Mysuru Recruitment 2025: ಮೈಸೂರು ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ನೇಮಕಾತಿ
ಮೈಸೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2017ರ ಪೂರ್ವದಲ್ಲಿ ನೇಮಕಗೊಂಡು ಪ್ರಸ್ತುತ ನೇರ ಪಾವತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18-55 ವರ್ಷದ ಪೌರಕಾರ್ಮಿಕರು ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಡಿಯಲ್ಲಿ ಮೈಸೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶ.

ಮೈಸೂರು ಜಿಲ್ಲೆಯ ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ -ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಅದರಲ್ಲೂ ವಿಶೇಷವಾಗಿ ಮೈಸೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ನೇಮಕಾತಿಯಡಿಯಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಮಾಡಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರಪಾವತಿ, ಕ್ಷೇಮಾಭಿವೃದ್ಧಿ ಪೌರಕಾರ್ಮಿಕ ಅಥವಾ ದಿನಗೂಲಿ ಅಥವಾ -ಗುತ್ತಿಗೆ ಅಥವಾ ಸಮಾನ ಕೆಲಸ ಸಮಾನ ವೇತನ ಅಥವಾ ಹೊರಗುತ್ತಿಗೆ ಅಥವಾ ಲೋಡರ್ಸ್ ಅಥವಾ ಕ್ಲೀನರ್ (18 ರಿಂದ 55ರ ವಯೋಮಿತಿಯೊಳಗಿರು ವವರು) ಆಧಾರದಲ್ಲಿ 2017ರ ಪೂರ್ವದಲ್ಲಿ ನೇಮಕಾತಿ ಹೊಂದಿ ಪ್ರಸ್ತುತ ನೇರ ಪಾವತಿಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಅರ್ಜಿಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆದು ದಾಖಲಾತಿಯೊಂದಿಗೆ ಡಿಸೆಂಬರ್ 30ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್; ಹೀಗೆ ಅರ್ಜಿ ಸಲ್ಲಿಸಿ
| ನಗರ ಸ್ಥಳೀಯ ಸಂಸ್ಥೆಗಳ ಹೆಸರು | ನೇರ ನೇಮಕಾತಿ ಪೌರಕಾರ್ಮಿಕರ ಹುದ್ದೆಗಳ ಸಂಖ್ಯೆ |
| ನಂಜನಗೂಡು ನಗರಸಭೆ | 4 |
| ಹುಣಸೂರು ನಗರಸಭೆ | 6 |
| ಹೂಟಗಳ್ಳಿ ನಗರಸಭೆ | 6 |
| ಕೆ.ಆರ್.ನಗರ ಪುರಸಭೆ | 3 |
| ಪಿರಿಯಾಪಟ್ಟಣ ಪುರಸಭೆ | 3 |
| ಹೆಚ್.ಡಿ.ಕೋಟೆ ಪುರಸಭೆ | 3 |
| ತಿ.ನರಸೀಪುರ ಪುರಸಭೆ | 3 |
| ಬನ್ನೂರು ಪುರಸಭೆ | 3 |
| ಸರಗೂರು ಪಟ್ಟಣ ಪಂಚಾಯಿತಿ | 3 |
| ಕಡಕೊಳ ಪಟ್ಟಣ ಪಂಚಾಯಿತಿ | 3 |
| ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ | 3 |
| ಶ್ರೀರಾಂಪುರ ಪಟ್ಟಣ ಪಂಚಾಯಿತಿ | 3 |
| ಬೋಗಾದಿ ಪಟ್ಟಣ ಪಂಚಾಯಿತಿ | 3 |
ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ. ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ ಪೋಸ್ಟ್ ಮಾಡಿ.
ಕಿರು ಅಧಿಸೂಚನೆಯ ಪಿಡಿಎಫ್ ಓದಲು ಇಲ್ಲಿ ಕ್ಲಿಕ್ ಮಾಡಿ(Mysore-District-Urban-Development-Short-Notification-for-46-Civil-Servant-Posts)
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




