BARC Recruitment: ಪರಮಾಣು ಸಂಶೋಧನಾ ಕೇಂದ್ರದ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
BARC Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BARC ನ ಅಧಿಕೃತ ವೆಬ್‌ಸೈಟ್‌ಗೆ barc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
BARC Recruitment 2022: ಮುಂಬೈನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ (BARC) ಸ್ಟೆನೋಗ್ರಾಫರ್, ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BARC ನ ಅಧಿಕೃತ ವೆಬ್‌ಸೈಟ್‌ಗೆ barc.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಒಟ್ಟು – 89 ಹುದ್ದೆಗಳು
ಸಹಾಯಕ-ಎ ಹುದ್ದೆಗಳು – 72
- UR-20 ಹುದ್ದೆಗಳು
- SC-15 ಹುದ್ದೆಗಳು
- ST-12 ಹುದ್ದೆಗಳು
- OBC-15 ಹುದ್ದೆಗಳು
- EWS-3 ಹುದ್ದೆಗಳು
ಚಾಲಕ – 11 ಹುದ್ದೆಗಳು
- UR-4 ಹುದ್ದೆಗಳು
- SC-2 ಹುದ್ದೆಗಳು
- ST-2 ಹುದ್ದೆಗಳು
- OBC-2 ಹುದ್ದೆಗಳು
- EWS-1 ಹುದ್ದೆ
ಸ್ಟೆನೋಗ್ರಾಫರ್ ಗ್ರೇಡ್-III – 6 ಹುದ್ದೆಗಳು
- UR-3 ಹುದ್ದೆಗಳು
- SC-1 ಹುದ್ದೆ
- OBC-1 ಹುದ್ದೆ
- St-1 ಹುದ್ದೆ
ಅರ್ಹತಾ ಮಾನದಂಡಗಳು:
ಸಹಾಯಕ ಹುದ್ದೆ – ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಸ್ಟೆನೋಗ್ರಾಫರ್ – ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಇಂಗ್ಲಿಷ್ ಸ್ಟೆನೋಗ್ರಾಫ್‌ನಲ್ಲಿ ನಿಮಿಷಕ್ಕೆ 30 ಪದಗಳ ಟೈಪಿಂಗ್ ವೇಗ ಹೊಂದಿರಬೇಕು. ಚಾಲಕ – 10ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
ವಯೋಮಿತಿ:
- ಸಹಾಯಕ ಹುದ್ದೆ – 18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಸ್ಟೆನೋಗ್ರಾಫರ್-18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಚಾಲಕ – 18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 100/- ಪಾವತಿಸಬೇಕಾಗುತ್ತದೆ.
ತಿಂಗಳ ವೇತನ:
- ಸ್ಟೆನೋಗ್ರಾಫರ್ – ರೂ. 25,500/-
- ಚಾಲಕ – ರೂ. 19,000/-
- ಸಹಾಯಕ ಹುದ್ದೆ – ರೂ. 18,000/-
ಪ್ರಮುಖ ದಿನಾಂಕಗಳು: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 31, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Mon, 4 July 22