ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI: Indian Agriculture Research Institute) ವಿವಿಧ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಸಂಸ್ಥೆಯು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 462 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ‘IARI ಸಹಾಯಕ ನೇಮಕಾತಿ 2022’ಗಾಗಿ ಅಧಿಕೃತ ವೆಬ್‌ಸೈಟ್ iari.res.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. IARI ಸಹಾಯಕ ಹುದ್ದೆಗಳಿಗೆ 2022ರ ಮೇ 7ರಿಂದ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು 2022ರ ಜೂನ್ 1ರೊಳಗೆ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ.
IARI ಸಹಾಯಕ ನೇಮಕಾತಿ 2022: ಖಾಲಿ ವಿವರಗಳು
ಸಹಾಯಕ (HQRS): 71 ಹುದ್ದೆಗಳು
ಸಹಾಯಕ (ICAR ಸಂಸ್ಥೆಗಳು): 391 ಪೋಸ್ಟ್‌ಗಳು
IARI ಸಹಾಯಕ ನೇಮಕಾತಿ 2022: IARI ಸಹಾಯಕ ಅರ್ಜಿಯನ್ನು ಭರ್ತಿ ಮಾಡೋದು ಹೇಗೆ?
ಹಂತ 1. ಅಧಿಕೃತ ಪೋರ್ಟಲ್ iari.res.in ಗೆ ಭೇಟಿ ನೀಡಿ
ಹಂತ 2. ಅಧಿಕೃತ ವೆಬ್ಸೈಟ್ನ ಮುಖಪುಟವು ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ.
ಹಂತ 3. ಹೋಮ್ ಸ್ಕ್ರೀನ್‌ನಲ್ಲಿ ಸಂಬಂಧಿತ ಟ್ಯಾಬ್ ICAR (ARI ಸಹಾಯಕ ಅಧಿಸೂಚನೆ 2022) ಅನ್ನು ಹುಡುಕಿ.
ಹಂತ 4. ಅಧಿಸೂಚನೆಯ Pdf ನಲ್ಲಿ ನೀಡಲಾಗಿರುವ ವಿವರಗಳನ್ನು ಪರಿಶೀಲಿಸಿ.
ಹಂತ 5. ‘ಅಪ್ಲೆ ಆನ್ಲೈನ್’ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 6. ಅಗತ್ಯವಿರುವ ಎಲ್ಲಾ ಮಾಹಿತಿಯೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 7. ಶುಲ್ಕ ಪಾವತಿಯ ಹಂತವನ್ನು ಪೂರ್ಣಗೊಳಿಸಿ
ಹಂತ 8. ಛಾಯಾಚಿತ್ರ ಮತ್ತು ಸಹಿಯ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಗದಿತ ಸ್ವರೂಪದಲ್ಲಿ ಅಪ್‌ಲೋಡ್ ಮಾಡಿ
ಹಂತ 9. ಫಾರ್ಮ್ ಅನ್ನು ಸಲ್ಲಿಸಿ
ಹಂತ 10. ‘IARI ಸಹಾಯಕ ಅರ್ಜಿ ನಮೂನೆ 2022’ ಅನ್ನು ಡೌನ್‌ಲೋಡ್ ಮಾಡಿ
ಹಂತ 11. ಮುಂದೆ ದಾಖಲೀಕರಣಕ್ಕಾಗಿ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ
IARI ಸಹಾಯಕ ನೇಮಕಾತಿ 2022: ಅರ್ಜಿ ಶುಲ್ಕ ಎಷ್ಟು?
ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1,000 ರೂ ಪಾವತಿಸಬೇಕು. SC/ST/PWD/ESM/ಮಹಿಳಾ ಅಭ್ಯರ್ಥಿಗಳು 300 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ನೆಟ್ ಬ್ಯಾಂಕಿಂಗ್ ವೀಸಾ/ಮಾಸ್ಟರ್ ಕಾರ್ಡ್/ಡೆಬಿಟ್ ಕಾರ್ಡ್ ಮೂಲಕ ICAR IARI ಅರ್ಜಿಗೆ ಶುಲ್ಕ ಪಾವತಿ ಮಾಡಬಹುದು.
IARI ಸಹಾಯಕ ನೇಮಕಾತಿ 2022: ಆಯ್ಕೆ ಪ್ರಕ್ರಿಯೆ ಹೇಗೆ?
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
IARI ಸಹಾಯಕ ನೇಮಕಾತಿ 2022: ಅರ್ಜಿ ಸಲ್ಲಿಸಲು ಅರ್ಹತೆ ಏನು?
ಆಸಕ್ತ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಇದಲ್ಲದೆ, ಅಭ್ಯರ್ಥಿಯು ಕನಿಷ್ಠ 20 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ 30 ವರ್ಷಗಳು (01/06/2022 ದಿನಾಂಕಕ್ಕೆ ಅನುಗುಣವಾಗಿ)
ಈ ಲೇಖನವನ್ನು ಇಂಗ್ಲೀಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ನೂ ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ