IBPS Clerk Recruitment 2023: ಐಬಿಪಿಎಸ್​ ನೇಮಕಾತಿ: ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Jun 28, 2023 | 1:51 PM

IBPS Clerk Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿರಬೇಕು. ಹಾಗೆಯೇ ಕಂಪ್ಯೂಟರ್ ಬಳಕೆಯಲ್ಲಿ ಪ್ರವೀಣರಾಗಿರಬೇಕು

IBPS Clerk Recruitment 2023: ಐಬಿಪಿಎಸ್​ ನೇಮಕಾತಿ: ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
IBPS Clerk Recruitment 2023
Follow us on

IBPS Clerk Recruitment 2023: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಬ್ಯಾಂಕ್‌ಗಳಲ್ಲಿನ ಕ್ಲರ್ಕ್​ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ibps.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ನೇಮಕಾತಿ ವಿವರಗಳು:

  • ಬ್ಯಾಂಕ್ ಹೆಸರು : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ( IBPS )
  • ಉದ್ಯೋಗ ಸ್ಥಳ: ಅಖಿಲ ಭಾರತ
  • ಹುದ್ದೆಗಳ ಹೆಸರು: ಕ್ಲರ್ಕ್

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿರಬೇಕು. ಹಾಗೆಯೇ ಕಂಪ್ಯೂಟರ್ ಬಳಕೆಯಲ್ಲಿ ಪ್ರವೀಣರಾಗಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯಸ್ಸು 28 ವರ್ಷಕ್ಕಿಂತ ಹೆಚ್ಚಿರಬಾರದು.

ಮಾಸಿಕ ವೇತನ:

ಈ ಹುದ್ದೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ, ವೈದ್ಯಕೀಯ ಭತ್ಯೆ ಮತ್ತು ಸಾರಿಗೆ ಭತ್ಯೆಯೊಂದಿಗೆ ತಿಂಗಳಿಗೆ ರೂ. 19,900 ರಿಂದ ರೂ. 47920 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ ಕರೆಯಲಾಗುತ್ತದೆ. ಇದಾದ ಬಳಿಕ ಮುಖ್ಯ ಪರೀಕ್ಷೆ ಇರಲಿದ್ದು, ಆ ಬಳಿಕ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-07-2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 21-07-2023
  • ಪರೀಕ್ಷೆಯ ಪೂರ್ವ ತರಬೇತಿಯ ದಿನಾಂಕ: ಆಗಸ್ಟ್ 2023
  • ಆನ್‌ಲೈನ್ ಪರೀಕ್ಷೆಯ ದಿನಾಂಕ – ಪೂರ್ವಭಾವಿ: ಆಗಸ್ಟ್/ಸೆಪ್ಟೆಂಬರ್ 2023
  • ಆನ್‌ಲೈನ್ ಪರೀಕ್ಷೆಯ ಫಲಿತಾಂಶದ ದಿನಾಂಕ – ಪೂರ್ವಭಾವಿ: ಸೆಪ್ಟೆಂಬರ್/ಅಕ್ಟೋಬರ್ 2023
  • ಆನ್‌ಲೈನ್ ಪರೀಕ್ಷೆಯ ದಿನಾಂಕ: ಅಕ್ಟೋಬರ್/2023

ಇದನ್ನೂ ಓದಿ: Railway Recruitment 2023: ರೈಲ್ವೆ ನೇಮಕಾತಿ: ಮಾಸಿಕ ವೇತನ 56 ಸಾವಿರ ರೂ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.