NVS Recruitment 2022: 1,616 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆರಂಭಿಕ ವೇತನ 44 ಸಾವಿರ ರೂ.

NVS Recruitment 2022: ಆಸಕ್ತ ಅಭ್ಯರ್ಥಿಗಳು ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ navodaya.gov.in ಮೂಲಕ ಅರ್ಜಿ ಸಲ್ಲಿಸಬಹುದು.

NVS Recruitment 2022: 1,616 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆರಂಭಿಕ ವೇತನ 44 ಸಾವಿರ ರೂ.
NVS Recruitment 2022
TV9kannada Web Team

| Edited By: Zahir PY

Jul 04, 2022 | 6:16 PM

NVS Recruitment 2022: ನವೋದಯ ವಿದ್ಯಾಲಯ ಸಮಿತಿ (NVS) 1,616 ಶಿಕ್ಷಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್ navodaya.gov.in ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಜುಲೈ 22 ರವರೆಗೆ ಲಭ್ಯ ಇರಲಿದ್ದು, ಹೀಗಾಗಿ ಆಕಸ್ತರು ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ. ಇನ್ನು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು NVS ದೇಶಾದ್ಯಂತ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBT) ನಡೆಸಲಿದೆ. ಪ್ರಧಾನ ಹುದ್ದೆಗಳಿಗೆ ದೆಹಲಿ NCR ನಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಇದಾದ ಬಳಿಕ ದಾಖಲೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಖಾಲಿ ಹುದ್ದೆಗಳು:

 • ತರಬೇತಿ ಪಡೆದ ಪದವೀಧರ ಶಿಕ್ಷಕರು (TGT): 683 ಹುದ್ದೆಗಳು
 • ಸ್ನಾತಕೋತ್ತರ ಶಿಕ್ಷಕರು (PGT): 397 ಹುದ್ದೆಗಳು
 • ವಿವಿಧ ಶಿಕ್ಷಕರು: 181 ಹುದ್ದೆಗಳು
 • ಪ್ರಧಾನ ಹುದ್ದೆಗಳು: 12 ಹುದ್ದೆಗಳು

ಅರ್ಹತಾ ಮಾನದಂಡ:

 • 1) ಪ್ರಿನ್ಸಿಪಾಲ್: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇ.50 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು. ಇನ್ನು ಪ್ರಾಂಶುಪಾಲರ ಹುದ್ದೆಗೆ ಅಭ್ಯರ್ಥಿಗಳು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.
 • 2) ಶಿಕ್ಷಕರು: ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (CTET) ಉತ್ತೀರ್ಣರಾಗಿರಬೇಕು. ಇದರ ಜೊತೆಗೆ BEd ಪದವಿ ಸಹ ಇರಬೇಕಾಗುತ್ತದೆ. ಹಾಗೆಯೇ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಬರೆಯಲು ಬರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

 • -NVS ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
 • -ನೇಮಕಾತಿ ಲಿಂಕ್‌ಗೆ ಹೋಗಿ
 • -ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ
 • – ಪಾವತಿ ಮಾಡಿ, ಸಬ್​ಮಿಟ್​ ಬಟನ್​ ಒತ್ತಿ
 • – ಪುಟವನ್ನು ಸೇಮ್ ಮಾಡಿ ಮತ್ತು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಅರ್ಜಿ ಶುಲ್ಕ: ಪ್ರಿನ್ಸಿಪಾಲ್ ಹುದ್ದೆಗೆ ಅರ್ಜಿ ಸಲ್ಲಿಸುವವರು 2000 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಹಾಗೆಯೇ PGT ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ 1800 ರೂ. ನಿಗದಿಪಡಿಸಲಾಗಿದೆ. ಇನ್ನು TGT ಮತ್ತು ಇತರ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1500 ರೂಪಾಯಿಗಳನ್ನು ಪಾವತಿಸಬೇಕು.

ವೇತನ:

 • ಪ್ರಧಾನ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 78,800 ರಿಂದ 2,09,200 ರೂ. ನಡುವೆ ವೇತನ ಪಾವತಿಸಲಾಗುತ್ತದೆ.
 • TGT ಹುದ್ದೆಗೆ ಆಯ್ಕೆಯಾದವರಿಗೆ 44,900 ರಿಂದ 1,42,400 ರೂ. ನಡುವೆ ವೇತನ ಇರಲಿದೆ
 • PGT ಹುದ್ದೆಗಳಿಗೆ ಆಯ್ಕೆಯಾದವರಿಗೆ 47,600 ರಿಂದ 1,51,100 ರೂ. ನಡುವೆ ವೇತನ ಸಿಗಲಿದೆ.
 • ವಿವಿಧ ಶಿಕ್ಷಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 44,900 ರಿಂದ 1,42,400 ರೂ. ನಡುವೆ ವೇತನ ಪಾವತಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆಯ ಮಾರ್ಕ್ಸ್​, ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ:

ವಯೋಮಿತಿ:

 • ಪ್ರಾಂಶುಪಾಲರು – ಗರಿಷ್ಠ 50 ವರ್ಷಗಳು
 • PGT – ಗರಿಷ್ಠ 40 ವರ್ಷಗಳು
 • TGT – ಗರಿಷ್ಠ 35 ವರ್ಷಗಳು
 • ಸಂಗೀತ ಶಿಕ್ಷಕ – ಗರಿಷ್ಠ 35 ವರ್ಷಗಳು
 • ಕಲಾ ಶಿಕ್ಷಕ – ಗರಿಷ್ಠ 35 ವರ್ಷಗಳು
 • ಪಿಇಟಿ – ಗರಿಷ್ಠ 35 ವರ್ಷಗಳು
 • ಗ್ರಂಥಪಾಲಕ – ಗರಿಷ್ಠ 35 ವರ್ಷಗಳು

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada