NCRTC Recruitment 2022: ಎನ್​ಸಿಆರ್​ಟಿಸಿ ನೇಮಕಾತಿ: ತಿಂಗಳ ವೇತನ 2.80 ಲಕ್ಷ ರೂ.

NCRTC Recruitment 2022: ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ncrtc.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

NCRTC Recruitment 2022: ಎನ್​ಸಿಆರ್​ಟಿಸಿ ನೇಮಕಾತಿ: ತಿಂಗಳ ವೇತನ 2.80 ಲಕ್ಷ ರೂ.
NCRTC Recruitment 2022
TV9kannada Web Team

| Edited By: Zahir PY

Jul 03, 2022 | 6:01 PM

NCRTC Recruitment 2022: ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ (NCRTC) ಇಂಜಿನಿಯರಿಂಗ್ ಅಸೋಸಿಯೇಟ್ II ಸಿವಿಲ್ ಮತ್ತು ಗ್ರೂಪ್ ಜನರಲ್ ಮ್ಯಾನೇಜರ್/ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ ಸಿವಿಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. NCRTC ಭಾರತ ಸರ್ಕಾರ ಮತ್ತು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಯುಪಿ ಸರ್ಕಾರಗಳ ನಡುವಿನ ಜಂಟಿ ಉದ್ಯಮವಾಗಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ಅನ್ನು ಸ್ಥಾಪಿಸುವುದು ಇದರ ಕಾರ್ಯವಾಗಿದೆ. ಇದೀಗ ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ncrtc.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರಗಳು:

  • ಚೀಫ್ ಪ್ರಾಜೆಕ್ಟ್ ಮ್ಯಾನೇಜರ್/ಗ್ರೂಪ್ ಜನರಲ್ ಮ್ಯಾನೇಜರ್ ಸಿವಿಲ್- 2 ಹುದ್ದೆಗಳು
  • ವೇತನ- 1,20,000 ದಿಂದ 2,80,000 ರೂ.
  • ಗರಿಷ್ಠ ವಯೋಮಿತಿ- 55 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಶೈಕ್ಷಣಿಕ ಅರ್ಹತೆ- BE/B.Tech ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು. ಜೊತೆಗೆ 20 ವರ್ಷಗಳ ಅನುಭವ ಹೊಂದಿರಬೇಕು.
  • ಇಂಜಿನಿಯರಿಂಗ್ ಅಸೋಸಿಯೇಟ್ – 10 ಹುದ್ದೆಗಳು
  • ವೇತನ – 30,000 ದಿಂದ 1,20,000 ರೂ.
  • ಗರಿಷ್ಠ ವಯೋಮಿತಿ – 35 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಶೈಕ್ಷಣಿಕ ಅರ್ಹತೆ – BE/B.Tech ಇಂಜಿನಿಯರಿಂಗ್ ಮಾಡಿರಬೇಕು. ಅಲ್ಲದೆ ಕನಿಷ್ಠ ಒಂದರಿಂದ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಈ ಹುದ್ದೆಗಳಿಗೆ ಜುಲೈ 18ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada