HPCL Recruitment 2022: HPCL ನೇಮಕಾತಿ: 303 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

| Updated By: ಝಾಹಿರ್ ಯೂಸುಫ್

Updated on: Jul 06, 2022 | 3:56 PM

HPCL Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್​ನ ಅಧಿಕೃತ ವೆಬ್‌ಸೈಟ್ hindustanpetroleum.com ಮೂಲಕ ಅರ್ಜಿ ಸಲ್ಲಿಸಬಹುದು.

HPCL Recruitment 2022: HPCL ನೇಮಕಾತಿ: 303 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
HPCL Recruitment 2022
Follow us on

HPCL Recruitment 2022: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಎಂಜಿನಿಯರಿಂಗ್, ಆಫೀಸರ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 303 ಹುದ್ದೆಗಳಿಗೆ ಭರ್ತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್​ನ ಅಧಿಕೃತ ವೆಬ್‌ಸೈಟ್ hindustanpetroleum.com ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

  • ಮೆಕ್ಯಾನಿಕಲ್ ಇಂಜಿನಿಯರ್- 103 ಹುದ್ದೆಗಳು
  • ಎಲೆಕ್ಟ್ರಿಕಲ್ ಇಂಜಿನಿಯರ್- 42 ಹುದ್ದೆಗಳು
  • ಇನ್ಸ್ಟ್ರುಮೆಂಟೇಶನ್ ಇಂಜಿನಿಯರ್- 30 ಹುದ್ದೆಗಳು
  • ಸಿವಿಲ್ ಎಂಜಿನಿಯರ್- 25 ಹುದ್ದೆಗಳು
  • ಕೆಮಿಕಲ್ ಇಂಜಿನಿಯರ್- 7 ಹುದ್ದೆಗಳು
  • ಮಾಹಿತಿ ವ್ಯವಸ್ಥೆ ಅಧಿಕಾರಿ- 5 ಹುದ್ದೆಗಳು
  • ಸುರಕ್ಷತಾ ಅಧಿಕಾರಿ- 13 ಹುದ್ದೆಗಳು
  • ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ- 27 ಹುದ್ದೆಗಳು
  • ಗುಣಮಟ್ಟ ನಿಯಂತ್ರಣ ಅಧಿಕಾರಿ- 5 ಹುದ್ದೆಗಳು
  • ವಿಶೇಷ ಅಧಿಕಾರಿ- 15 ಹುದ್ದೆಗಳು
  • ಚಾರ್ಟರ್ಡ್ ಅಕೌಂಟೆಂಟ್- 15 ಹುದ್ದೆಗಳು
  • ಮಾನವ ಸಂಪನ್ಮೂಲ ಅಧಿಕಾರಿ- 8 ಹುದ್ದೆಗಳು
  • ಕಲ್ಯಾಣ ಅಧಿಕಾರಿ- 2 ಹುದ್ದೆಗಳು
  • ಕಾನೂನು ಅಧಿಕಾರಿ- 7 ಹುದ್ದೆಗಳು

ಒಟ್ಟು 303 ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ:
ವಿವಿಧ ಹುದ್ದೆಗಳಿಗೆ ಬಿಇ, ಬಿಟೆಕ್‌ನಿಂದ ವಿವಿಧ ಪದವಿ ಪದವಿಗಳನ್ನು ಕಡ್ಡಾಯ ಶೈಕ್ಷಣಿಕ ಅರ್ಹತೆ ಎಂದು ನಿಗದಿಪಡಿಸಲಾಗಿದ್ದು, ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

ಗರಿಷ್ಠ ವಯೋಮಿತಿ:
ಇಂಜಿನಿಯರಿಂಗ್ ಹುದ್ದೆಗಳಿಗೆ- 25 ವರ್ಷ
ಸೇಫ್ಟಿ ಆಫೀಸರ್, ಕ್ವಾಲಿಟಿ ಕಂಟ್ರೋಲ್ ಆಫೀಸರ್, ಬ್ಲೆಂಡಿಂಗ್ ಆಫೀಸರ್, ಸಿಎ, ಮಾನವ ಸಂಪನ್ಮೂಲ ಅಧಿಕಾರಿ ಮತ್ತು ಕಲ್ಯಾಣ ಅಧಿಕಾರಿ ಹುದ್ದೆಗಳಿಗೆ- 27 ವರ್ಷ
ಕಾನೂನು ಅಧಿಕಾರಿ ಹುದ್ದೆಗೆ- 26 ವರ್ಷ
ಮ್ಯಾನೇಜರ್‌ ಹುದ್ದೆಗಳಿಗೆ- 34 ವರ್ಷ
ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ- 37 ವರ್ಷ

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 1180 ರೂ. ನಿಗದಿ ಮಾಡಲಾಗಿದ್ದು, ಇದಾಗ್ಯೂ SC, ST ಮತ್ತು PWD ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 22, 2022

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.