NEET 2022: ಎಎಂಎಫ್​ಎಸ್​ ಬಿಎಸ್​ಸಿ ನರ್ಸಿಂಗ್​ ಕಾಲೇಜುಗಳ ಪ್ರವೇಶ ಪರೀಕ್ಷೆಯಾಗಿ ನೀಟ್ ಬಳಕೆ, ಅರ್ಜಿ ಸಲ್ಲಿಸಲು ಮೇ 16 ಅಂತಿಮ ದಿನಾಂಕ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (National Testing Agency - NTA) ನೀಟ್ 2022ರ ಅರ್ಜಿ ಸಲ್ಲಿಕೆ ವಿಧಿಸಿದ್ದ ಗಡುವನ್ನು ವಿಸ್ತರಿಸಿದೆ (NEET 2022 Application Date Extended). ವಿವಿಧ ಪದವಿ ತರಗತಿಗಳಿ ಪ್ರವೇಶ ದೊರಕಿಸಲು ನಡೆಸುವ NEET UG 2022 ಪರೀಕ್ಷೆಗಳ ಅಂತಿಮ ದಿನಾಂಕ ವಿಸ್ತರಣೆಯಾಗಿದೆ

NEET 2022: ಎಎಂಎಫ್​ಎಸ್​ ಬಿಎಸ್​ಸಿ ನರ್ಸಿಂಗ್​ ಕಾಲೇಜುಗಳ ಪ್ರವೇಶ ಪರೀಕ್ಷೆಯಾಗಿ ನೀಟ್ ಬಳಕೆ, ಅರ್ಜಿ ಸಲ್ಲಿಸಲು ಮೇ 16 ಅಂತಿಮ ದಿನಾಂಕ
ನೀಟ್ ಪರೀಕ್ಷೆ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 04, 2022 | 1:22 PM

ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (National Testing Agency – NTA) ನೀಟ್ 2022ರ ಅರ್ಜಿ ಸಲ್ಲಿಕೆ ವಿಧಿಸಿದ್ದ ಗಡುವನ್ನು ವಿಸ್ತರಿಸಿದೆ (NEET 2022 Application Date Extended). ವಿವಿಧ ಪದವಿ ತರಗತಿಗಳಿ ಪ್ರವೇಶ ದೊರಕಿಸಲು ನಡೆಸುವ NEET UG 2022 ಪರೀಕ್ಷೆಗಳ ಅಂತಿಮ ದಿನಾಂಕ ವಿಸ್ತರಣೆಯಾಗಿದೆ. ಈ ಹಿಂದೆ ಘೋಷಣೆಯಾಗಿದ್ದಂತೆ ಮೇ 6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಎಎಂಎಫ್​ಎಸ್ (Armed Forces Medical Services – AMFS) ಮೂಲಕ ಬಿಎಸ್​ಸಿ ನರ್ಸಿಂಗ್ ಪದವಿ ಪಡೆಯಲು ಬಯಸುವ ಅಭ್ಯರ್ಥಿಗಳ ವಿನಂತಿ ಮೇರೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. ಆದರೆ ಪರೀಕ್ಷೆಯ ದಿನಾಂಕ ಬದಲಾಗಿಲ್ಲ. ಪರೀಕ್ಷೆಗಳು ಈ ಮೊದಲು ನಿಗದಿಯಾಗಿದ್ದಂತೆ ಜುಲೈ 17ರಂದೇ ನಡೆಯಲಿದೆ. ಈವರೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸದ ವಿದ್ಯಾರ್ಥಿಗಳು neet.nta.ac.in ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬಳಕೆಯಾಗುವ ನೇರ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿಯೂ ಕೊಡಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ವಿಧಿಸಿದ್ದ ಕೊನೆಯ ದಿನಾಂಕ ವಿಸ್ತರಣೆಯನ್ನು ಎನ್​ಟಿಎ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಣೆಯೊಂದನ್ನು ಪ್ರಕಟಿಸುವ ಮೂಲಕ ದೃಢಪಡಿಸಿದೆ. NEET UG 2022 ಪರೀಕ್ಷೆ ಫಲಿತಾಂಶವನ್ನು ಆಧರಿಸಿ ಎಎಂಎಫ್​ಎಸ್​ ಸಹ ಪ್ರವೇಶ ನೀಡುವುದಾಗಿ ಘೋಷಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಪರೀಕ್ಷಾ ಸಂಸ್ಥೆಯು NEET UG 2022 ಪರೀಕ್ಷೆಗಳ ಗಡುವು ವಿಸ್ತರಿಸಿದೆ. ಈವರೆಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ತಕ್ಷಣ ನೀಟ್ ವೆಬ್​ಸೈಟ್​ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಒಟ್ಟು 220 ಅಭ್ಯರ್ಥಿಗಳಿಗೆ ಎಎಂಎಫ್​ಎಸ್​ ಕಾಲೇಜುಗಳಲ್ಲಿ ಪ್ರವೇಶವಿದೆ. ಈ ಪೈಕಿ ಪುಣೆ 40, ಕೊಲ್ಕತ್ತಾ 30, ಮುಂಬೈ 40, ದೆಹಲಿ 30, ಲಖನೌ 40, ಬೆಂಗಳೂರು 40 ಅಭ್ಯರ್ಥಿಗಳಿಗೆ ಪ್ರವೇಶ ಲಭ್ಯವಿದೆ.

NEET 2022 ಮೂಲಕ ಪ್ರವೇಶ ನೀಡುವ ಎಎಂಎಫ್​ಎಸ್ ಕಾಲೇಜುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಸೇನೆಯ ನೇಮಕಾತಿ ವೆಬ್​ಸೈಟ್​ಗೆ ಭೇಟಿ ನೀಡಿ. ಇದರ ಜೊತೆಗೆ ನೀಟ್​ ವೆಬ್​ಸೈಟ್​ನಲ್ಲಿಯೂ ಸಾಕಷ್ಟು ಮಾಹಿತಿ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 011-40759000 ಅಥವಾ ಇಮೇಲ್ neet@nta.ac.in ಮೂಲಕವೂ ಹೆಚ್ಚಿನ ಮಾಹಿತಿ ಪಡೆಯಬಹುದು.

ಸಂಪೂರ್ಣ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: NEET UG Exam 2022 Date: ನೀಟ್​ ಪದವಿಪೂರ್ವ ಪರೀಕ್ಷೆ ದಿನಾಂಕ ಘೋಷಣೆ; ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ

ಇದನ್ನೂ ಓದಿ: NEET PG 2022: ನೀಟ್​ ಪಿಜಿ ಅಪ್ಲಿಕೇಷನ್ ತಿದ್ದುಪಡಿ ವಿಂಡೋ ಓಪನ್; ಬದಲಾವಣೆಗಳನ್ನು ಮಾಡಲು ಹೀಗೆ ಮಾಡಿ

Published On - 1:21 pm, Wed, 4 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ