ಲೈಫ್‌ಕೇರ್ ಲಿಮಿಟೆಡ್ನಲ್ಲಿ ನೇಮಕಾತಿ
HLL ಲೈಫ್‌ಕೇರ್ ಲಿಮಿಟೆಡ್ ಅಧಿಕಾರಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 4 ಹುದ್ದೆಗಳಿಗೆ ಡಿಪ್ಲೊಮಾ, ಪದವಿ, BE/B.Tech ಪೂರ್ಣಗೊಳಿಸಿದ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಡಿಸೆಂಬರ್ 03 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಿ ಸರ್ಕಾರಿ ಉದ್ಯೋಗಾವಕಾಶವನ್ನು ಬಳಸಿಕೊಳ್ಳಿ.

HLL ಲೈಫ್‌ಕೇರ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಮೂಲಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 03 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
ಹುದ್ದೆಯ ಅಧಿಸೂಚನೆ:
- ಸಂಸ್ಥೆಯ ಹೆಸರು : HLL ಲೈಫ್‌ಕೇರ್ ಲಿಮಿಟೆಡ್ (HLL Lifecare)
- ಹುದ್ದೆಗಳ ಸಂಖ್ಯೆ: 4
- ಉದ್ಯೋಗ ಸ್ಥಳ: ರಾಜಸ್ಥಾನ , ಉತ್ತರ ಪ್ರದೇಶ
- ಹುದ್ದೆಯ ಹೆಸರು: ಅಧಿಕಾರಿ
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಪದವಿ, BE/ B.Tech, ಪದವಿಯನ್ನು ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್; ಹೀಗೆ ಅರ್ಜಿ ಸಲ್ಲಿಸಿ
ವಯಸ್ಸಿನ ಮಿತಿ:
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-01-2025 ರಂತೆ 40 ವರ್ಷ ಮೀರಬಾರದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ಇಂಟರ್ವ್ಯೂಗೆ ಹಾಜರಾಗಬೇಕು.
ನೇರ ಸಂದರ್ಶನ ನಡೆಯುವ ಸ್ಥಳದ ವಿವರಗಳು:
- ಜೈಪುರ: ಹೋಟೆಲ್ ರಿಮ್ ವಿಸ್ತಾ, ದೇವಿ ಮಾರ್ಗ, ಬನಿ ಪಾರ್ಕ್, ಜೈಪುರ, ರಾಜಸ್ಥಾನ
- ಉನ್ನಾವ್: ಹೋಟೆಲ್ ಗೀತಾ ಗಾರ್ಡನ್, ಎದುರು. ಪವರ್ ಹೌಸ್, ಮುರ್ತಾಜಾ ನಗರ, ದಹಿ ಚೌಕಿ, ಉನ್ನಾವ್,ಉತ್ತರ ಪ್ರದೇಶ
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




