
ಹಾಸನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಧಿಕೃತ ಅಧಿಸೂಚನೆಯ ಮೂಲಕ ನರ್ಸ್, ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ವಿಶೇಷವಾಗಿ ಹಾಸನದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 25 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗಿ.
| ಪೋಸ್ಟ್ ಹೆಸರು | ಅರ್ಹತೆ |
| ನರವಿಜ್ಞಾನಿ/MD ವೈದ್ಯ/MBBS | ಎಂಬಿಬಿಎಸ್ , ಎಂಡಿ, ಡಿಎಂ, ಡಿಎನ್‌ಬಿ |
| ನರ್ಸ್ | ಜಿಎನ್‌ಎಂ, ಬಿ.ಎಸ್ಸಿ |
| ಭೌತಚಿಕಿತ್ಸಕ | ಬಿಪಿಟಿ |
| ಕ್ಲಿನಿಕಲ್ ಸೈಕಾಲಜಿಸ್ಟ್ | ಎಂ.ಫಿಲ್, ಸ್ನಾತಕೋತ್ತರ ಪದವಿ |
| ಸ್ಪೀಚ್ ಥೆರಪಿಸ್ಟ್ | ಬಿಎಎಸ್‌ಎಲ್‌ಪಿ |
| ಜಿಲ್ಲಾ ಸಂಯೋಜಕರು | ಸ್ನಾತಕೋತ್ತರ ಪದವಿ |
ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣವಕಾಶ; 500ರಕ್ಕೂ ಹೆಚ್ಚು ನೇಮಕಾತಿ
| ಪೋಸ್ಟ್ ಹೆಸರು | ಸಂಬಳ (ತಿಂಗಳಿಗೆ) |
| ನರವಿಜ್ಞಾನಿ/MD ವೈದ್ಯ/MBBS | ರೂ.60000-150000/- |
| ನರ್ಸ್ | ರೂ.15472-19999/- |
| ಭೌತಚಿಕಿತ್ಸಕ | ರೂ.25000/- |
| ಕ್ಲಿನಿಕಲ್ ಸೈಕಾಲಜಿಸ್ಟ್ | ರೂ.26250/- |
| ಸ್ಪೀಚ್ ಥೆರಪಿಸ್ಟ್, ಜಿಲ್ಲಾ ಸಂಯೋಜಕರು | ರೂ.30000/- |
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕಟ್ಟಡ, ಹಾಸನಾಂಬ ಒಳಾಂಗಣ ಕ್ರೀಡಾಂಗಣ, ಸಲಗಾಮೆ ರಸ್ತೆ, ಹಾಸನ.
ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: 06-Nurse-Clinical-Psychologist-Posts-Advt-Details-DHFWS-Hassan
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ