IAF Agnipath Recruitment 2022: ಇಂದು ಸಂಜೆಯೊಳಗೆ ಭಾರತೀಯ ವಾಯುಪಡೆಯ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
IAF Agnipath Recruitment 2022: ವಿಶೇಷ ಸೂಚನೆ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
IAF Recruitment 2022: ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ವಾಯುಪಡೆ (IAF) ಅಗ್ನಿವೀರ್ ನೇಮಕಾತಿ 2022 ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂದು (ಜುಲೈ 5) ಸಂಜೆ 5 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್ agnipathvayu.cdac.in ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿಶೇಷವೆಂದರೆ ಈ ನೇಮಕಾತಿಯಲ್ಲಿ ಅವಿವಾಹಿತರಾಗಿರುವ ಪುರುಷ ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ನೇಮಕಾತಿ ವಿವರಗಳು:
ಈ ನೇಮಕಾತಿಯು ನಾಲ್ಕು ವರ್ಷಗಳ ಅವಧಿ ಮಾತ್ರ ಆಗಿರಲಿದೆ. ಈ ನೇಮಕ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಗ್ನಿವೀರರಿಗೆ ಐಎಎಫ್‌ನಲ್ಲಿ ಪ್ರತ್ಯೇಕ ಶ್ರೇಣಿಯನ್ನು ರಚಿಸಲಾಗುತ್ತದೆ. ಇದು ಅಸ್ತಿತ್ವದಲ್ಲಿರುವ ಯಾವುದೇ ಶ್ರೇಣಿಗಿಂತ ಭಿನ್ನವಾಗಿರುವುದಿಲ್ಲ. ಅಲ್ಲದೆ ಪ್ರತಿ ಬ್ಯಾಚ್‌ನ 25% ಸೈನಿಕರನ್ನು ನಾಲ್ಕು ವರ್ಷಗಳ ನಂತರ ಐಎಎಫ್‌ನ ನಿಯಮಿತ ಕೇಡರ್‌ಗೆ ಸೇರಿಸಲಾಗುತ್ತದೆ. ಹೀಗಾಗಿ ಆಯ್ಕೆಯಾಗುವ ಅಭ್ಯರ್ಥಿಗಳಲ್ಲಿ ಶೇ. 25 ರಷ್ಟು ಅಗ್ನಿವೀರರು ಭಾರತೀಯ ವಾಯುಪಡೆಯ ಖಾಯಂ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ವಯೋಮಿತಿ: ಡಿಸೆಂಬರ್ 29, 1999 ರಿಂದ ಜೂನ್ 29, 2005 ನಡುವೆ ಜನಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರು. ಅಂದರೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 23 ವರ್ಷಗಳಿಗಿಂತ ಹೆಚ್ಚಿರಬಾರದು.
ಆಯ್ಕೆ ಪ್ರಕ್ರಿಯೆ ಹೇಗೆ? ಭಾರತೀಯ ವಾಯುಪಡೆಯ ಅಗ್ನಿಪಥ್ ಆಯ್ಕೆ ಪ್ರಕ್ರಿಯೆಯು 3 ಹಂತಗಳನ್ನು ಒಳಗೊಂಡಿರುತ್ತದೆ.
- ಹಂತ 1 – ಆನ್‌ಲೈನ್ ಪರೀಕ್ಷೆ.
- ಹಂತ 2 – ಆನ್‌ಲೈನ್ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ಹೊಂದಾಣಿಕೆಯ ಪರೀಕ್ಷೆ 1 ಮತ್ತು 2
- ಹಂತ 3 – ವೈದ್ಯಕೀಯ ಪರೀಕ್ಷೆ.
ಅರ್ಜಿ ಶುಲ್ಕ: ಈ ನೇಮಕಾತಿ ಅರ್ಜಿ ಸಲ್ಲಿಕೆಗಾಗಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ 250 ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಎಲ್ಲಿ? ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್ agnipathvayu.cdac.in ಗೆ ಭೇಟಿ ನೀಡಿ. ಇಲ್ಲಿ ‘Apply Online’ ಗೆ ಹೋಗಿ ಮತ್ತು ಹಂತ ಹಂತವಾಗಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.
ವಿಶೇಷ ಸೂಚನೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.