ESIC Recruitment 2022: ರಾಜ್ಯ ವಿಮಾ ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 67 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Jul 03, 2022 | 5:31 PM

ESIC Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗಳು ESIC ಯ ಅಧಿಕೃತ ವೆಬ್‌ಸೈಟ್‌ esic.nic.in ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ESIC Recruitment 2022: ರಾಜ್ಯ ವಿಮಾ ನಿಗಮದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 67 ಸಾವಿರ ರೂ.
ESIC Recruitment 2022
Follow us on

ESIC Recruitment 2022: ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಸ್ಪೆಷಲಿಸ್ಟ್ ಗ್ರೇಡ್ 2 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗಳು ESIC ಯ ಅಧಿಕೃತ ವೆಬ್‌ಸೈಟ್‌ esic.nic.in ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 26 ಎಂದು ತಿಳಿಸಲಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

ಒಟ್ಟು ಹುದ್ದೆಗಳ ಸಂಖ್ಯೆ:
ಈ ನೇಮಕಾತಿಯ ಮೂಲಕ ಒಟ್ಟು 28 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಹುದ್ದೆಗಳ ಹೆಸರು:

  • ಬಯೋಕೆಮಿಸ್ಟ್ರಿ- 2 ಹುದ್ದೆಗಳು
  • ಡರ್ಮಟಾಲಜಿ- 1 ಹುದ್ದೆ
  • ಜನರಲ್ ಮೆಡಿಸಿನ್- 3 ಹುದ್ದೆಗಳು
  • ಸಾಮಾನ್ಯ ಶಸ್ತ್ರಚಿಕಿತ್ಸೆ- 6 ಹುದ್ದೆಗಳು
  • ರೋಗಶಾಸ್ತ್ರ- 1 ಹುದ್ದೆ
  • ಪೀಡಿಯಾಟ್ರಿಕ್ಸ್- 1 ಹುದ್ದೆ
  • ಸೈಕಿಯಾಟ್ರಿಕ್- 1 ಹುದ್ದೆ
  • ರೇಡಿಯಾಲಜಿ- 7 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ಆಯಾ ಹುದ್ದೆಗಳಿಗೆ ವಿವಿಧ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ ಲೆವೆಲ್ 11 ರ ಅಡಿಯಲ್ಲಿ ತಿಂಗಳಿಗೆ ₹ 67700 ಆರಂಭಿಕ ವೇತನವನ್ನು ನೀಡಲಾಗುತ್ತದೆ.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳು ಎಂದು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ಹುದ್ದೆಗಳಿಗೆ ಜುಲೈ 26 ರವರೆಗೆ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.