AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

89ನೇ ಇಳಿವಯಸ್ಸಿನ ಡಾಕ್ಟರೇಟ್ ಅಜ್ಜ… ಕರ್ನಾಟಕದ ಮೊದಲ ಹಿರಿಯ ವಯಸ್ಸಿನ ಪಿ.ಎಚ್.ಡಿ ಪದವೀಧರ!

ತಮ್ಮ ಮೊಮ್ಮಕ್ಕಳು ಪದವಿ ಓದುತ್ತಿರುವ ವಯಸ್ಸಿನಲ್ಲಿ ತಾವು ಪಿ.ಎಚ್.ಡಿ. ಪದವಿ ಪಡೆದುಕೊಳ್ಳುವ ಮೂಲಕ, ಈ ಇಳಿವಯಸ್ಸಿನಲ್ಲಿಯೂ ಮಾರ್ಕಂಡೇಯ ಅಜ್ಜ, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

89ನೇ ಇಳಿವಯಸ್ಸಿನ ಡಾಕ್ಟರೇಟ್ ಅಜ್ಜ... ಕರ್ನಾಟಕದ ಮೊದಲ ಹಿರಿಯ ವಯಸ್ಸಿನ ಪಿ.ಎಚ್.ಡಿ ಪದವೀಧರ!
ರಾಜ್ಯದ ಮೊದಲ ಹಿರಿಯ ವಯಸ್ಸಿನ ಪಿ.ಎಚ್.ಡಿ ಪದವೀಧರ ಇವರೇ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Feb 14, 2024 | 2:31 PM

Share

ಕಲಿಕೆಗೆ ವಯಸ್ಸಿನ ಮೀತಿ ಇಲ್ಲ ಅಂತಾರೆ. ಅದನ್ನು ಸಾಬೀತು ಮಾಡಿ ತೋರಿಸಿರೋ ಧಾರವಾಡದ ಹಿರಿಯಜ್ಜ ತಮ್ಮ 89ನೇ ಇಳಿವಯಸ್ಸಿನಲ್ಲಿ ಪಿ.ಎಚ್.ಡಿ ಪದವಿ (Karnatak University) ಪಡೆದುಕೊಳ್ಳುವ ಮೂಲಕ, ರಾಜ್ಯದ ಮೊದಲ ಹಿರಿ ವಯಸ್ಸಿನ (Karnaraka State) ಪಿ.ಎಚ್.ಡಿ ಪದವೀಧರ ಎಂಬ ಹೆಗ್ಗಳ್ಳಿಕೆಯ ವಿದ್ವತ್ ಸಾಧಿಸಿಕೊಂಡಿದ್ದಾರೆ. ಹಾಗಾದರೆ ಯಾರದು ಆ ಡಾಕ್ಟರೇಟ್ ಅಜ್ಜ? ಬನ್ನಿ ನೋಡೋಣ… ಹೀಗೆ ಬರೆಯುತ್ತ, ಅಧ್ಯಯನ ಮಾಡುತ್ತಾ ಕುಳಿತಿರೋ ಇವರ ಹೆಸರು ಮಾರ್ಕಂಡೇಯ ದೊಡ್ಡಮನಿ. ವಯಸ್ಸು 89 ವರ್ಷ. ಇವರೀಗ ಕರ್ನಾಟಕದಲ್ಲಿ ಅತ್ಯಂತ ಹಿರಿಯ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿರೋ ಖ್ಯಾತಿ ಪಡೆದಿದ್ದಾರೆ. ಹೌದು; ಧಾರವಾಡ ಜಯನಗರದ ನಿವಾಸಿಯಾಗಿರೋ ಮಾರ್ಕಂಡೇಯ ದೊಡ್ಡಮನಿ ನಿವೃತ್ತ ಶಿಕ್ಷಕರು (PhD graduate Markandeya).

ಸಾಹಿತ್ಯದಲ್ಲಿಯೂ ಸಾಕಷ್ಟು ಹೆಸರು ಮಾಡಿರೋ ಇವರು ಸತತ 18 ವರ್ಷಗಳ ಕಾಲ ಡೋಹರ ಕಕ್ಕಯ್ಯನವರ ವಚನ ಮತ್ತು ಜೀವನ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ ’ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ಇದೀಗ ಅವರ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್​ಡಿ ಪದವಿ ನೀಡಿದೆ. ಹೀಗಾಗಿ ಅವರೀಗ ಡಾ. ಮಾರ್ಕಂಡೇಯ ಆಗಿ ಹೊರಹೊಮ್ಮಿದ್ದಾರೆ!

ಡೋಹರ ಕಕ್ಕಯ್ಯನವರ ಕೇವಲ 6 ವಚನಗಳು ಮಾತ್ರವೇ ಲಭ್ಯ ಇರೋದು. ಹೀಗಾಗಿ ಯಾರೂ ಸಹ ಇಲ್ಲಿಯವರೆಗೆ ಈ ಬಗ್ಗೆ ಅಧ್ಯಯನ ಮಾಡುವ ವಿಚಾರ ಮಾಡಿರಲಿಲ್ಲ. ಆದರೆ ಇತರೆ ಶರಣರ ವಚನಗಳಲ್ಲಿ ಕಕ್ಕಯ್ಯನವರ ಪ್ರಸ್ತಾಪವಾಗಿದೆ. ಅದನ್ನೆಲ್ಲ ಪರಿಶೀಲಿಸಿ, ಕಕ್ಕಯ್ಯನವರು ಭೇಟಿ ನೀಡಿದ್ದ ಕಾದ್ರೊಳ್ಳಿ, ಕಕ್ಕೇರಿ ಸ್ಥಳಗಳಿಗೂ ಭೇಟಿ ನೀಡಿ, ಸಂಪೂರ್ಣವಾಗಿ ಸಂಶೋಧನಾತ್ಮಕವಾಗಿ 150 ಪುಟಗಳ ಈ ಅಧ್ಯಯನ ಮಹಾಪ್ರಬಂಧ ಸಿದ್ಧಪಡಿಸಿದ್ದಾರೆ.

ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಇಲ್ಲಿಯವರೆಗೆ 79 ವರ್ಷ ವಯಸ್ಸಿನವರೆಗೂ ಪಿಎಚ್.ಡಿ ಪದವಿ ಪಡೆದುಕೊಂಡವರಿದ್ದಾರೆ. ಆದರೆ ಅದನ್ನೆಲ್ಲ ಸರಿಗಟ್ಟಿ ತಮ್ಮ ಹೆಸರಿನಲ್ಲಿ ಆ ದಾಖಲೆ ಉಳಿಯುವಂತೆ ಮಾಡಿದ್ದಾರೆ. ಇನ್ನು ಇವರ ಈ ಸಾಧನೆ ಮನೆಯವರಿಗೆ ಖುಷಿ ತಂದಿದೆ ಎನ್ನುತ್ತಾರೆ ಮಾರ್ಕಂಡೇಯವರ ಪತ್ನಿ ಸುಶೀಲಾ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್