
ಫಾರ್ಮಾ ಡಿ(Pharm.D) ಎಂಬುದು ಫಾರ್ಮಸಿಯಲ್ಲಿ ವೃತ್ತಿಪರ ಡಾಕ್ಟರೇಟ್ ಪದವಿಯಾಗಿದ್ದು , ಇದು ಕ್ಲಿನಿಕಲ್ ಸ್ಟಡಿ, ರೋಗಿಗಳ ಆರೈಕೆ ಮತ್ತು ಔಷಧಿ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಫಾರ್ಮ್ ಡಿ ಅಂದರೆ ಡಾಕ್ಟರ್ ಆಫ್ ಫಾರ್ಮಸಿ ಆಗಿದೆ. ಫಾರ್ಮ್ ಡಿ ಕೋರ್ಸ್ ಅವಧಿಯು ಒಟ್ಟು 6 ವರ್ಷಗಳಿದ್ದು , ಇದರಲ್ಲಿ ಐದು ವರ್ಷಗಳ ಶೈಕ್ಷಣಿಕ ಅಧ್ಯಯನ ಮತ್ತು ಆಸ್ಪತ್ರೆಯಲ್ಲಿ ಅಥವಾ ಕ್ಲಿನಿಕಲ್ ಸೆಟ್ಟಿಂಗ್‌ನಲ್ಲಿ ಒಂದು ವರ್ಷದ ಇಂಟರ್ನ್‌ಶಿಪ್ ಒಳಗೊಂಡಿರುತ್ತದೆ.
ಫಾರ್ಮ್ ಡಿ ಅರ್ಹತಾ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ. 50 ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳು ಈ ಕೋರ್ಸ್‌ಗೆ ಅಭ್ಯರ್ಥಿಗಳು ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ. ಬಿ ಫಾರ್ಮಸಿ ಪದವೀಧರರು ಲ್ಯಾಟರಲ್ ಎಂಟ್ರಿ ಪ್ರವೇಶದ ಮೂಲಕ ಫಾರ್ಮ್ ಡಿ ಪದವಿಯನ್ನು ಪ್ರವೇಶಿಸಬಹುದು. NEET, MHT CET, GPAT, ಇತ್ಯಾದಿಗಳು ಭಾರತದ ಅತ್ಯುತ್ತಮ ಫಾರ್ಮಸಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಕೆಲವು ಅತ್ಯುತ್ತಮ ಪ್ರವೇಶ ಪರೀಕ್ಷೆಗಳಾಗಿವೆ .
ಫಾರ್ಮ್ ಡಿ ಕೋರ್ಸ್ ಶುಲ್ಕಗಳು ವಿವಿಧ ಕಾಲೇಜುಗಳಿಗೆ ಅನುಗುಣವಾಗಿ ಭಿನ್ನವಾಗಿರುತ್ತದೆ. ನಿರ್ದಿಷ್ಟ ವಿದ್ಯಾರ್ಥಿವೇತನಗಳು ಆಧರಿಸಿ ಬದಲಾಗಬಹುದು. ಸಾಮಾನ್ಯವಾಗಿ 2.3 ಲಕ್ಷದಿಂದ ಪ್ರಾರಂಭವಾಗಿ 9.6 ಲಕ್ಷದವರೆಗೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಬೆಂಗಳೂರಿನಲ್ಲಿ ಸುಮಾರು 4 ಉನ್ನತ ಫಾರ್ಮಸಿ ಕಾಲೇಜುಗಳಿವೆ ಮತ್ತು ಅವೆಲ್ಲವೂ ಖಾಸಗಿ ಸಂಸ್ಥೆಗಳ ಒಡೆತನದಲ್ಲಿದೆ. ಬೆಂಗಳೂರಿನ ಅತ್ಯುತ್ತಮ ಫಾರ್ಮಸಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೆಸಿಇಟಿ ಮತ್ತು ರುಸಾಟ್ ಜನಪ್ರಿಯ ಪ್ರವೇಶ ಪರೀಕ್ಷೆ ಬರೆಯಬೇಕು . ಎಂಎಸ್ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ಆಚಾರ್ಯ ಬಿಎಂ ರೆಡ್ಡಿ ಫಾರ್ಮಸಿ ಕಾಲೇಜು, ಕೆಎಲ್ಇ ಫಾರ್ಮಸಿ ಕಾಲೇಜು ಮತ್ತು ಕೃಪಾನಿಧಿ ಫಾರ್ಮಸಿ ಕಾಲೇಜು ಬೆಂಗಳೂರಿನ ಟಾಪ್ ಫಾರ್ಮಸಿ ಕಾಲೇಜುಗಳಾಗಿವೆ.
ಫಾರ್ಮ್ ಡಿ ಕೋರ್ಸ್ ಪೂರ್ಣಗೊಳಿಸಿದ ನಂತರ, ಪದವೀಧರರು ಕ್ಲಿನಿಕಲ್ ಫಾರ್ಮಾಸಿಸ್ಟ್‌ಗಳು, ಆಸ್ಪತ್ರೆ ಫಾರ್ಮಸಿ ನಿರ್ದೇಶಕರು, ಆಸ್ಪತ್ರೆ ಸಿಬ್ಬಂದಿ ಫಾರ್ಮಸಿಸ್ಟ್‌ಗಳು, ಚಿಲ್ಲರೆ ಫಾರ್ಮಸಿಸ್ಟ್‌ಗಳು, ಔಷಧ ತಜ್ಞರು ಮತ್ತು ಫಾರ್ಮಸಿಸ್ಟ್‌ಗಳಂತಹ ಉದ್ಯೋಗಗಳನ್ನು ಆಯ್ಕೆ ಮಾಡಬಹುದು . ಔಷಧಿ ತಯಾರಿಕಾ ಕಂಪನಿಯಲ್ಲಿ ಮತ್ತು ಶಿಕ್ಷಣ ವಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಬಹುದು. ಭಾರತದಲ್ಲಿ ಪದವೀಧರರು ಗಳಿಸುವ ಸರಾಸರಿ ಫಾರ್ಮ್ ಡಿ ವೇತನವು 2.30 ಲಕ್ಷದಿಂದ 10ಲಕ್ಷದ ನಡುವೆ ಇರುತ್ತದೆ.
ಲುಪಿನ್, ಸಿಪ್ಲಾ, ಪಿರಾಮಲ್, ಸನ್ ಫಾರ್ಮಾಸ್ಯುಟಿಕಲ್ಸ್, ಅರಬಿಂದೋ ಫಾರ್ಮಾ, ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಇಂಕ್., ಜೈಡಸ್ ಕ್ಯಾಡಿಲಾ, ಇತ್ಯಾದಿ ಔಷಧಿ ತಯಾರಿಕಾ ಕಂಪನಿಯಲ್ಲಿ ನೀವು ಉತ್ತಮ ವೇತನದೊಂದಿಗೆ ಕೆಲಸವನ್ನು ಪಡೆಯಬಹುದು.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:13 pm, Tue, 6 May 25